ಕಲಬುರಗಿ: ಬಗೆಹರಿಯುತ್ತಾ ವಲ್ಲ್ಯಾಪುರೆ,ಯಾಕಾಪುರ್ ಟಿಕೇಟ್ ಫೈಟ್ ?
ಕಲಬುರಗಿ, ಡಿಸೆಂಬರ್ 08: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಪರಿವರ್ತನಾ ಯಾತ್ರೆ ಇಂದು (ಡಿಸೆಂಬರ್ 08) ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣಕ್ಕೆ ಆಗಮಿಸಿದೆ, ಬಿಜೆಪಿಯನ್ನು ಬಲಪಡಿಸಬೇಕೆಂದು ಯಾತ್ರೆ ಬಂದಿದೆಯಾದರೂ ಚಿಂಚೋಳಿ ಬಿಜೆಪಿ ಕಾರ್ಯಕರ್ತರಿಗೆ ಇರುವ ಸಮಸ್ಯೆ ಚಿಂಚೋಳಿ ಬಿಜೆಪಿ ಘಟಕದಲ್ಲಿರುವ ಬಿಜೆಪಿ, ಕೆಜೆಪಿ ಒಡಕು.
ಚಿಂಚೋಳಿ ಬಿಜೆಪಿ ಟಿಕೇಟ್ ಗಾಗಿ ಇದೀಗ ಮಾಜಿ ಸಚಿವ ಸುನೀಲ್ ವಲ್ಲ್ಯಾಪುರೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ಸಂಜೀವ್ ಯಾಕಾಪೂರ್ ನಡುವೆ ಟಿಕೆಟ್‌ಗಾಗಿ ಬಿಗ್ ಪೈಟ್ ಪ್ರಾರಂಭವಾಗಿದೆ. ಕಲಬುರಗಿ ಗ್ರಾಮೀಣ ಮತಕ್ಷೇತ್ರದಿಂದ ಸ್ಪರ್ದಿಸುವ ವಿಚಾರ ಹೊಂದಿದ್ದ ಸುನೀಲ್ ವಲ್ಲಾಪೂರೆ, ಅಲ್ಲಿ ಟಿಕೇಟ್ ಸಿಗೋದಿಲ್ಲಾ ಅಂತ ಗೊತ್ತಾದಮೇಲೆ ಮತ್ತೆ ಚಿಂಚೋಳಿಗೆ ಮರಳಿದ್ದಾರೆ. ಇಗಾಗಲೇ ಚುನಾವಣಾ ತಯಾರಿಯನ್ನು ಕೂಡಾ ಸುನೀಲ್ ವಲ್ಲಾಪೂರೆ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಯಾವುದೇ ಕಾರಣಕ್ಕೂ ವಲ್ಲ್ಯಾಪುರೆಗೆ ಟಿಕೇಟ್ ನೀಡಬಾರದು ಅನ್ನೋದು ಮೂಲ ಬಿಜೆಪಿಗರಾದ ಸಂಜೀವ್ ಯಾಕಾಪೂರ್ ಬೆಂಬಲಿಗರ ಆಗ್ರಹವಾಗಿದೆ.

ಈ ಹಿಂದೆ ಇದೇ ಕ್ಷೇತ್ರದಿಂದ ಸುನೀಲ್ ವಲ್ಲ್ಯಾಪುರೆ ಗೆದ್ದಾಗ ಕ್ಷೇತ್ರದ ಜನರ ವಿಶ್ವಾಸವನ್ನು ಉಳಿಸಿಕೊಂಡಿಲ್ಲಾ. ಹೀಗಾಗಿ ಈ ಭಾರಿ ಸುನೀಲ್ ವಲ್ಲ್ಯಾಪುರೆಗೆ ಟಿಕೇಟ್ ನೀಡಬಾರದು ಅಂತ ಆಗ್ರಹಿಸುತ್ತಿದ್ದಾರೆ
ತಾಲೂಕಿನವರಿಗೆ ಟಿಕೇಟ್ ನೀಡಿ, ಹೊರಗಿನವರಿಗೆ ಬೇಡ ಅನ್ನೋ ಹೋರಾಟ ಕೂಡಾ ನಡೆಯುತ್ತಿದೆ. ಸುನೀಲ್ ವಲ್ಲ್ಯಾಪುರೆ ಚಿಂಚೋಳಿ ತಾಲೂಕಿನವರಲ್ಲಾ. ವಿಜಯಪುರದಿಂದ ಬಂದು ಇಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಟಿಕೇಟ್ ನೀಡಬಾರದು. ತಾಲೂಕಿನವರಿಗೆ ಬಿಜೆಪಿ ಟಿಕೇಟ್ ನೀಡಬೇಕು ಅನ್ನೋ ಆಗ್ರಹ ಕೂಡಾ ಹೆಚ್ಚಾಗಿದೆ. ತರೆಮರೆಯಲ್ಲಿ ಇದನ್ನು ಸಂಜೀವ್ ಯಾಕಾಪೂರ್ ಅವರೇ ತಮ್ಮ ಬೆಂಬಲಿಗರ ಮೂಲಕ ಮಾಡಿಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಅಂತಿಮವಾಗಿ ಯಾರಿಗೆ ಬಿಜೆಪಿ ಟಿಕೆಟ್ ಸಿಗಲಿದೆ, ಟಿಕೆಟ್ ಘೋಷಣೆಯಾದ ಮೇಲೆ ಯಾವ ರೀತಿಯ ಬಂಡಾಯ ಸ್ಪೋಟಗೊಳ್ಳಲಿದೆ ಅನ್ನೋದಕ್ಕೆ ಕಾಲವೇ ಉತ್ತರ ಹೇಳಲಿದೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications