ಬಿಜೆಪಿ 60-70 ಸ್ಥಾನ ಗೆಲ್ಲುವುದು ಕಷ್ಟವೇ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ, ಮೇ 12: "ಕರ್ನಾಟಕದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸಲಿದೆ. ಬಿಜೆಪಿ 60-70 ಸ್ಥಾನ ಗಳಿಸುವುದೂ ಕಷ್ಟವಿದೆ" ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಮತ ಚಲಾಯಿಸುವ ಮುನ್ನ, 'ಬಿಜೆಪಿ ಈ ಬಾರಿ 150 ಸ್ಥಾನ ಗೆಲ್ಲುತ್ತದೆ. ಮೇ 17 ರಂದು ನಾನು ಹೊಸ ಸರ್ಕಾರ ರಚಿಸುತ್ತೇನೆ' ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಖರ್ಗೆ, '150 ಹೋಗಲಿ, ಬಿಜೆಪಿ 60-70 ಸೀಟು ಗೆಲ್ಲುವುದೇ ಕಷ್ಟವಿದೆ' ಎಂದು ಹೇಳಿದರು.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

"ಬಿಜೆಪಿ ಹಗಲುಗನಸು ಕಾಣುತ್ತಿದೆ. ಐದು ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿರುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ. ನಾವೇ ಹೊಸ ಸರ್ಕಾರ ರಚಿಸುತ್ತೇವೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

BJP will not win more than 60-70 seats maximum, says Mallikarjun Kharge

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು(ಮೇ 12) ಮತದಾನ ನಡೆಯುತ್ತಿದ್ದು, ಫಲಿತಾಂಶ ಮೇ 15 ರಂದು ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+