• search
 • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆರಿಗೆ ರಜೆ ಮುಗಿಸಿ ಬಂದ ಶಿಕ್ಷಕಿಯಿಂದ ಲಂಚ; ಎಸಿಬಿ ಅಧಿಕಾರಿಗಳ ದಾಳಿ

By ಕಲಬುರಗಿ ಪ್ರತಿನಿಧಿ
|

ಕಲಬುರಗಿ, ಜೂನ್ 18: ಹೆರಿಗೆ ರಜೆ ಪಡೆದು ಹೋಗಿದ್ದ ಶಿಕ್ಷಕಿಯಿಂದ ಲಂಚಕ್ಕೆ ಬೇಡಿಕೆ ಇಟ್ಟು ಶಿಕ್ಷಣ ಇಲಾಖೆ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಕಲಬುರಗಿಯಲ್ಲಿ ಇಂದು ನಡೆದಿದೆ.

   Sreesanth to make a comeback to Ranji cricket at the age of 37 | Oneindia Kannada

   ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ದ್ವಿತೀಯ ದರ್ಜೆ ಸಹಾಯಕ ಇಂದು ಬೆಳಿಗ್ಗೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಶಿಕ್ಷಕಿಯೊಬ್ಬರು ಹೆರಿಗೆ ರಜೆ ಮುಗಿಸಿ ವಾಪಸ್ಸಾಗಿದ್ದು, ಶಾಲೆಗೆ ಮರಳಿ ಸೇರಿಸಿಕೊಳ್ಳಲು ಇವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಶಿಕ್ಷಕಿಯಿಂದ ಲಂಚ ಪಡೆಯುವಾಗ ಆಳಂದ ಬ್ಲಾಕ್ ಎಜುಕೇಷನ್ ಆಫೀಸರ್ ಈಶ್ವರಪ್ಪ ಹಾಗೂ ದ್ವಿತೀಯ ದರ್ಜೆ ಸಹಾಯ ಶಶಿಕಾಂತ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಕೊಂಡಿದ್ದಾರೆ.

   ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ಮೇಲೆ ಎಸಿಬಿ ದಾಳಿ

   ಎಸ್.ಡಿ.ಎ. ಶಶಿಕಾಂತ್ ಶಿಕ್ಷಕಿಯಿಂದ 5 ಸಾವಿರ ರೂಪಾಯಿ ಲಂಚ ಪಡೆದಿದ್ದಾರೆ. ನಂತರ ಆ ಹಣವನ್ನು ಬಿಇಒ ಈಶ್ವರಪ್ಪಗೆ ಮುಟ್ಟಿಸಿದ್ದಾರೆ. ಈ ಸಂದರ್ಭ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಯವರ ಮನೆಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಶಿಕ್ಷಕಿಯೊಬ್ಬರು ಪಡೆದಿದ್ದ ಹೆರಿಗೆ ರಜೆಯ ನಂತರ ಶಾಲೆಗೆ ಸೇರಿಸಿಕೊಳ್ಳಲು ಹಿರಿಯ ಅಧಿಕಾರಿಯಾದವರು ಹೀಗೆ ಲಂಚ ಪಡೆದುಕೊಂಡಿರುವುದು ಚರ್ಚಿತ ವಿಷಯವಾಗಿದೆ.

   English summary
   Acb raid on education department official who demanded bribe from a teacher came back from maternity leave,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X