ಸೆಲ್ಫಿ ವಿಡಿಯೋ ಮಾಡಿ, ರೈಲಿಗೆ ತಲೆಕೊಟ್ಟ ಜೈ ಕರ್ನಾಟಕ ಕಾರ್ಯಕರ್ತ

ಕಲಬುರಗಿ, ಡಿಸೆಂಬರ್ 29 : ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ತನ್ನ ಸಾವಿಗೆ ಕಾರಣವಾದರ ಹೇಸರು ಹೇಳಿ ವ್ಯಕ್ತಿಯೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಪಿಡಿಎ ಕಾಲೇಜು ಬಳಿಯ ಹಳಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಜೇವರ್ಗಿ ತಾಲೂಕಿನ ಸುಂಬಡ ಗ್ರಾಮದ ನಿವಾಸಿ 26 ವರ್ಷದ ಸುಧಾಕರ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೂರು ದಿನಗಳ ಹಿಂದೆ ಸುಧಾಕರ್ ಪತ್ನಿ ರೇಖಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಆಸ್ಪತ್ರೆಯಲ್ಲಿ ಪತ್ನಿಯನ್ನು ಭೇಟಿಯಾಗಿ ಮನೆಗೆ ಹಿಂದಿರುಗುವಾಗ ಆತ್ಮಹತ್ಯೆಗೆ ಶರಣಾಗಿದ್ದಾರೆ.

A man commits suicide after taking selfie video in Kalaburagi

ಮಲ್ಲಪ್ಪ ಮುರುಳಿ, ಭಾಗವ್ವ ಮುರುಳಿ, ಭೀಮಾಬಾಯ್ ಮತ್ತು ಮಾದೇವಿ ಎಂಬವರೇ ನನ್ನ ಸಾವಿಗೆ ಕಾರಣರಾಗಿದ್ದಾರೆ. ಈ ನಾಲ್ವರಲ್ಲಿ ಮಲ್ಲಪ್ಪ ಎಂಬವರೇ ನನ್ನ ಸಾವಿಗೆ ಕಾರಣವಾದ ಪ್ರಮುಖ ವ್ಯಕ್ತಿ.

ಜೈ ಕರ್ನಾಟಕ ರಕ್ಷಣಾ ವೇದಿಕೆಯ ಅಮರನಾಥ್ ಕುಳಗೇರಿ ಮತ್ತು ರಾಜ್ಯಾಧ್ಯಕ್ಷರಾದ ಮಂಜುನಾಥ್ ಹಾಗರಗಿ ಅವರು ನನ್ನ ಸಾವಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಅಂತಾ ವಿಡಿಯೋದಲ್ಲಿ ಹೇಳಿ ಸುಧಾಕರ್ ಚಲಿಸುವ ರೈಲಿಗೆ ತಲೆಕೊಟ್ಟಿದ್ದಾನೆ.

ಸೆಲ್ಫಿ ವಿಡಿಯೋದಲ್ಲಿ ಸುಧಾಕರ್ ಹೇಳಿರುವ ನಾಲ್ವರು ಪತ್ನಿಯ ಸಂಬಂಧಿಕರು ಎಂದು ಹೇಳಲಾಗಿದೆ. ಘಟನೆ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+