• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಲಬುರಗಿ; ಚಂದ್ರಂಪಳ್ಳಿ ಜಲಾಶಯ ಪ್ರವಾಸಿ ತಾಣವಾಗಿ ಅಭಿವೃದ್ಧಿ

|

ಕಲಬುರಗಿ, ಏಪ್ರಿಲ್ 06; " ಕಲಬುರಗಿ-ಬೀದರ್ ಜಿಲ್ಲೆಯ ಗಡಿಯಲ್ಲಿ ದಟ್ಟ ಕಾಡಿನೊಳಗಿರುವ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯ ಮತ್ತು ಅದರ ಸುತ್ತಮುತ್ತ ಪ್ರದೇಶವನ್ನು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲಾಗುತ್ತದೆ" ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಸಿ. ಪಿ. ಯೋಗೇಶ್ವರ ಹೇಳಿದರು.

ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯ ವೀಕ್ಷಿಸಿ ಮಾತನಾಡಿದ ಸಚಿವರು, "ಪ್ರವಾಸೋದ್ಯಮ ಕ್ಷೇತ್ರವಾದಿ ಅಭಿವೃದ್ಧಿ ಹೊಂದಲು ಸೂಕ್ತ ಸ್ಥಳ ಇದಾಗಿದೆ. ಜಂಗಲ್ಸ್ ಲಾಡ್ಜಸ್, ರೆಸಾರ್ಟ್ ನಿರ್ಮಾಣ ಸೇರಿದಂತೆ ಜಲ ಕ್ರೀಡೆ ಆಯೋಜನೆ ಮಾಡಲಾಗುವುದು" ಎಂದು ಸಚಿವರು ತಿಳಿಸಿದರು.

ವಿಶ್ವ ಪ್ರವಾಸೋದ್ಯಮ ದಿನ: ಬದರಿನಾಥ ಯಾತ್ರೆ ದಿವ್ಯ ಅನುಭೂತಿ

"ಚಂದ್ರಂಪಳ್ಳಿ ಜಲಾಶಯಕ್ಕೆ ಹೊಂದಿಕೊಂಡಂತೆ ಕೊಳ್ಳೂರ ಸರ್ವೇ ವ್ಯಾಪ್ತಿಯ 200 ಎಕರೆ ಡೀಮ್ಡ್ ಅರಣ್ಯ ಪ್ರದೇಶವಿದ್ದು, ಯಾವುದೇ ಮೂಲಸೌಕರ್ಯ ಕೈಗೊಳ್ಳಲು ಅಡ್ಡಿಯಿಲ್ಲ. ಜಲಾಶಯದ ಸುತ್ತಮುತ್ತ ಪ್ರವಾಸೋದ್ಯಮ ಅಭಿವೃದ್ಧಿಗೆ ಹಕ್ಕನ್ನು ಪಡೆದು ಪ್ರವಾಸಿ ಮೂಲಸೌಕರ್ಯ ಕಲ್ಪಿಸಲಾಗುವುದು" ಎಂದು ವಿವರಣೆ ನೀಡಿದರು.

ಕಲಬುರಗಿ; ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

"ತುಂಗಾಭದ್ರ, ನಾರಾಯಣಪುರ, ಆಲಮಟ್ಟಿ, ಮೈಸೂರಿನ ಕೆ. ಆರ್. ಎಸ್. ಸೇರಿದಂತೆ ರಾಜ್ಯದ 10-12 ಜಲಾಶಯಗಳ ವ್ಯಾಪ್ತಿ ಪ್ರದೇಶ ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಮ ಅಭಿವೃದ್ಧಿಗೆ ಹಕ್ಕನ್ನು ಪಡೆದು ಅಲ್ಲಿ ಪ್ರವಾಸಿ ಮೂಲಸೌಕರ್ಯಗಳನ್ನು ಮಾಡಿದೆ. ಅದೇ ಮಾದರಿಯಲ್ಲಿ ಚಂದ್ರಂಪಳ್ಳಿ ಜಲಾಶಯ ಸುತ್ತಮುತ್ತಲ ಪ್ರದೇಶವನ್ನು ಸಹ ಹಕ್ಕನ್ನು ಪಡೆದು ಅಭಿವೃದ್ಧಿಪಡಿಸಲಾಗುವುದು" ಎಂದು ತಿಳಿಸಿದರು.

ಕೆಎಸ್‌ಟಿಡಿಸಿ ವತಿಯಿಂದ ಮೈಸೂರು-ತಿರುಪತಿ ಪ್ರವಾಸ ಪುನರಾರಂಭ

"ಚಂದ್ರಂಪಳ್ಳಿ ಜಲಾಶಯ ಸುತ್ತಮುತ್ತ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶ ಹೊಂದಿರುವುದರಿಂದ ಇಲ್ಲಿ ಜಂಗಲ್ಸ್ ಲಾಡ್ಜಸ್, ರೆಸಾರ್ಟ್, ವಾಚ್ ಟವರ್, ಜಲ ಕ್ರೀಡೆ, ಸಾಹಸ ಕ್ರೀಡೆ, ನೀರಿನ ಕಾರಂಜಿ, ಬೋಟಿಂಗ್ ವ್ಯವಸ್ಥೆ ಮಾಡಲಾಗುವುದು. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಇಲ್ಲಿಗೆ ಬಂದು ಪ್ರಕೃತಿಯ ಸೌಂದರ್ಯ ಸವಿಯಲು ಎಲ್ಲಾ ರೀತಿಯ ಅಭಿವೃದ್ಧಿಯನ್ನು ಹಂತ-ಹಂತವಾಗಿ 100-200 ಕೋಟಿ ರೂ. ನಲ್ಲಿ ಮುಂದಿನ 2-3 ವರ್ಷದಲ್ಲಿ ಮಾಡಲಾಗುತ್ತದೆ" ಎಂದರು.

ಸಚಿವರು ಗೊಟ್ಟಂಗೊಟ್ಟ ಜಲಪಾತಕ್ಕೆ ಭೇಟಿ ನೀಡಿ ವಾಚ್ ಟವರ್ ಮೂಲಕ ಚಂದ್ರಂಪಳ್ಳಿ ಜಲಾಶಯದ ಹಿನ್ನೀರನ್ನು ವೀಕ್ಷಿಸಿದರು. ಮಹಾತಪಸ್ವಿ ಬಕ್ಕಮಹಾಪ್ರಭು ಅವರ ದೇವಾಲಯಕ್ಕೂ ಅವರು ಭೇಟಿ ನೀಡಿದರು.

English summary
Chandrampalli dam developed as tourist destination said tourism minister C. P. Yogeshwar. Dam constructed across river Bhima in Chandrampalli village of Chincholi taluk, Kalaburagi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X