• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುವಕರಿಗೆ ಆದ್ಯತೆ ನೀಡಿದ ಯಡಿಯೂರಪ್ಪ ಶ್ರೇಷ್ಠ ನಾಯಕ: ಬಾಬು ಮೋಹನ್

|

ಚಿಂಚೋಳಿ, ಮೇ 15: ಕಲಬುರಗಿ ಜಿಲ್ಲೆಯ ಚಿಂಚೋಳಿ ಉಪ ಚುನಾವಣೆ ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಕರ್ನಾಟಕ ಬಿಜೆಪಿಯ ಪ್ರಮುಖ ನಾಯಕರಲ್ಲದೆ, ಆಂಧ್ರಪ್ರದೇಶ, ತೆಲಂಗಾಣದಿಂದ ಬಂದಿರುವ ಸೆಲೆಬ್ರಿಟಿಗಳು ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್ ಪರ ಪ್ರಚಾರ ನಡೆಸಿದ್ದಾರೆ.

ನಟ ಬಾಬು ಮೋಹನ್ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ಅವಿನಾಶ್ ಅವರು ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.

'ಸರ್ಕಾರ ಬಿದ್ದರೆ ಬಿಜೆಪಿ ಸರ್ಕಾರ ರಚನೆಗೆ ಯತ್ನಿಸಲಿದೆ' : ಬಿಎಸ್ವೈ

ಯಡಿಯೂರಪ್ಪನವರು ಯುವಕರಿಗೆ ಆದ್ಯತೆ ನೀಡುವಂತಹ ವ್ಯಕ್ತಿತ್ವವುಳ್ಳ ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಈ ರಾಜ್ಯಕ್ಕೆ ಯಡಿಯೂರಪ್ಪ ಮತ್ತು ದೇಶಕ್ಕೆ ಮೋದಿ ಅವರ ಅಗತ್ಯತೆ ಇದೆ. ದೇಶದ ವಿವಿಧ ಭಾಗಗಳಲ್ಲಿ ಪ್ರಚಾರ ಮಾಡಿದ್ದೇನೆ. ಎಲ್ಲಾ ಕಡೆ ಮೋದಿ ಅವರ ಅಲೆ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಮೋಹನ್ ಹೇಳಿದರು.

ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಖರ್ಗೆಯನ್ನು ಸಿಎಂ ಮಾಡಲಿ: ಬಿಎಸ್‌ವೈ

ಪಾಕಿಸ್ತಾನವು ಯಾವಾಗಲೂ ಭಾರತಕ್ಕೆ ಅಡ್ಡಿ ಮಾಡುತ್ತಲೇ ಇದೆ. ಕಳ್ಳತನದಿಂದ ನುಸುಳಿ ನಮ್ಮ 40 ಸೈನಿಕರನ್ನು ಕೊಂದಿದೆ. ಇದಕ್ಕೆ ಪ್ರತಿಕಾರವಾಗಿ ನಮ್ಮ ಮೋದಿಯವರ ಸೈನ್ಯ ಪಾಕಿಸ್ತಾನದೊಳಕ್ಕೆ ನುಗ್ಗಿ 400 ಜನರನ್ನು ಕೊಂದು ಹಾಕುವ ಧೈರ್ಯ ತೋರಿದೆ. ಈ ಹಿಂದೆ ಟಿಡಿಪಿಯಲ್ಲಿದ್ದ ನಾನು ಇದೀಗ ಬಿಜೆಪಿ ಸೇರಿದ್ದೇನೆ ಎಂದರು.

ಎರಡೂ ರಾಜ್ಯಗಳಲ್ಲಿ ಬಿಜೆಪಿಯ ಕಮಲ ಅರಳಲಿದೆ

ಎರಡೂ ರಾಜ್ಯಗಳಲ್ಲಿ ಬಿಜೆಪಿಯ ಕಮಲ ಅರಳಲಿದೆ

ಟಿಡಿಪಿ ಮತ್ತು ಟಿಆರ್‍ಎಸ್ ಪಕ್ಷಗಳು ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿವೆಯೇ ಹೊರತು ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಎರಡೂ ರಾಜ್ಯಗಳಲ್ಲಿ ಬಿಜೆಪಿಯ ಕಮಲ ಅರಳಲಿದೆ ಎಂದು ಭವಿಷ್ಯ ನುಡಿದರು. ಬಾಬು ಮೋಹನ್ ಅವರು ಭಾಷಣದ ಮಧ್ಯೆ ಮಧ್ಯೆ ಸಿನಿಮಾ ಡೈಲಾಗ್‍ಗಳನ್ನು ಹೇಳುವ ಮೂಲಕ ಜನರನ್ನು ರಂಜಿಸಿದರು. ಯಡಿಯೂರಪ್ಪ ಮಾಜಿ ಅಲ್ಲ, ಅವರು ಯಾವಾಗಲೂ ಮುಖ್ಯಮಂತ್ರಿಯೇ ಎಂದು ಸಿನಿಮಾ ಸ್ಟೈಲ್‍ನಲ್ಲಿಯೇ ಹೇಳುವ ಮೂಲಕ ಜನರನ್ನು ಆಕರ್ಷಿಸಿದರು.

ಮಾಜಿ ಸಚಿವ ವಿ.ಸೋಮಣ್ಣ ಅವರು ಮಾತನಾಡಿ

ಮಾಜಿ ಸಚಿವ ವಿ.ಸೋಮಣ್ಣ ಅವರು ಮಾತನಾಡಿ

ಮಾಜಿ ಸಚಿವ ವಿ.ಸೋಮಣ್ಣ ಅವರು ಮಾತನಾಡಿ, ಇದೊಂದು ಯುದ್ಧ. ವಿಧಿಯ ನಿಯಮದಂತೆ ಬದಲಾವಣೆ ಪರ್ವ ನಡೆಯುತ್ತಿದೆ ಎಂದು ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆ ಮಾರ್ಮಿಕವಾಗಿ ನುಡಿದರು.

ಬಡತನದ ಬೇಗೆಯಿಂದ ಬೇಯುತ್ತಿರುವ ಚಿಂಚೋಳಿ ತಾಲೂಕನ್ನು ಮಾದರಿಯನ್ನಾಗಿ ಮಾಡಲು ಇದನ್ನು ನಾವು ದತ್ತು ಪಡೆಯುತ್ತೇವೆ. ಇದಕ್ಕೆ ಯಡಿಯೂರಪ್ಪನವರು ಅನುಮತಿ ನೀಡಬೇಕೆಂದು ವೇದಿಕೆ ಮೇಲಿದ್ದ ಮಾಜಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪಾಪದ ಹಣವನ್ನು ಹಂಚುವ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು. ಈ ಚಿಂಚೋಳಿಯ ಒಂದೊಂದು ಮತದ ಮೌಲ್ಯ ಕೋಟಿ ರೂಪಾಯಿಗೂ ಮಿಗಿಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ಧತೆಯನ್ನು ಹೊಂದಿರುವ ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕೆಂದು ಸೋಮಣ್ಣ ಮನವಿ ಮಾಡಿದರು.

ಉಮೇಶ್ ಜಾಧವ್ ಅವರು ಮಾತನಾಡಿ

ಉಮೇಶ್ ಜಾಧವ್ ಅವರು ಮಾತನಾಡಿ

ಉಮೇಶ್ ಜಾಧವ್ ಅವರು ಮಾತನಾಡಿ, ಇದೊಂದು ಐತಿಹಾಸಿಕ ಚುನಾವಣೆಯಾಗಿದೆ. ಇಷ್ಟು ದಿನ ಮತದಾರರ ಮನೆ ಬಾಗಿಲಿಗೆ ಬಾರದ ಕಾಂಗ್ರೆಸ್ ಪಕ್ಷ ಈ ಬಾರಿ ಸೋಲಿನ ಭೀತಿಯಿಂದ ಮನೆ ಬಾಗಿಲಿಗೆ ಎಡತಾಕುತ್ತಿದೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಲ್ಲದ ಸರದಾರ ಎನ್ನುತ್ತಾರೆ. ಆದರೆ, ಅವರು ಈ ಹಣೆಪಟ್ಟಿ ಹೊತ್ತು ತಿರುಗಾಡಿದ್ದಾರೆಯೇ ಹೊರತು ಮಾಡಿರುವ ಅಭಿವೃದ್ಧಿ ಕೆಲಸವಾದರೂ ಏನು? ಈ ಹಿನ್ನೆಲೆಯಲ್ಲಿ ಸೋಲಿಲ್ಲದ ಸರದಾರ ಎಂಬ ಮಾತನ್ನು ಈ ಬಾರಿ ಸುಳ್ಳು ಮಾಡಿ. ನಾನು ಅಭಿವೃದ್ಧಿಗಾಗಿ ರಾಜೀನಾಮೆ ನೀಡ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿದ್ದೇನೆ ಎಂದು ಸಮರ್ಥಿಸಿಕೊಂಡರು.

ಅರವಿಂದ ಲಿಂಬಾವಳಿ ಅವರು ಮಾತನಾಡಿ

ಅರವಿಂದ ಲಿಂಬಾವಳಿ ಅವರು ಮಾತನಾಡಿ

ಮಲ್ಲಿಕಾರ್ಜುನ ಖರ್ಗೆಯವರು ಇಷ್ಟು ದಿನ ಮ್ಯಾಚ್ ಫಿಕ್ಸಿಂಗ್ ಮಾಡಿ ಗೆಲ್ಲುತ್ತಾ ಬಂದಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿನ ಚುನಾವಣೆಯನ್ನು ಗೆಲ್ಲಲಿ ನೋಡೋಣ ಎಂದು ಸವಾಲು ಹಾಕಿದ ಜಾಧವ್, ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆಯವರು ಇದುವರೆಗೆ ಕುಂಚಾವರಂ ಗ್ರಾಮವನ್ನೇ ನೋಡಿಲ್ಲ ಎಂದು ಟೀಕಿಸಿದರು.

ಬಿಜೆಪಿ ಹಿರಿಯ ನಾಯಕ ಅರವಿಂದ ಲಿಂಬಾವಳಿ ಅವರು ಮಾತನಾಡಿ, ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದರು. ಡಾ.ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ಹೆಚ್ಚು ಅನುದಾನವನ್ನು ಈ ಭಾಗಕ್ಕೆ ನೀಡಿದ್ದರು. ಅಭಿವೃದ್ಧಿಯನ್ನೇ ಮೂಲಮಂತ್ರವಾಗಿಟ್ಟುಕೊಂಡಿರುವ ಬಿಜೆಪಿಯಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

English summary
Actor Politician Babu Mohan campaigns for Dr Avinash Jadhav in Chincholi. Babu Mohan praises former CM BS Yeddyurappa has great leader who gave opportunity to youth in BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X