ಕಲಬುರಗಿ : ಐಆರ್‌ಬಿ ಮುಖ್ಯಪೇದೆ ಆತ್ಮಹತ್ಯೆಗೆ ಶರಣು

Posted By:
Subscribe to Oneindia Kannada

ಕಲಬುರಗಿ, ಜುಲೈ 22 : ವರ್ಗಾವಣೆಗೆ ಹಿರಿಯ ಅಧಿಕಾರಿಗಳು ಒಪ್ಪದ ಕಾರಣ ಭಾರತೀಯ ಮೀಸಲು ಬೆಟಾಲಿಯನ್‌ ಮುಖ್ಯ ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರ್ಗಾವಣೆಗೆ ಹಿರಿಯ ಅಧಿಕಾರಿಗಳು 1 ಲಕ್ಷ ರೂ. ಲಂಚ ಕೇಳಿದ್ದರು ಎಂಬ ಆರೋಪವಿದೆ.

ಕಲಬುರಗಿ ಹೊರವಲಯದ ಪೊಲೀಸ್ ವಸತಿ ಗೃಹದಲ್ಲಿ ಶುಕ್ರವಾರ ಬೆಳಗ್ಗೆ ಅಣ್ಣಾರಾವ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಣ್ಣಾರಾವ್ ವಿಜಯಪುರದ ಭಾರತೀಯ ಮೀಸಲು ಬೆಟಾಲಿಯನ್ (ಐಆರ್‌ಬಿ) ಮುಖ್ಯಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.[ಕರ್ನಾಟಕದ ಪೊಲೀಸರು ಸಮೂಹಸನ್ನಿಗೊಳಗಾಗಿದ್ದಾರಾ?]

IRB head constable commits suicide in Kalaburagi

1993ರಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಪೇದೆಯಾಗಿ ನೇಮಕವಾಗಿದ್ದ ಅಣ್ಣಾರಾವ್ ಅವರನ್ನು
13 ತಿಂಗಳ ಹಿಂದೆ ವಿಜಯಪುರದ ಭಾರತೀಯ ಮೀಸಲು ಬೆಟಾಲಿಯನ್ (ಐಆರ್‌ಬಿ) ಮುಖ್ಯಪೇದೆಯಾಗಿ ವರ್ಗಾವಣೆ ಮಾಡಲಾಗಿತ್ತು.

Also Read : ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline

ಆದರೆ, ಅನಾರೋಗ್ಯದ ಕಾರಣ ಅಣ್ಣಾರಾವ್ ಅವರು ಕಲಬುರಗಿಗೆ ವರ್ಗಾವಣೆ ಕೇಳಿದ್ದರು. ಒಮ್ಮೆ ಬೆಂಗಳೂರಿಗೆ ಹೋಗಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಬಂದಿದ್ದರು. ಅಣ್ಣಾರಾವ್ ಅವರ ವರ್ಗಾವಣೆಗೆ 1 ಲಕ್ಷ ರೂ. ಲಂಚ ಕೇಳಲಾಗಿತ್ತು ಎಂಬ ಆರೋಪವಿದೆ.

Read also : ಚಿಕ್ಕಮಗಳೂರು ಡಿವೈಎಸ್ ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ

ಕಲಬುರಗಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಜುಲೈ 19ರಂದು ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆ ಮಹಿಳಾ ಪಿಎಸ್‌ಐ ರೂಪಾ ತಂಬದ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ಜುಲೈ 5ರಂದು ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಮತ್ತು ಜುಲೈ 7ರಂದು ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian Reserve Battalion (IRB) head constable Annarao committed suicide in Kalaburagi police quarters on Friday, July 22, 2016 morning.
Please Wait while comments are loading...