ಮಾತು ಕೇಳದಿದ್ದರೆ ಅಧಿಕಾರಿಗಳಿಗೆ ಒದಿತೀನಿ ಎಂದ ಜ್ಯೂನಿಯರ್ ಖರ್ಗೆ

Recommended Video

      ಮಾತು ಕೇಳದಿದ್ದರೆ ಅಧಿಕಾರಿಗಳಿಗೆ ಒದಿತೀನಿ ಎಂದ ಪ್ರಿಯಾಂಕ್ ಖರ್ಗೆ | Oneindia Kannada

      ಕಲಬುರಗಿ, ಸೆಪ್ಟೆಂಬರ್ 14: ನಾನು ಯಾರ ಕಾರ್ಯಕ್ರಮವನ್ನು ಉದ್ಘಾಟಿಸಬೇಕು, ಅಡಿಗಲ್ಲು ಹಾಕಬೇಕು ಅನ್ನೋದನ್ನು ನಿರ್ಧರಿಸಲು ನಿವ್ಯಾರು, ನನ್ನ ಗಮನಕ್ಕೆ ಬಾರದೆ ಎಷ್ಟು ಕೆಲಸ ಮಾಡಿದ್ದೀರಿ ಹೇಳಿ, ಹೀಗೆ ಮಾಡಿದರೆ ಒದಿತೀನಿ ಇದು ಸಚಿವ ಪ್ರಿಯಾಂಕ್ ಖರ್ಗೆ ಮಾತುಗಳು.

      ಕಲಬುರಗಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪ್ರಿಯಾಂಕ್ ಖರ್ಗೆ ಅವರಿಂದ ಬಂದ ಮಾತುಗಳಿವು, ಸಭೆ ಆರಂಭವಾಗುತ್ತಿದ್ದಂತೆ ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರ ಆರ್‌.ಪಿ. ಜಾಧವ ಅವರನ್ನು ವೇದಿಕೆ ಮುಂದೆ ಕರೆದು ಏನು ಕೆಲಸಗಳ ಬಗ್ಗೆ ಮಾಹಿತಿ ಕೇಳಿದರೆ ನೀಡುತ್ತಿಲ್ಲ, ಯಾಕೆ, ಇಲ್ಲಿ ಇರುತ್ತಾ ಎಷ್ಟು ವರ್ಷ ಆಯ್ತು ಎಂದು ತರಾಟೆ ತೆಗೆದುಕೊಂಡಿದ್ದಾರೆ.

      ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ನಿಮ್ಮಂತಹ ನೂರು ಅಧಿಕಾರಿಗಳಿಗೆ ಒದಿತೀನಿ, ನಿಮ್ಮದೆಲ್ಲ ಹೆಚ್ಚಾಗಿದೆ, ನನ್ನ ಗಮನಕ್ಕೆ ಬಾರದೆ ಯಾವ ಕೆಲಸವನ್ನೂ ಮಾಡುವಂತಿಲ್ಲ, ಮಾಡಿದರೆ ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉಳಿದ ಅಧಿಕಾರಿಗಳಿಗೂ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

      Junior Kharge threats official to kick him

      ಡಿಸಿ ಹಾಗೂ ಆರ್ ಸಿ ಕುರಿತು ಎಲ್ಲ ಇಲಾಖೆಯವರಿಗೆ ಶಿಷ್ಟಾಚಾರ ಪಾಲಿಸಲು ಸೂಚನೆ ನೀಡಲಾಗಿದೆ ಎಂದು ಸಮಾಧಾನಪಡಿಸಲಾಯಿತು. ಆದರೂ ಇಡೀ ಸಭೆಯಲ್ಲಿ ಈ ವಿಚಾರ ಕುರಿತು ಚರ್ಚೆಯಾಯಿತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+