• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಾಯಿಯೊಂದಿಗೆ ಜೈಲು ಸೇರಿದ್ದ 3 ವರ್ಷದ ಬಾಲಕಿ ಸಾವು: ಭಾರೀ ಪ್ರತಿಭಟನೆ

|

ಕಲಬುರಗಿ, ಜನೆವರಿ 4: ತಾಯಿಯೊಂದಿಗೆ ಜೈಲಿಗೆ ಕಳುಹಿಸಲ್ಪಟ್ಟಿದ್ದ ಮೂರು ವರ್ಷದ ಬಾಲಕಿ ಮೃತ ಪಟ್ಟಿರುವ ಘಟನೆ ಶನಿವಾರ (ಜ.2) ದಂದು ಕಲಬುರಗಿಯಲ್ಲಿ ನಡೆದಿದೆ.

ಬಾಲಕಿಯ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ನೂರಾರು ಜನರು, ಕಲಬುರಗಿಯ ಗುಲ್ಬರ್ಗಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಜಿಮ್ಸ್) ಹೊರಗೆ ಸ್ಥಳೀಯ ಪೊಲೀಸರ ವಿರುದ್ಧ ಭಾನುವಾರ ಪ್ರತಿಭಟನೆ ನಡೆಸಿದರು.

ಈಶಾನ್ಯ ಸಾರಿಗೆಯಿಂದ ನಾನ್ ಎಸಿ ಸ್ಲೀಪರ್ ಬಸ್‍ ಟಿಕೆಟ್ ದರ ಆಫರ್

ಮೂರು ವರ್ಷದ ಬಾಲಕಿಗೆ ಅನಾರೋಗ್ಯ ಮತ್ತು ಜೈಲಿನಲ್ಲಿನ ಹದಗೆಟ್ಟ ಸ್ಥಿತಿ ಇದ್ದು, ಬಾಲಕಿಯನ್ನು ಗಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾಳೆ.

"ಮಹಿಳೆಯೊಬ್ಬರನ್ನು ಪ್ರಕರಣವೊಂದರಲ್ಲಿ ಬಂಧಿಸಲಾಗಿದ್ದು, ಆಕೆಯ ಮಗುವಿನೊಂದಿಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಜೈಲಿಗೆ ಹಾಕಲಾಯಿತು. ಮಗುವಿಗೆ ಕಾಯಿಲೆ ಬಿದ್ದು ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿ ಮಗು ಸಾವನ್ನಪ್ಪಿದ್ದು, ತನಿಖೆ ನಡೆಯುತ್ತಿದೆ' ಎಂದು ಕಲಬುರಗಿ ಎಸ್ಪಿ ಸಿಮಿ ಮೆರಿಯಮ್ ಜಾರ್ಜ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಜೇವರ್ಗಿ ಕಾಂಗ್ರೆಸ್ ಶಾಸಕ ಡಾ.ಅಜಯ್ ಸಿಂಗ್, "ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶದ ಸಂದರ್ಭದಲ್ಲಿ ಡಿ.30 ರಂದು ಎರಡು ಗುಂಪುಗಳ ನಡುವೆ ಜಗಳವಾಯಿತು. ನಮ್ಮ ಪಕ್ಷದ ಜನರನ್ನು ಜಾಮೀನು ರಹಿತ ಕಾನೂನುಗಳ ಅಡಿಯಲ್ಲಿ ಜೈಲಿಗೆ ಹಾಕಲಾಯಿತು. ಪೊಲೀಸರು ಬಿಜೆಪಿ ಜನರನ್ನು ಜಾಮೀನು ಅಪರಾಧಕ್ಕೆ ಒಳಪಡಿಸಿದರು ಮತ್ತು ಅವರಿಗೆ ಪೊಲೀಸ್ ಸ್ಟೇಷನ್ ನಲ್ಲಿಯೇ ಜಾಮೀನು ಸಿಕ್ಕಿತು' ಎಂದು ಆರೋಪಿಸಿದ್ದಾರೆ.

"ಡಿಸೆಂಬರ್ 31 ರಂದು ಪೊಲೀಸರು, ಮಹಿಳೆಯರು ಮತ್ತು ಮಕ್ಕಳನ್ನು ಬಂಧಿಸಿದ್ದಾರೆ. ಶನಿವಾರ ಮೂರು ವರ್ಷದ ಮಗುವನ್ನು ಕೊಲ್ಲಲಾಗಿದೆ. ಇದಕ್ಕೆ ನಾನು ಪೊಲೀಸರನ್ನು ಹೊಣೆಗಾರನನ್ನಾಗಿ ಮಾಡುತ್ತಿದ್ದೇನೆ. ಈ ಪ್ರಕರಣದಲ್ಲಿ ನಮಗೆ ತನಿಖೆಯಾಗಬೇಕು' ಎಂದು ಶಾಸಕ ಡಾ.ಅಜಯ್ ಸಿಂಗ್ ಒತ್ತಾಯಿಸಿದರು.

ಬಾಲಕಿ ಸಾವಿನ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆ ನಡೆಸುವ ಬಗ್ಗೆ ಪ್ರತಿಭಟನಾಕಾರರಿಗೆ ಪೊಲೀಸರು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.

English summary
The dead of a three-year-old girl, who was sent to jail with her mother, took place on Saturday (Jan.2) in Kalaburagi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X