ಶಾಸಕರು ಮಾರಾಟವಾದರೆ ಏನಾಗುತ್ತದೆ ಎಂಬ ಸಂದೇಶ ರವಾನಿಸಿ:ಡಿಸಿಎಂ ಕರೆ

ಕಲಬುರಗಿ, ಮೇ.08:ಶಾಸಕನೊಬ್ಬ ಜನಮನ್ನಣೆ, ಪ್ರೀತಿ ಗಳಿಸುತ್ತಾರೆ. ಪಕ್ಷ ಆತನ ಬೆನ್ನಿಗೆ ನಿಲ್ಲುತ್ತದೆ. ಆದರೆ ಆ ವ್ಯಕ್ತಿ ಹಣ ತಗೊಂಡು ನಮ್ಮ ಕೈಗೆ ಸಿಗದೆ ದೂರದ ಬಾಂಬೆನಲ್ಲಿ ಹೋಗಿ ಬಿಜೆಪಿ ಪಕ್ಷ ಸೇರುವುದಾಗಿ ಹೇಳಿ ಇಲ್ಲಿ ಬಂದು ರಾಜೀನಾಮೆ ಕೊಡುತ್ತಾರೆ ಎಂದರೆ ಮತದಾರರ ನಂಬಿಕೆ ಮಣ್ಣು ಪಾಲು ಮಾಡಿದಂತೆ.ಇದು ಸರಿಯಲ್ಲ ಎಂದು ಡಿಸಿಎಂ ಡಾ ಜಿ ಪರಮೇಶ್ವರ ವಿಷಾದ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಿರಿಯಾಣದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಶಾಸಕರು ಮಾರಾಟವಾದರೆ ಏನು ಗತಿ ಕಾಣುತ್ತಾರೆ ಎನ್ನುವ ಸ್ಪಷ್ಟ ಸಂದೇಶವನ್ನು‌ ಜಾಧವ್ ನನ್ನು ಸೋಲಿಸುವ ಮೂಲಕ ನೀವು ಇಡೀ ರಾಜ್ಯಕ್ಕೆ ಕಳಿಸಬೇಕು ಎಂದು ಮನವಿ ಮಾಡಿದರು.

ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕು. ಇಲ್ಲಿ ಒಬ್ಬ ಕ್ರಿಯಾಶೀಲ ಶಾಸಕರ ಅಗತ್ಯವಿದೆ. ಸುಭಾಷ್ ರಾಠೊಡ್ ಅಂತಹ ವ್ಯಕ್ತಿ. ಹಾಗಾಗಿ ನೀವು ಅವರಿಗೆ ಮತ ನೀಡಿ ಎಂದು ಕರೆ ನೀಡಿದರು.

G. Parameshwara talked about Umesh Jadhav in Miriyana

ಜಗಜ್ಯೋತಿ ಬಸವೇಶ್ವರ ಅವರ ತತ್ವದ ಅಡಿಯಲ್ಲಿ ಕಾಂಗ್ರೆಸ್ ನಂಬಿಕೆಯಿಟ್ಟಿದೆ. ಆದರೆ, ಬಿಜೆಪಿಗೆ ಮುಸಲ್ಮಾನರು, ಕ್ರಿಶ್ಚಿಯನ್‌ ರು ಬೇಡ ಬರೀ ಹಿಂದುತ್ವ ಎಂದು ಹೇಳುತ್ತಾರೆ ಇದು ಸಂವಿಧಾನ ವಿರೋಧಿ ಧೋರಣಯಲ್ಲವೇ? ಎಂದು ಡಿಸಿಎಂ ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ 27 ಲಕ್ಷ ರೈತರ ತಲಾ 50 ಸಾವಿರ ಸಾಲ ಮನ್ನಾ ಮಾಡಿದ್ದಾರೆ. ಮೋದಿಯವರೇ, ಯಡಿಯೂರಪ್ಪನವರೇ ನೀವೇನೂ ಮಾಡಿದಿರಿ. ಕಾಂಗ್ರೆಸ್ ನಾಯಕರನ್ನು ಬಾಯಿಗೆ ಬಂದಂತೆ ಬೈಯ್ಯವುದೇ ಕೆಲಸವಾಗಿದೆ ನಿಮಗೆ. ಐದು ವರ್ಷಗಳ ಅಮೂಲ್ಯ‌ ಸಮಯದಲ್ಲಿ ಬರೀ ಸುಳ್ಳು ಹೇಳಿಕೊಂಡು ಕಾಲಹರಣ ಮಾಡಿ‌ ಈಗ ಸೈನಿಕರ ಹೆಸರೇಳಿ ಮತ ಕೇಳುವಂತ ನೀಚ ರಾಜಕಾರಣ ಮಾಡುತ್ತಿದ್ದೀರಿ ಎಂದು ಟೀಕಿಸಿದರು.

G. Parameshwara talked about Umesh Jadhav in Miriyana

ಚಿಂಚೋಳಿ ಕುಂದುಗೋಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸರಕಾರ ಬೀಳುತ್ತೆ ಎಂದು ಬಿಜೆಪಿಯವರು ಭ್ರಮಿಸಿದ್ದಾರೆ.ಇದು ಕೇವಲ ಭ್ರಮೆಯಾಗಲಿದೆ. ಐದು ವರ್ಷ ಕಾಲ ಮೈತ್ರಿ ಸರಕಾರ ಆಡಳಿತ ನಡೆಸುತ್ತದೆ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+