ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಹೋರಾಟ: ನ.26ರಿಂದ ರೈತರ ರಾಷ್ಟ್ರವ್ಯಾಪಿ ಪ್ರತಿಭಟನೆ

ಕಲಬುರಗಿ, ನವೆಂಬರ್‌ 10: ಕೇಂದ್ರದ ರೈತ ವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಟ್ರೇಡ್ ಯೂನಿಯನ್ (ಜೆಸಿಟಿಯು) ಜಂಟಿ ಸಮಿತಿಯು ನವೆಂಬರ್ 26 ರಿಂದ ನವೆಂಬರ್ 28 ರವರೆಗೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿದೆ.

ಕರ್ನಾಟಕ ಪ್ರಾಂತ ರೈತ ಸಂಘದ ಶರಣಬಸಪ್ಪ ಮಮಶೆಟ್ಟಿ ಹಾಗೂ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಮೌಲಾ ಮುಲ್ಲಾ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ವಿವಿಧ ರೈತರ ಪರ ಸಂಘಟನೆಗಳು ಹಾಗೂ ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘ (ಎಐಎಡಬ್ಲ್ಯುಯು) ಹಾಗೂ ರಾಷ್ಟ್ರೀಯ ಕಿಸಾನ್ ಮಜ್ದೂರ್ ಮಹಾಸಂಘ (ಆರ್‌ಕೆಎಂಎಂಎಸ್) ಪ್ರತಿಭಟನೆಯಲ್ಲಿ ಭಾಗಿಯಾಗಿಲಿವೆ ಎಂದರು.

Farmers Protest Against Central Government From November 26

ನವೆಂಬರ್ 18 ರಂದು ಕಲಬುರಗಿಯಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಹಾಗೂ ನವೆಂಬರ್ 26 ರಿಂದ ಮೂರು ದಿನಗಳ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಾಗುವುದು. ನಂತರ 'ಬೆಂಗಳೂರು ಚಲೋ'ಗೆ ಕರೆ ನೀಡಲಾಗುವುದು. ಡಿಸೆಂಬರ್ 9, 2021 ರಂದು ಕಾನೂನು ಬದ್ಧವಾಗಿ ಖಾತರಿಪಡಿಸಿದ ಎಂಎಸ್‌ಪಿಯ ಮೇಲೆ ನೀಡಿದ ಲಿಖಿತ ಭರವಸೆಗಳನ್ನು ಜಾರಿಗೆ ತರದ ಕೇಂದ್ರ ಸರ್ಕಾರದ ಬಗ್ಗೆ ಮೌಲಾ ಮುಲ್ಲಾ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ನೀಡಿದ ಭರವಸೆ ಮೇರೆಗೆ ದೆಹಲಿ ಗಡಿಯಲ್ಲಿನ ನಡೆಯುತ್ತಿದ್ದ ಹೋರಾಟವನ್ನು ರೈತರು ಸ್ಥಗಿತಗೊಳಿಸಿದ್ದಾರೆ. ಆಂದೋಲನವನ್ನು ಹಿಂಪಡೆಯಲಾಗಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಮಿತಿಯನ್ನು ರಚಿಸಿಲ್ಲ. ಅಲ್ಲದೇ ರೈತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಎಂ.ಎಸ್ ಸ್ವಾಮಿನಾಥನ್ ಅವರು ನೀಡಿರುವ ಶಿಫಾರಸ್ಸುಗಳನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಮೌಲಾ ಮುಲ್ಲಾ ಆಗ್ರಹಿಸಿದರು.

Farmers Protest Against Central Government From November 26

ಬೇಡಿಕೆಗಳು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವುದನ್ನು ಒಳಗೊಂಡಿತ್ತು. ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಕಾರ್ಮಿಕ ಕಲ್ಯಾಣಕ್ಕೆ ಯಾವುದೇ ಸಂಬಂಧವಿಲ್ಲ. ಕಾರ್ಮಿಕ ಸಂಹಿತೆಗಳ ಅನುಷ್ಠಾನವನ್ನು ಸರ್ಕಾರವು ಸೂಚಿಸಬಾರದು ಮತ್ತು ಅವುಗಳನ್ನು ರದ್ದುಗೊಳಿಸಬೇಕು. ಸಂಘಟಿತ ಕಾರ್ಮಿಕರಿಗೆ ಮಾಸಿಕ ಕನಿಷ್ಠ 26,000 ರೂ. ವೇತನವನ್ನು ನಿಗದಿಪಡಿಸುವುದು, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಅನ್ನು ಬದಲಿಸುವುದು ಸೇರಿದಂತೆ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಿದ್ದೇವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಶರಣಬಸಪ್ಪ ಮಮಶೆಟ್ಟಿ ಹೇಳಿದರು.

ಅಲ್ಲಿದೇ ಹೊಸ ಬೆಳೆ ವಿಮೆ ಮತ್ತು ಪರಿಹಾರ ಯೋಜನೆ ಮತ್ತು ರಸಗೊಬ್ಬರಗಳು, ಬೀಜಗಳು ಮತ್ತು ಕೃಷಿ-ಉಪಕರಣಗಳಂತಹ ಕೃಷಿ ಒಳಹರಿವಿನ ಮೇಲೆ ಜಿಎಸ್​ಟಿ ವಿನಾಯಿತಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+