ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್ ಗೇಮಿಂಗ್‌ಗೆ ವ್ಯಸನಿಯಾಗಿದ್ದ ಯುವಕ: ವಾಹನಗಳನ್ನು ನಿಲ್ಲಿಸಿ ಹೀಗೆ ಮಾಡುತ್ತಿದ್ದ

|
Google Oneindia Kannada News

ಚಿತ್ತೋರಗಢ ಮಾರ್ಚ್ 26: ಇಂದಿನ ಯುಗದಲ್ಲಿ ಹೆಚ್ಚಿನ ಯುವಕರು ಯಾವುದಾದರೊಂದು ಆನ್‌ಲೈನ್ ಗೇಮ್‌ಗಳನ್ನು ಆಡುವುದನ್ನು ರೂಢಿಸಿಕೊಂಡಿರುತ್ತಾರೆ. ಅನೇಕರು ಆನ್‌ಲೈನ್ ಆಟಗಳಿಗೆ ವ್ಯಸನಿಯಾಗಿದ್ದಾರೆ. ರಾಜಸ್ಥಾನದ ಚಿತ್ತೋರ್ ಗಢ ಜಿಲ್ಲೆಯ ಬನ್ಸೇನ್ ಗ್ರಾಮದಲ್ಲಿ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ 22 ವರ್ಷದ ಇರ್ಫಾನ್ ಆನ್‌ಲೈನ್ ಗೇಮ್ ಫ್ರೀ ಫೈರ್‌ಗೆ ವ್ಯಸನಿಯಾಗಿದ್ದನು.

ಆನ್‌ಲೈನ್ ಗೇಮ್ ಫ್ರೀ ಫೈರ್‌ನ ವಿಚಾರದಲ್ಲಿ ಯುವಕ ಹುಚ್ಚನಂತೆ ವರ್ತಿಸಲು ಪ್ರಾರಂಭಿಸಿರುವುದು ಕಂಡುಬಂದಿದೆ. ಅವನನ್ನು ನಿಯಂತ್ರಣಕ್ಕೆ ತರಲಾಗದೆ ಕುಟುಂಬಸ್ಥರು ಅವನ್ನು ಹಗ್ಗಗಳಿಂದ ಕಟ್ಟಿಹಾಕಬೇಕಾದ ಪರಿಸ್ಥಿತಿ ಉಂಟಾಗಿದೆ. ಯುವಕ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಹ್ಯಾಕರ್-ಹ್ಯಾಕರ್ ಎಂದು ಕೂಗುತ್ತಾನೆ. ಈತನ ಚೇಷ್ಟೆ ನೋಡಿದ ಜನರು ಹಗ್ಗದಿಂದ ಮಂಚಕ್ಕೆ ಕಟ್ಟಿ ಹಾಕಿದ್ದಾರೆ. ಹಗ್ಗ ತೆರೆದ ತಕ್ಷಣ, ಅವನು ಓಡಿಹೋಗುತ್ತಾನೆ. ಮತ್ತೊಂದು ಸ್ಥಳದಲ್ಲಿ ನಿಂತು ಇದೇ ರೀತಿ ವರ್ತಿಸುವುದು ಕಂಡು ಬಂದಿದೆ.

ಈ ವರ್ತಿಸುವ ಯುವಕ ಹೆಸರು ಇರ್ಫಾನ್. ಈತ ಕೆಲವು ದಿನಗಳ ಹಿಂದೆ ಬಿಹಾರದಲ್ಲಿ ಆನ್‌ಲೈನ್ ಗೇಮ್ ಫ್ರೀ ಫೈರ್ ಅನ್ನು ಹಲವು ಗಂಟೆಗಳ ಕಾಲ ಆಡುತ್ತಿದ್ದನು. ಹೀಗಾಗಿ ಆತನನ್ನು ಪೋಷಕರು ರಾಜಸ್ಥಾನದ ಚಿತ್ತೋರ್ ಗಢ ಜಿಲ್ಲೆಯ ಬನ್ಸೇನ್ ಹಳ್ಳಿಗೆ ಕಳುಹಿಸಿದ್ದರು. ಈತ ಹಳ್ಳಿಗೆ ಬಂದರೂ ಆಟ ಆಡುವ ಚಟ ಬಿಟ್ಟಿರಲಿಲ್ಲ. ಗುರುವಾರ ರಾತ್ರಿ ಗೇಮ್ ಆಡುತ್ತಿದ್ದಾಗ ಅವರ ಫೋನ್ ಇದ್ದಕ್ಕಿದ್ದಂತೆ ಸ್ವಿಚ್ ಆಫ್ ಆಗಿತ್ತು. ಅಂದಿನಿಂದ ಹುಚ್ಚನಂತೆ ವರ್ತಿಸತೊಡಗಿದ್ದಾನೆ.

Young man addicted to online gaming: families tired of Young mans behavior

ಮಾಧ್ಯಮದೊಂದಿಗಿನ ಸಂಭಾಷಣೆಯಲ್ಲಿ, ಇರ್ಫಾನ್ ಆನ್‌ಲೈನ್ ಗೇಮಿಂಗ್ ಚಟಕ್ಕೆ ವ್ಯಸನಿಯಾಗಿ ಈ ರೀತಿ ವರ್ತಿಸುತ್ತಿದ್ದಾನೆ ಎಂದು ಕುಟುಂಬ ತಿಳಿಸಿದೆ. ಇದರಿಂದ ಬೇಸತ್ತ ಕುಟುಂಬಸ್ಥರು ಮೊಬೈಲ್ ಪಾಸ್‌ವರ್ಡ್ ಬದಲಾವಣೆ ಮತ್ತು ಐಡಿ ಲಾಕ್‌ನಂತಹ ಕೆಲಸಗಳನ್ನು ಮಾಡಿದ್ದಾರೆ. ರಾತ್ರಿಯಿಡೀ ಕುಟುಂಬಸ್ಥರು ಅವರಿಗೆ ಈ ಬಗ್ಗೆ ವಿವರಿಸಿದರು. ಆಗ ಇರ್ಫಾನ್ ಒಪ್ಪಲಿಲ್ಲ. ಬೆಳಗ್ಗೆ ಆತ ಹೆದ್ದಾರಿಯಲ್ಲಿ ಓಡಲು ಪ್ರಾರಂಭಿಸಿದ್ದಾನೆ. ಇಷ್ಟೇ ಅಲ್ಲ ಜನರನ್ನು ನಿಲ್ಲಿಸಿ ಹ್ಯಾಕರ್‌ಗಳು ಮತ್ತು ಐಡಿಗಳನ್ನು ಹ್ಯಾಕಿಂಗ್ ಮಾಡುವ ಬಗ್ಗೆ ಮಾತನಾಡಿದ್ದಾನೆ. ಆಗ ಜನರು ಆತನನ್ನು ಹಿಡಿದು ಮಂಚದ ಮೇಲೆ ಹಗ್ಗದಿಂದ ಕಟ್ಟಿಹಾಕಿದ್ದಾರೆ.

ಇರ್ಫಾನ್ ನ ಮೊಬೈಲ್ ಫೇಲ್ ಆದ ಕಾರಣ ಆತನ ಮಾನಸಿಕ ಸ್ಥಿತಿ ಹದಗೆಟ್ಟಿದೆ ಎಂದೂ ಜನ ಹೇಳುತ್ತಾರೆ. ಆನ್‌ಲೈನ್ ಗೇಮಿಂಗ್ ಗಾಗಿ ಮೊಬೈಲ್ ಕದಿಯಲು ಪ್ರಾರಂಭಿಸಿದ್ದಾನೆ ಎಂದು ಜನ ಆರೋಪ ಹೊರಿಸತೊಡಗಿದ್ದಾರೆ. ಜೊತೆಗೆ ತನ್ನ ಮೊಬೈಲ್ ಯಾರೋ ಕದ್ದಿದ್ದಾರೆ ಎಂದು ಪದೇ ಪದೇ ಹೇಳುತ್ತಾ ಓಡಾಡುತ್ತಿದ್ದಾನೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲ ಇನ್ನಷ್ಟು ವಿಚಿತ್ರವಾದ ಕೆಲಸಗಳನ್ನು ಮಾಡತೊಡಗಿದ್ದಾನೆ. ಮನೆ ಹಿಂದಿನ ಜಮೀನಿನಲ್ಲಿ ಯಾರೋ ಬೈಕ್ ಸವಾರರು ಬೆಳೆ ಹಾಳು ಮಾಡುತ್ತಿದ್ದಾರೆ ಎಂದು ಹೇಳತೊಡಗಿದ್ದಾನೆ. ಇದರಿಂದ ಬೇಸತ್ತ ಕುಟುಂಬಸ್ಥರು ಇರ್ಫಾನ್‌ ತಂದೆಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ನಂತರ ಅವರು ತಮ್ಮ ಹಳ್ಳಿಯಿಂದ ಮಗನನ್ನು ಬಿಹಾರ್‌ ಗೆ ಕರೆತಂದಿದ್ದಾರೆ. ನಂತರ ಮಗ ಬಿಹಾರಕ್ಕೆ ಹೋದ. ಹಿಂತಿರುಗಿದಾಗ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಯುವಕನ ತಂದೆ ಬಿಹಾರದಲ್ಲಿ ಅಂಗಡಿಯನ್ನು ಹೊಂದಿದ್ದಾರೆ.

English summary
: In today's era, most of the youth play some online game. Many have also become addicted to online games. A similar case has come to the fore in Bansen village of Chittorgarh district of Rajasthan. Here 22-year-old Irfan got addicted to the online game Free Fire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X