ಚಿತ್ರಗಳು : ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ

Posted By: Gururaj
Subscribe to Oneindia Kannada

ಕಲಬುರಗಿ, ಸೆಪ್ಟೆಂಬರ್ 14 : ಕಲಬುರಗಿ ವಿಮಾನ ನಿಲ್ದಾಣದ ಮೂಲಸೌಕರ್ಯ ಕಾಮಗಾರಿಗಳನ್ನು ಆರು ತಿಂಗಳಿನಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. 130 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಳ್ಳುತ್ತಿದೆ.

ಬುಧವಾರ ಜಿಲ್ಲಾಧಿಕಾರಿ ಆರ್.ವೆಂಕಟೇಶ್, ಭಾರತೀಯ ವಾಯುಪಡೆ ಪ್ರಾಧಿಕಾರದ ಕಮ್ಯುನಿಕೇಶನ್ ಮತ್ತು ನವಿವೇಶನ್ ವಿಭಾಗದ ಅಧಿಕಾರಿ ಚಿತ್ರಜಾ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಹ್ಮದ್ ಅಜೀಜುದ್ದೀನ್ ಮುಂತಾದವರು ವಿಮಾನ ನಿಲ್ದಾಣ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಟರ್ಮಿನಲ್ ಕಟ್ಟಡ, ಏರ್ ಟ್ರಾಫಿಕ್ ಕಂಟ್ರೋಲ್ ಕಟ್ಟಡ, ಕ್ರ್ಯಾಶ್ ಫೈರ್ ರೆಸ್ಕ್ಯೂ ಕಟ್ಟಡ, ರನ್‍ ವೇ, ವಿದ್ಯುತ್, ಕುಡಿಯುವ ನೀರಿನ ಪೂರೈಕೆ ಕಾಮಗಾರಿಗಳನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಎರಡು ಹಂತಗಳನ್ನಾಗಿ ವಿಂಗಡಿಸಿ 109 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲು ಅಂದಾಜಿಸಲಾಗಿತ್ತು. ಆದರೆ, ಸದ್ಯ ಕಾಮಗಾರಿಯ ಅಂದಾಜು ಮೊತ್ತ ಶೇ. 15.3 ಹೆಚ್ಚಾಗಿದೆ. ಹಾಗೂ 15.48 ಕೋಟಿ ರೂ.ಗಳ 3ನೇ ಹಂತದ ಕಾಮಗಾರಿಗಳು ಸೇರ್ಪಡೆಯಾಗಿದೆ. ಆದ್ದರಿಂದ ಕಾಮಗಾರಿ ವೆಚ್ಚ 130 ಕೋಟಿಗಳಾಗಲಿದೆ.

 ಡಿಸೆಂಬರ್ ಅಂತ್ಯಕ್ಕೆ ರನ್ ವೇ ಪೂರ್ಣ

ಡಿಸೆಂಬರ್ ಅಂತ್ಯಕ್ಕೆ ರನ್ ವೇ ಪೂರ್ಣ

ಪ್ರಥಮ ಹಂತದದಲ್ಲಿ ರನ್ ವೇ, ಎಪ್ರಾನ್, ಒಳ ರಸ್ತೆಗಳು, ಚರಂಡಿಗಳನ್ನು 85.46 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಒಟ್ಟು 3.275 ಕಿ.ಮೀ. ಉದ್ದದ ರನ್ ವೇ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

 ಟೆಂಡರ್ ಕರೆಯಲು ಸೂಚನೆ

ಟೆಂಡರ್ ಕರೆಯಲು ಸೂಚನೆ

2ನೇ ಹಂತದಲ್ಲಿ 29.20 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 100 ಜನ ಪ್ರಯಾಣಿಕರ ಟರ್ಮಿನಲ್ ಬಿಲ್ಡಿಂಗ್, ಏರ್ ಟ್ರಾಫಿಕ್ ಕಂಟ್ರೋಲ್ ಬಿಲ್ಡಿಂಗ್, ಕ್ರ್ಯಾಶ್ ಫೈರ್ ರೆಸ್ಕ್ಯೂ ಬಿಲ್ಡಿಂಗ್, ಕುಡಿಯುವ ನೀರು, ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಮಾರ್ಚ್ ಅಂತ್ಯದೊಳಗಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. 3ನೇ ಹಂತದಲ್ಲಿ ವಿದ್ಯುದ್ದೀಕರಣ, ವಿಮಾನ ನಿಲ್ದಾಣಕ್ಕೆ ಅವಶ್ಯವಿರುವ ಯಂತ್ರೋಪಕರಣಗಳನ್ನು ಖರೀದಿಸಲು ಟೆಂಡರ್ ಕರೆಯುವಂತೆ ಸೂಚಿಸಲಾಗಿದೆ.

 ರನ್ ವೇ ನಿರ್ಮಾಣ ಕಾರ್ಯ ಪೂರ್ಣ

ರನ್ ವೇ ನಿರ್ಮಾಣ ಕಾರ್ಯ ಪೂರ್ಣ

ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ರಾಜು ಡಾಂಗೆ ಮಾತನಾಡಿ, ' ರನ್ ವೇ ಕೊನೆಯ ಭಾಗದಲ್ಲಿ ಸೇಫ್ ಏರಿಯಾ ಎಂದು 240 ಮೀಟರ್ ರನ್‍ವೇ ನಿರ್ಮಿಸಲಾಗುತ್ತಿದೆ. 3.275 ಕಿ.ಮೀ. ಉದ್ದದ ಮುಖ್ಯ ರನ್‍ವೇ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ' ಎಂದರು.

 ಯಂತ್ರೋಪಕರಣಗಳ ಸಾಗಾಟ

ಯಂತ್ರೋಪಕರಣಗಳ ಸಾಗಾಟ

ಭಾರತೀಯ ವಾಯುಪಡೆ ಪ್ರಾಧಿಕಾರದ ಅಧಿಕಾರಿ ಎಂ.ಎನ್. ಮೂರ್ತಿ ಮಾತನಾಡಿ, 'ಸರ್ಕಾರವು ಏರ್‍ಪೋರ್ಟ್ ಆಥಾರಿಟಿಯೊಂದಿಗೆ ಎಂ.ಓ.ಯು. ಮಾಡಿಕೊಳ್ಳದ ಕಾರಣದಿಂದ ವಿಮಾನ ನಿಲ್ದಾಣಕ್ಕೆ ಅವಶ್ಯಕವಿರುವ ಸಾಧನ ಸಲಕರಣೆಗಳು ಸಜ್ಜುಗೊಳಿಸುವಲ್ಲಿ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಎಂ.ಓ.ಯು. ಸಿದ್ಧಪಡಿಸಿ ಉಪಕರಣಗಳನ್ನು ಪಡೆಯಬೇಕು. ಇದಕ್ಕೆ ಕನಿಷ್ಠ 3 ತಿಂಗಳು ಬೇಕಾಗುತ್ತದೆ' ಎಂದು ಹೇಳಿದರು.

 ಮೂಲ ಸೌಕರ್ಯಗಳ ಅಳವಡಿಕೆ

ಮೂಲ ಸೌಕರ್ಯಗಳ ಅಳವಡಿಕೆ

ಜೆಸ್ಕಾಂ ಗ್ರಾಮೀಣ ಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ ಮಾತನಾಡಿ, 'ವಿಮಾನ ನಿಲ್ದಾಣದ ಪ್ರದೇಶದಲ್ಲಿ 33ಕೆ.ವಿ. ಹಾಗೂ 11ಕೆ.ವಿ. ಯ ಎರಡು ಮಾರ್ಗಗಳಿದ್ದು, ಅವುಗಳನ್ನು ಸೂಕ್ತ ಪ್ರದೇಶಕ್ಕೆ ಸ್ಥಳಾಂತರಿಸಬೇಕಾಗಿದೆ ಹಾಗೂ ಯುನಿವರ್ಸಿಟಿ ಹತ್ತಿರದ 110ಕೆ.ವಿ. ಉಪ ಕೇಂದ್ರದಿಂದ 11ಕೆ.ವಿ. ಲೈನ್ ಏರ್‍ಪೋರ್ಟ್ ಹೊರಗಡೆವರೆಗೆ ತಲುಪಿಸಿ ವಿಮಾನ ನಿಲ್ದಾಣದಲ್ಲಿ ಯು.ಜಿ. ಕೇಬಲ್ ಅಳವಡಿಸಲಾಗುವುದೆಂದು' ತಿಳಿಸಿದರು. ಬೆಣ್ಣೆತೋರಾದಿಂದ ಇ.ಎಸ್.ಐ. ಆಸ್ಪತ್ರೆಯವರೆಗೆ ಪೈಪ್‍ಲೈನ್ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿದ್ದು, ವಿಮಾನ ನಿಲ್ದಾಣಕ್ಕೆ ಇ.ಎಸ್.ಐ. ಆಸ್ಪತ್ರೆಯಿಂದ ನೀರು ಸರಬರಾಜು ಮಾಡಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kalaburagi Deputy Commissioner R.Venkatesh inspected the progress of construction work of Klaburagi airport.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ