ಮಾಜಿ ಸಚಿವ ಗುರುನಾಥ್ ಪುತ್ರನ ಮೇಲೆ ಹಲ್ಲೆ

Posted By: Nayana
Subscribe to Oneindia Kannada

ಕಲಬುರಗಿ, ಮಾರ್ಚ್ 15: ಮಾಜಿ ಸಚಿವ ದಿ. ಸಿ ಗುರುನಾಥ್ ಅವರ ಪುತ್ರನ ಮೇಲೆ ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

ಸಿ. ಗುರುನಾಥ್ ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ, ಅವರನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ರಘುನಾಥ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು, ಇದನ್ನು ನೋಡಿದ್ದ ಕೆಲವರು ಅದನ್ನು ಡಿಲೀಟ್ ಮಾಡುವಂತೆ ಒತ್ತಡ ಹಾಕಿದ್ದರು. ಆದರೆ ರಘುನಾಥ್ ನಿರಾಕರಿಸಿದ ಕಾರಣ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

ಮಾಜಿ ಸಚಿವ ಸಿ.ಗುರುನಾಥ್ ಆತ್ಮಹತ್ಯೆ

Ex minister Gurunath death mystery: attack on his son

ಸಂಬಂಧಿಕರೇ ತನ್ನ ತಂದೆಯನ್ನು ಕೊಲೆ ಮಾಡಿರಬಹುದು ಎಂದು ರಘುನಾಥ್ ಶಂಕೆ ವ್ಯಕ್ತಪಡಿದ್ದರು. ಇದನ್ನು ನೋಡಿದ ಸಂಬಂಧಿಕರು ಆವರ ವಿರುದ್ಧ ತಿರುಗಿಬಿದ್ದಿದ್ದರು.ಇದೀಗ ಸತೀಶ್, ಅವಿನಾಶ್ ಸೇರಿ 8 ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಕಲಬುರಗಿ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Raghunath, son of former minister C Gurunath from Kalaburagi, who died recently has been attacked by his relatives. Gurunath has posted in social media that his father was murdered.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ