ಕಲಬುರಗಿ-ಬೆಂಗಳೂರು ವಿಮಾನ ಸೇವೆ ಪುನರಾರಂಭ

ಕಲಬುರಗಿ, ಮೇ 25:ಕೊರೊನಾ ವೈರಸ್ ಭೀತಿಯಿಂದಾಗಿ ದೇಶದಾದ್ಯಂತ ಲಾಕ್ ಡೌನ್ ನಿಯಮ ಜಾರಿಯಲ್ಲಿತ್ತು. ಇದರಿಂದಾಗಿ ವಿಮಾನ ಸೇವೆಯನ್ನು ನಿಲ್ಲಿಸಲಾಗಿತ್ತು. ಆದರೆ ಈಗ ಲಾಕ್ ಡೌನ್ ನಿಯಮ ಸಡಿಲಿಕೆಯಾಗಿದ್ದು, ದೇಶೀಯ ವಿಮಾನ ಸೇವೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

Recommended Video

      2ತಿಂಗಳುಗಳ ಬಳಿಕ ಹಾರಾಡುತ್ತಿವೆ ಪ್ರಾದೇಶಿಕ ವಿಮಾನಗಳು | Domestic Flight Resumed | Kalburgi

      ಅದರಂತೆ ಎರಡು ತಿಂಗಳ ನಂತರ ಕಲಬುರಗಿಗೆ ವಿಮಾನ ಸೇವೆ ಪುನರಾರಂಭಗೊಳ್ಳುತ್ತಿದೆ. ಸೋಮವಾರ ಬೆಳಿಗ್ಗೆ 9.45 ಕ್ಕೆ ಬೆಂಗಳೂರಿನ ಕೆಐಎಎಲ್ ಏರ್‌ಪೋಟ್೯ನಿಂದ ಸ್ಟಾರ್ ಏರ್ ಸಂಸ್ಥೆಯ ವಿಮಾನ ಟೆಕಾಫ್ ಆಗಲಿದ್ದು, ಬೆಳಿಗ್ಗೆ 10.20 ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ.

      ಪ್ರಯಾಣಿಕರು ಆರೋಗ್ಯ ಸೇತು ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿಮಾನ ಟೆಕಾಫ್ ಆಗುವ ಎರಡು ಗಂಟೆ ಮುನ್ನ ಬೋರ್ಡಿಂಗ್ ಮಾಡಿಕೊಂಡು‌ ಪ್ರಯಾಣಿಕರು ಆರೋಗ್ಯ ತಪಾಸಣೆಗೊಳಪಡಲು ಸೂಚನೆ ನೀಡಿದೆ.

      Kalaburagi Airport Reopened From Today

      ಈಗಾಗಲೇ ಏರ್‌ಪೋಟ್೯ ಒಳಾವರಣದಲ್ಲಿ ಸ್ಯಾನಿಟರಿಂಗ್ ಕಾರ್ಯ ಆರಂಭ ಮಾಡಿದ್ದು, ಬರೋಬ್ಬರಿ ಎರಡು ತಿಂಗಳ ಲಾಕ್‌ಡೌನ್ ನಂತರ ವಿಮಾನ ನಿಲ್ದಾಣ ಹಾಗೂ ವಿಮಾನಗಳು ಪುನರಾರಂಭಗೊಳ್ಳುತ್ತಿವೆ. ವಿಮಾನ ನಿಲ್ದಾಣವು ಕಲಬುರಗಿ ನಗರ ಹೊರವಲಯದ ಶ್ರೀನಿವಾಸ ಸರಡಗಿ ಗ್ರಾಮದ ಬಳಿ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+