• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾವಳಗಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ, ಗರ್ಭಿಣಿ ಸೇರಿ 7 ಮಂದಿ ಸಾವು

|

ಕಲಬುರಗಿ, ಸೆ. 27: ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಅಪಘಾತವಾಗಿರುವ ದಾರುಣ ಘಟನೆ ನಡಿದೆ. ನಿಂತಿದ್ದ ಲಾರಿಯೊಂದಕ್ಕೆ ಗರ್ಭಿಣಿ ಸೇರಿದಂತೆ 7 ಮಂದಿ ಪ್ರಯಾಣಿಸುತ್ತಿದ್ದ ಕಾರೊಂದು ನಸುಕಿನ ಜಾವ ಬಲವಾಗಿ ಗುದ್ದಿದೆ.

ಸಾವಳಗಿ ಬಳಿ ಮುಂಜಾನೆ ಸಂಭವಿಸಿದ ಈ ಭೀಕರ ದುರಂತದಲ್ಲಿ ಕಾರಿನಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಮೃತರ ಪೈಕಿ ನಾಲ್ವರು ಮಹಿಳೆಯರು, ಮೂವರು ಪುರುಷರಿದ್ದರು. ಮೃತರೆಲ್ಲರೂ ಕಲಬುರಗಿ ಜಿಲ್ಲೆ ಆಳಂದದವರು ಎಂದು ತಿಳಿದು ಬಂದಿದೆ. ಮೃತರನ್ನು ಇರ್ಫಾನಾ ಬೇಗಂ( 25) ಗರ್ಭಿಣಿ, ರುಚಿಯಾ ಬೇಗಂ(50), ಅಬೇದಾಬಿ ಬೇಗಂ(50), ಮುನೀರ್(28), ಮಹಮ್ಮದ್ ಅಲಿ(38), ಶೌಕತ್ ಅಲಿ(29) ಹಾಗೂ ಜಯಚುನಬಿ( 60) ಎಂದು ಗುರುತಿಸಲಾಗಿದೆ.

ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿ, ಕಾರ್ ಬಾಗಿಲನ್ನು ಮುರಿದು ಶವವನ್ನು ಹೊರಕ್ಕೆ ತೆಗೆದಿದ್ದಾರೆ. ಶವ ಪರೀಕ್ಷೆ ನಂತರ ಸಂಬಂಧಪಟ್ಟವರಿಗೆ ನೀಡಲಾಗುವುದು. ಲಾರಿ ಚಾಲಕ ನಾಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

English summary
Kalaburagi: A pregnant and Seven persons were killed when the car in which they were traveling hit a parked lorry near Savalagi village, Kalaburagi district on Sunday(Sept 27) morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X