• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಲಬುರಗಿ-ಬೆಂಗಳೂರು ಅಲಯನ್ಸ್‌ ಏರ್ ವೇಳಾಪಟ್ಟಿ

|

ಕಲಬುರಗಿ, ಡಿಸೆಂಬರ್ 11 : ಕಲಬುರಗಿ-ಬೆಂಗಳೂರು ನಡುವೆ ಅಲಯನ್ಸ್ ಏರ್ ವಿಮಾನ ಹಾರಾಟ ಆರಂಭವಾಗಲಿದೆ. ಡಿಸೆಂಬರ್ 15ರಂದು ವಿಮಾನ ಸಂಚಾರ ಆರಂಭವಾಗುವ ನಿರೀಕ್ಷೆ ಇದ್ದು, ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಅಲಯನ್ಸ್ ಏರ್ ಕೇಂದ್ರ ಸರ್ಕಾರದ ಅಂಗ ಸಂಸ್ಥೆ. ಕಲಬುರಗಿ- ಬೆಂಗಳೂರು ನಡುವೆ ವಾರದ ಏಳು ದಿನ ಅಲಯನ್ಸ್ ಏರ್ ವಿಮಾನ ಹಾರಾಟ ನಡೆಸಲಿದೆ. 72 ಸೀಟುಗಳ ವಿಮಾನ ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.

ಮೈಸೂರು-ಕಲಬುರಗಿ ನಡುವೆ ಅಲಯನ್ಸ್ ಏರ್ ಹಾರಾಟ

ಈಗಾಗಲೇ ಸ್ಟಾರ್ ಏರ್‌ನ ವಿಮಾನ ಶುಕ್ರವಾರ, ಭಾನುವಾರ ಮತ್ತು ಸೋಮವಾರ ಕಲಬುರಗಿ-ಬೆಂಗಳೂರು ನಡುವೆ ಸಂಚಾರ ನಡೆಸುತ್ತಿದೆ. ಈಗ ಮತ್ತೊಂದು ವಿಮಾನ ಎರಡೂ ನಗರಗಳ ನಡುವೆ ಸಂಪರ್ಕವನ್ನು ಕಲ್ಪಿಸಲಿದೆ.

ಕಲಬುರಗಿ; ಜಯದೇವದಿಂದ 300 ಹಾಸಿಗೆಯ ಆಸ್ಪತ್ರೆ ನಿರ್ಮಾಣ

ವೇಳಾಪಟ್ಟಿ: ಅಲಯನ್ಸ್ ಏರ್ ವಿಮಾನ ಪ್ರತಿದಿನ ಬೆಳಗ್ಗೆ 11.15ಕ್ಕೆ ಕಲಬುರಗಿಯಿಂದ ಹೊರಡಲಿದೆ. ಮಧ್ಯಾಹ್ನ 12.05ಕ್ಕೆ ಬೆಂಗಳೂರನ್ನು ತಲುಪಲಿದೆ. ವಿಮಾನ ಹಾರಾಟದ ದಿನಾಂಕವನ್ನು ಇನ್ನು ಅಂತಿಮಗೊಳಿಸಬೇಕಿದೆ.

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ರೆಕ್ಕೆ ಕಟ್ಟಿದ ಸರ್ಕಾರ!

ಇಂಡಿಗೋ ಏರ್‌ಲೈನ್ಸ್ ಕಲಬುರಗಿ ಮತ್ತು ಹೈದರಾಬಾದ್ ನಡುವೆ ವಿಮಾನ ಸಂಚಾರ ಆರಂಭಿಸಲು ಒಪ್ಪಿಗೆ ನೀಡಿದೆ. ಅಲಯನ್ಸ್ ಏರ್ ಮೈಸೂರು-ಕಲಬುರಗಿ ನಡುವೆಯೂ ವಿಮಾನ ಸಂಪರ್ಕ ಕಲ್ಪಿಸಲು ಮುಂದಾಗಿದೆ.

ನವೆಂಬರ್ 22ರಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕಲಬುರಗಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದ್ದರು. ಕರ್ನಾಟಕ ಸರ್ಕಾರ 175.57 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿತ್ತು.

ಒಟ್ಟು 742.23 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಏರ್ ಬಸ್‌ನಂತಹ ದೊಡ್ಡ ವಿಮಾನಗಳು ಸಹ ಇಳಿಯಲು ಸಹಾಯಕವಾಗುವಂತೆ ರನ್ ವೇ ನಿರ್ಮಾಣ ಮಾಡಲಾಗಿದೆ.

English summary
Alliance air will start Kalaburagi-Bengaluru flight service from December 14, 2019. Here are the schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X