ಜೂನ್ ನಲ್ಲಿ ಯಡಿಯೂರಪ್ಪ ಸರ್ಕಾರ ಅಸ್ತಿತ್ವಕ್ಕೆ : ಸೋಮಣ್ಣ ಭವಿಷ್ಯ

Recommended Video

      ಜೂನ್ ನಲ್ಲಿ ಬಿ ಎಸ್ ವೈ ಸರ್ಕಾರ ಅಸ್ತಿತ್ವಕ್ಕೆ ಬರುವುದು ಖಚಿತ | ಬಿಜೆಪಿ ನಾಯಕನ ಭವಿಷ್ಯ

      ಕಲಬುರಗಿ, ಮೇ 06: ಲೋಕಸಭೆ ಚುನಾವಣೆ 2019ರ ಫಲಿತಾಂಶದ ನಂತರ ರಾಜ್ಯ ಹಾಗೂ ರಾಷ್ಟ್ರ ಬಿಜೆಪಿಯಲ್ಲಿ ಭಾರಿ ಬದಲಾವಣೆಯಾಗುವ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ಮಾಜಿ ಸಚಿವ ವಿ ಸೋಮಣ್ಣ ಅವರು ಎಚ್ ಡಿ ಕುಮಾರಸ್ವಾಮಿ ಸರ್ಕಾರದ ಬಗ್ಗೆ ಭವಿಷ್ಯ ಹೇಳಿದ್ದಾರೆ.

      ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

      ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರವು ಮೇ 30ರೊಳಗೆ ಪತನವಾಗಲಿದೆ. ಆನಂತರ ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ. ಬಿಜೆಪಿ ಅಧಿಕಾರ ಸ್ಥಾಪಿಸಲಿದೆ ಎಂದರು.

      ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಕೂಡಾ ಲೋಕಸಭೆ ಚುನಾವಣೆ 2019 ಜೊತೆಗೆ ನಡೆಯುತ್ತಿದ್ದು, ಮೇ 23ರಂದು ಫಲಿತಾಂಶ ಹೊರ ಬರಲಿದೆ. ಈ ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ.

      BS Yeddyurappa will become CM by June second week : VSomanna

      224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಸದ್ಯ 104 ಶಾಸಕರನ್ನು ಹೊಂದಿದೆ. ಉಪ ಚುನಾವಣೆ ಫಲಿತಾಂಶದ ಬಳಿಕ 106ಕ್ಕೇರಲಿದೆ. ಯಡಿಯೂರಪ್ಪ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿ ಬಹುಮತ ಸಾಬೀತು ಪಡಿಸಲು ಬೇಕಾದ ಸಂಖ್ಯೆಯನ್ನು ಮೈತ್ರಿ ಸರ್ಕಾರದ ಭಿನ್ನಮತೀಯರು ಒದಗಿಸಲಿದ್ದಾರೆ ಎಂದರು.

      ರಾಜ್ಯದಲ್ಲಿ ತೀವ್ರವಾಗಿ ಬರ ಪರಿಸ್ಥಿತಿಯಿದೆ. ಆದರೆ, ಸಾರ್ವಜನಿಕರ ಹಣವನ್ನು ಎಚ್ ಡಿ ಕುಮಾರಸ್ವಾಮಿ ದುರ್ಬಳಕೆ ಮಾಡುತ್ತಿದ್ದಾರೆ. ರೆಸಾರ್ಟ್ ನಲ್ಲಿ ತಂಗುವುದು, ಸ್ವಂತ ಹಿತಕ್ಕಾಗಿ ಹೋಮ ಹವನ ಮಾಡಿಕೊಳ್ಳುವುದು ಇದಕ್ಕೆಲ್ಲ ಸಾರ್ವಜನಿಕರ ಹಣವನ್ನು ಬಳಸುವುದನ್ನು ನಾನು ಈ ಹಿಂದೆ ನೋಡಿರಲಿಲ್ಲ ಎಂದು ಟೀಕಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+