ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾವ ಕಾನೂನಿನಡಿ ರಾಹುಲ್ ಬಂಧಿಸುತ್ತಾರೆ?; ಪ್ರಿಯಾಂಕ್ ಖರ್ಗೆ

|
Google Oneindia Kannada News

ಕಲಬುರಗಿ, ಜೂ15: "ರಾಹುಲ್‌ ಗಾಂಧಿ ಮೂರನೇ ದಿನ ಕೂಡ ವಿಚಾರಣೆ ಹೋಗಿದ್ದಾರೆ. ನ್ಯಾಷನಲ್‌ ಹೆರಾಲ್ಡ್‌ನ ಯಾವ ಕೇಸ್‌ನಲ್ಲಿ ವಿಚಾರಣೆ ಮಾಡುತ್ತಿದ್ದಾರೆ ಎಂಬುದು ಬಿಜೆಪಿಯವರಿಗೂ ತಿಳಿದಿಲ್ಲ, ಇಡಿಯವರಿಗೂ ತಿಳಿದಿಲ್ಲ" ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜಾರಿ ನಿರ್ದೇಶನಾಲಯ ಯಾರ ಅಣತಿಯಂತೆ ನಡೆಯುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಮೊದಲು ಮಾಜಿ ಸಚಿವ ಕೆ. ಎಸ್‌. ಈಶ್ವರಪ್ಪ ಮೇಲೆ ಕೇಸ್‌ ದಾಖಲಾಗಿತ್ತು. ಮೊದಲು ಅದರ ತನಿಖೆ ಪೂರ್ಣಗೊಳಿಸಲಿ" ಎಂದು ಸವಾಲು ಹಾಕಿದರು.

ಪಿಎಸ್ಐ ನೇಮಕಾತಿ ಅಕ್ರಮ: ಪೇದೆ ಇಸ್ಮಾಯಿಲ್ ಜಾಮ್‌ದಾರ್ ಸೆರೆ ಪಿಎಸ್ಐ ನೇಮಕಾತಿ ಅಕ್ರಮ: ಪೇದೆ ಇಸ್ಮಾಯಿಲ್ ಜಾಮ್‌ದಾರ್ ಸೆರೆ

"ರಾಹುಲ್ ಗಾಂಧಿ ಎರಡು ದಿನ ವಿಚಾರಣೆಗೆ ಹಾಜರಾಗಿದ್ದರು. ಇನ್ನೂ ಪ್ರಶ್ನೆಗಳು ಪೂರ್ಣಗೊಳ್ಳದ ಕಾರಣ ಇಂದು ಕೂಡ ವಿಚಾರಣೆಯನ್ನು ಎದುರಿಸಬೇಕಿದೆ" ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

How Directorate Of Enforcement Will Arrest Rahul Gandhi Asked Priyank Kharge

ಯಾವ ಕಾನೂನಿನಡಿ ಬಂಧನ ಮಾಡುತ್ತಾರೆ?; ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸತತ ಮೂರನೇ ದಿನವಾದ ಇಂದು ಮತ್ತೆ ಜಾರಿ ನಿರ್ದೇಶನಾಲಯದ ಎದುರು ವಿಚಾರಣೆ ಹಾಜರಾಗಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪವನ್ನು ಎದುರಿಸುತ್ತಿದ್ದಾರೆ. ಸೋನಿಯಾ ಗಾಂಧಿಗೂ ಇಡಿ ಸಮನ್ಸ್ ನೀಡಿದ್ದು, ಕೊರೋನಾ ಕಾರಣದಿಂದಾಗಿ ಅವರು ವಿಚಾರಣೆಗೆ ಗೈರಾಗಿದ್ದಾರೆ.

How Directorate Of Enforcement Will Arrest Rahul Gandhi Asked Priyank Kharge

"ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ಕಾರ್ಯಕರ್ತರು ದೇಶದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ಯಾವ ಕಾನೂನಿನಡಿ ಜಾರಿ ನಿರ್ದೇಶನಾಲಯದವರು ಬಂಧನ ಮಾಡುತ್ತಾರೆ? ಎಂಬುದು ಮೊದಲು ತಿಳಿಸಬೇಕು" ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ ಖರ್ಗೆ ಪ್ರಶ್ನಿಸಿದರು.

ಅಂತರ್ಜಾತಿ ವಿವಾಹ : ಯುವಕನ ಪೋಷಕರ ಮೇಲೆ ಮಾರಣಾಂತಿಕ ಹಲ್ಲೆ, ಆಸ್ಪತ್ರೆಗೆ ದಾಖಲುಅಂತರ್ಜಾತಿ ವಿವಾಹ : ಯುವಕನ ಪೋಷಕರ ಮೇಲೆ ಮಾರಣಾಂತಿಕ ಹಲ್ಲೆ, ಆಸ್ಪತ್ರೆಗೆ ದಾಖಲು

ಸಾಲ ಕೊಡಬಾರದು ಎಂದು ಎಲ್ಲಾದರೂ ಕಾನೂನು ಇದೆಯಾ?; "90 ಕೋಟಿ ರೂ. ಸಾಲ ನ್ಯಾಷನಲ್‌ ಹೆರಾಲ್ಡ್‌ಗೆ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ, ಸಾಲ ಕೊಡಬಾರದು ಎಂದು ಎಲ್ಲಾದರೂ ಕಾನೂನು ಇದೆಯಾ?. ಅವರು ಕೊಟ್ಟ ಹಣದಲ್ಲಿ 60 ಕೋಟಿ ರೂ. ಖರ್ಚಾಗಿದೆ. ಉಳಿದ ಹಣ ಮೂಲ ಸೌಕರ್ಯ ಕಲ್ಪಿಸಿಕೊಳ್ಳಲು ನೀಡಿದ್ದಾರೆ" ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

How Directorate Of Enforcement Will Arrest Rahul Gandhi Asked Priyank Kharge

"ಚುನಾವಣೆ ಸಮೀಪ ಬರುತ್ತಿದ್ದಂತೆ ಇವರಿಗೆ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಎದ್ದು ಕಾಣುತ್ತಾರೆ. ಕೇವಲ ಮಾನಸಿಕ ಹಿಂಸೆ ನೀಡಲು ಈ ವಿಚಾರಣೆ ಎಂಬ ನಾಟಕ ಮುಂದುವರಿದಿದೆ. ಎಲ್ಲೆಡೆ ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ" ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

English summary
How directorate of enforcement will arrest Congress leader Rahul Gandhi in national herald case asked former minister Priyank Kharge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X