Breaking: ಕಲಬುರಗಿ ಬಸ್ ಅಪಘಾತ: ಹಲವರು ಸಜೀವ ದಹನ ಶಂಕೆ
ಕಲಬುರಗಿ, ಜೂ. 3: ಕಲಬುರಗಿ ಜಿಲ್ಲೆಯ ಕಮಲಾಪುರ ಹೊರವಲಯದಲ್ಲಿ ಗೋವಾದಿಂದ ಹೈದರಾಬಾದ್ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿ ಉರಿದಿದ್ದು ಹಲವರು ಸಜೀವವಾಗಿರುವ ಶಂಕೆ ವ್ಯಕ್ತವಾಗಿದೆ.
ಗೋವಾದಿಂದ ಹೈದಾರಬಾದ್ ಕಡೆಗೆ ಹೋಗುತ್ತಿದ್ದ ಖಾಸಗಿ ಬಸನ್ನು ಚಾಲಕ ವೇಗವಾಗಿ ಬಸ್ ಓಡಿಸುತ್ತಿದ್ದ ಎನ್ನಲಾಗಿದೆ. ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ 12 ಜನರನ್ನು ರಕ್ಷಣೆ ಮಾಡಲಾಗಿದೆ. ಉಳಿದವರಲ್ಲಿ ಬೆಂಕಿಗೆ ಸಿಲುಕಿಕೊಂಡವರೆಷ್ಟು ಎಂದು ಮಾಹಿತಿ ತಿಳಿದು ಬಂದಿಲ್ಲ. ಬಸ್‌ನಲ್ಲಿ ಸುಮಾರು 35 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, 12 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಮಾಹಿತಿ ತಿಳಿದು ಬಂದಿದೆ.

ಗಾಯಗೊಂಡವರನ್ನು ಸಮೀಪದ ಆಸ್ಪತ್ರಗೆ ಸೇರಿಸಲಾಗಿದೆ. ವೇಗದ ಚಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಬಸ್ ಬೆಂಕಿ ಹೊತ್ತಿ ಉರಿದು ಸಂಪೂರ್ಣ ಭಸ್ಮವಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಒಬ್ಬನೇ ವ್ಯಕ್ಯಿಯ ಹೆಸರಿನಲ್ಲಿಸೀಟುಗಳು ಬುಕ್ ಆಗಿದ್ದವು ಎನ್ನಲಾಗಿದ್ದು, ಎಲ್ಲರು ಒಂದೇ ಕುಟುಂಬಸ್ಥರೇ ಎನ್ನಲಾಗಿದೆ. ಗೋವಾದಿಂದ ಪ್ರವಾಸ ಮುಗಿಸಿ ಹೈದರಾಬಾದ್ ಕಡೆಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಆಲ್ ಇಂಡಿಯಾ ಪರ್ಮಿಟ್ ಬಸ್ ಇದಾಗಿದ್ದು, ತೆಲಂಗಾಣ ಸಚಿವರಿಂದ ಕಲಬುರಗಿ ಜಿಲ್ಲಾ ಪೊಲೀಸ್‌ಗೆ ಕರೆ ಬಂದಿದೆ ಎಂದು ತಿಳಿದು ಬಂದಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications