• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಲಬುರ್ಗಿಯಲ್ಲಿ ಗುಣಮುಖರಾದರು ಇಬ್ಬರು ಕೊರೊನಾ ರೋಗಿಗಳು

|

ಕಲಬುರಗಿ, ಮೇ 1: ಕೊರೊನಾ ಸೋಂಕಿನಿಂದ ಗುಣಮುಖರಾದ ಕಲಬುರಗಿ ನಗರದ ಇಬ್ಬರು ರೋಗಿಗಳನ್ನು ಶುಕ್ರವಾರ ಅಸ್ಪತ್ರೆಯಿಂದ ಬಿಡುಗಡೆಗೊಳಿಸಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ ತಿಳಿಸಿದ್ದಾರೆ.

ಕಲಬುರಗಿ ನಗರದ ಮೋಮಿನಪುರ ಪ್ರದೇಶದ 51 ವರ್ಷದ ಪುರುಷ (ರೋಗಿ ಸಂಖ್ಯೆ-255) ಮತ್ತು ಸಂತ್ರಾಸವಾಡಿ ಪ್ರದೇಶದ 35 ವರ್ಷದ ಯುವತಿ(ರೋಗಿ ಸಂಖ್ಯೆ-256) ಇವರು ಗುಣಮುಖರಾಗಿ ಅಸ್ಪತ್ರೆಯಿಂದ‌ ಬಿಡುಗಡೆಗೊಂಡವರು. ಇವರಿಬ್ಬರಿಗೆ ಏಪ್ರಿಲ್ 14ರಂದು ಕೊರೋನಾ ಸೋಂಕು ದೃಢವಾಗಿದ್ದರಿಂದ ಇ.ಎಸ್.ಐ.ಸಿ.ಯಲ್ಲಿ ಚಿಕಿತ್ಸೆಗೆ ದಾಖಲಾಗಿಸಿತ್ತು.

ಮಗುವಿಗೆ ಚಿಕಿತ್ಸೆ ನೀಡಿ ಕೊರೊನಾಗೆ ತುತ್ತಾಗಿದ್ದ ಸರ್ಜನ್ ಗುಣಮುಖ

ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಕೊರೋನಾ‌ ಪಾಸಿಟಿವ್ ಪತ್ತೆಯಾದ 55 ಜನರಲ್ಲಿ ಒಟ್ಟು 14 ಜನ ರೋಗಿಗಳು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 5 ಜನ ನಿಧನ ಹೊಂದಿದ್ದು, 36 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿ.ಸಿ ತಿಳಿಸಿದ್ದಾರೆ.

ಮತ್ತೆರಡು ಕೊರೋನಾ ಪಾಸಿಟಿವ್ ಪತ್ತೆ: ಕಲಬುರಗಿ ನಗರದಲ್ಲಿ ಶುಕ್ರವಾರ ಮತ್ತೆರಡು ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ಇದರಿಂದ ಸೋಂಕು ಪೀಡಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಕಲಬುರಗಿ‌ ನಗರದ ರೋಗಿ ಸಂಖ್ಯೆ-425ರ ನೇರ ಸಂಪರ್ಕದಲ್ಲಿ ಬಂದ ಮೋಮಿನಪುರ ಪ್ರದೇಶದ 20 ವರ್ಷದ ಯುವತಿಗೆ ಹಾಗೂ ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯ ನಗರದ ಸರಾಫ್ ಬಜಾರ್ (ಪುಟಾಣಿ ಗಲ್ಲಿ) ಪ್ರದೇಶದ 56 ವರ್ಷದ ಪುರುಷನಿಗೆ ಕೊರೋನಾ ಸೋಂಕು ಕಂಡುಬಂದಿದೆ.

ಜಿಲ್ಲೆಯಲ್ಕಿ ಸೋಂಕು ಪೀಡಿತ 55 ಜನರಲ್ಲಿ ಒಟ್ಟು 14 ಜನ ರೋಗಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 5 ಜನ ನಿಧನ ಹೊಂದಿದ್ದು, 36 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
2 Covid19 Covid9 Patients Discharged From Hospital In Kalaburagi and 2 More Covid19 Test Postitive In Kalaburagi District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X