ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಕತ್ತರಿ ಅಲ್ಲ, ಮೊಂಬತ್ತಿ ಜ್ವಾಲೆಯಿಂದ ಹೇರ್ ಕಟಿಂಗ್

By Prithviraj
|
Google Oneindia Kannada News

ಕಲಬುರ್ಗಿ, ಅಕ್ಟೋಬರ್, 27: ನಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೇಶಗಳ ಪಾತ್ರ ಅಪಾರ. ಅಂದವಾದ ಕೇಶರಾಶಿ ಮುಖದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದ್ದರಿಂದಲೇ ನಮ್ಮ ಯುವ ಸಮುದಾಯ ಕೂದಲಿಗೆ ಹೆಚ್ಚು ಪ್ರಾಶಸ್ಯ ನೀಡುತ್ತದೆ.

ವಿಧ ವಿಧವಾಗಿ ಹೇರ್ ಸ್ಟೈಲ್ ಚೇಂಜ್ ಮಾಡುತ್ತಾ ಖುಷಿ ಪಡುತ್ತಿರುತ್ತಾರೆ. ಉತ್ತಮ ಹೇರ್ ಸ್ಟೈಲ್ ಮಾಡಿಸಿಕೊಳ್ಳುವುದಕ್ಕಾಗಿ ಅತ್ಯುತ್ತಮ ಸ್ಪಾಗಳನ್ನು ಹುಡುಕುತ್ತಾರೆ. ಸಲೂನ್ ಗಳ ಬೇಟೆಯಾಡುತ್ತಾರೆ.

Barber uses candles for haricuts in Kalaburagi

ಅಂತಹ ಸೌಂದರ್ಯಪ್ರಿಯರು ಇಲ್ಲಿನ ಶಹಬಾದ್ ಗ್ರಾಮದಲ್ಲಿರುವ ರಾಜ್ ಮೆನ್ಸ್ ಪಾರ್ಲರ್ ಗೆ ಒಮ್ಮೆ ಭೇಟಿ ನೀಡಬಹುದು. ಇಷ್ಟಕ್ಕೂ ಇಲ್ಲಿನ ವೇಶೇಷ ಏನೂ ಅಂತೀರಾ? ಸಾಮಾನ್ಯವಾಗಿ ಕ್ಷೌರದಂಗಡಿಗಳಲ್ಲಿ ಕ್ಷುರಕರು ಕತ್ತರಿ ಬಳಿಸಿ ಕ್ಷೌರ ಮಾಡುವುದುಂಟು. ಆದರೆ ಈ ಅಂಗಡಿಯವರು ಮಾತ್ರ ಕ್ಷೌರಕ್ಕಾಗಿ ಕ್ಯಾಂಡಲ್ ಬೆಂಕಿ ತಾಕಿಸಿ ಕೂದಲನ್ನು ಸುಡುತ್ತಾರೆ.

ಈ ಅಂಗಡಿಯವರ ಭಿನ್ನ ಆಲೋಚನೆ ಗಮನಿಸಿ ಮೊದಲು ಜನ ಹಿಂದಡಿಯಿಟ್ಟರೂ ಸಹ ನಂತರದ ದಿನಗಳಲ್ಲಿ ಕ್ಯೂ ನಿಲ್ಲುತ್ತಿದ್ದಾರೆ. ಈ ಅಂಗಡಿಯಲ್ಲೇ ಹೇರ್ ಕಟ್ ಮಾಡಿಸಿಕೊಳ್ಳಬೇಕೆಂದು ಜನ ಯೋಚಿಸುತ್ತಿದ್ದಾರೆ.

ಇಷ್ಟಕ್ಕೂ ಈ ಅಂಗಡಿಯವರಿಗೆ ಈ ಆಲೋಚನೆ ಮೂಡಲು ಕಾರಣವೇನೆಂದು ಸೆಲೂನ್ ಮಾಲೀಕ ದಶರಥ ಅವರನ್ನು ಕೇಳಿದರೆ. "ನಮ್ಮೂರಲ್ಲಿ ಹೆಚ್ಚಾಗಿ ಕರೆಂಟ್ ಹೋಗುತ್ತಿತ್ತು. ಆದ್ದರಿಂದಲೇ ಟ್ರಿಮ್ ಮಿಷನ್ ಬಳಸುವುದಕ್ಕಿಂತ ಹೆಚ್ಚಾಗಿ ಮೊಂಬತ್ತಿಗಳನ್ನು ಬಳಕೆ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ.

English summary
In Gulbarga’s Shahabad village, a barber uses a crazy way for styling people’s hair. Dasharath of Raj Men’s Parlour uses candles for haircuts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X