ರಾಹುಲ್ ಗಾಂಧಿ ಪೂರ್ವಿಕರ ವಂಶವೃಕ್ಷ ಬಿಚ್ಚಿಟ್ಟ ಟ್ವೀಟ್ ಲೋಕ
ಜೈಪುರ, ನವೆಂಬರ್ 26: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಿಜವಾದ ಗೋತ್ರ ಯಾವುದು ಎಂದು ರಾಜಸ್ಥಾನದ ಪುಷ್ಕರ್‌ನ ಪ್ರಸಿದ್ಧ ಬ್ರಹ್ಮ ದೇವಸ್ಥಾನದ ಅರ್ಚಕರ ಮೂಲಕ ಬಹಿರಂಗಗೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ರಾಹುಲ್ ಗಾಂಧಿ ಅವರು ತಮ್ಮ ಗೋತ್ರವನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ? ಇಷ್ಟು ದಿನ ಈ ಬಗ್ಗೆ ಮಾತನಾಡಲಿಲ್ಲವೇಕೆ? ಕಾಶ್ಮೀರಿ ಪಂಡಿತರು ಎಂದು ಹೇಗೆ ಹೇಳಿಕೊಳ್ಳುತ್ತಾರೆ? ಹಾಗಾದರೆ, ತಮ್ಮ ಗೋತ್ರದವರಿಗೆ ಇವರ ಕೊಡುಗೆ ಏನು? ಗೋತ್ರ ಆಯ್ಕೆ ಬಗ್ಗೆ ಗೊಂದಲ ಪರಿಹರಿಸಲು ನೆಹರೂ ವಂಶವೃಕ್ಷವನ್ನು ಕೂಡಾ ಟ್ವೀಟ್ ಲೋಕ ಬಿಚ್ಚಿಟ್ಟಿದೆ.
'ರಾಹುಲ್ ಗಾಂಧಿ ಅವರು ಜನಿವಾರ ಧರಿಸುವುದಾದರೆ ಅವರು ಯಾವ ರೀತಿಯ ಯಜ್ಞೋಪವೀತ ಧರಿಸುತ್ತಾರೆ? ಅವರ ಗೋತ್ರ ಯಾವುದು?' ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಇತ್ತೀಚೆಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ರಾಹುಲ್, ನನ್ನ ಗೋತ್ರ ಭಾರತೀಯ ಎಂದು ಹೇಳಿದ್ದರು.
ರಾಹುಲ್ ಈಗ ಕಾಶ್ಮೀರ ಮೂಲದ ಕೌಲ ಬ್ರಾಹ್ಮಣ, ದತ್ತಾತ್ರೇಯ ಗೋತ್ರ ಎಂದು ಪುಷ್ಕರ ದೇಗುಲದಲ್ಲಿ ನಮೂದಿಸಿದ್ದಾರೆ. ಈ ಬಗ್ಗೆ ಚರ್ಚೆ ಜಾರಿಯಲ್ಲಿದೆ.

ರಾಹುಲ್ ಕೌಲ ಬ್ರಾಹ್ಮಣ ಎಂದು ನಮೂದಿಸಲಾಗಿದೆ
ರಾಜಸ್ಥಾನದ ಪುಷ್ಕರ್‌ನ ಪ್ರಸಿದ್ಧ ಬ್ರಹ್ಮ ದೇವಸ್ಥಾನದ ಅರ್ಚಕರ ಮೂಲಕ ತಿಳಿದು ಬಂದ ಮಾಹಿತಿಯಂತೆ, ಎಐಸಿಸಿ ಅಧ್ಯಕ್ಷ ರಾಹುಲ್ ಈಗ ಕಾಶ್ಮೀರ ಮೂಲದ ಕೌಲ ಬ್ರಾಹ್ಮಣ, ದತ್ತಾತ್ರೇಯ ಗೋತ್ರ ಎಂದು ಪುಷ್ಕರ ದೇಗುಲದಲ್ಲಿ ನಮೂದಿಸಿದ್ದಾರೆ. ಈ ಬಗ್ಗೆ ಚರ್ಚೆ ಜಾರಿಯಲ್ಲಿದೆ.
|
ನೆಹರೂ- ಗಾಂಢಿ ವಂಶವೃಕ್ಷ
ಕೊಟ್ಟ ಹೆಣ್ಣು ಕುಲಕ್ಕೆ ಹೊರಕ್ಕೆ ಫಿರೋಜ್ ಗಾಂಢಿ ಅವರನ್ನು ವರಿಸಿದ ಮೇಲೆ ಆ ವಂಶದ ಗೋತ್ರವನ್ನು ಬಳಸಬೇಕು. ನೆಹರೂ ವಂಶಕ್ಕೂ ರಾಹುಲ್ ಗೂ ಏನು ಲಿಂಕ್ ಎಂದು ನೆಹರೂ ವಂಶಾವಳಿಯ ಚಿತ್ರಣ ನೀಡಲಾಗಿದೆ.
|
ಮೇಲ್ವರ್ಗದ ಗೋತ್ರವೇ ಏಕೆ?
ರಾಹುಲ್ ಅವರೇ ನಿಮಗೆ ಇಂದು ಹೊಸ ಗೋತ್ರ ಸಿಕ್ಕಿತು ಎಂದು ತಿಳಿದು ಬಂದಿದೆ. ಹಲವಾರು ದೇಗುಲಗಳನ್ನು ಸುತ್ತಿದ ಬಳಿಕ ನಿಮಗೆ ಬ್ರಾಹ್ಮಣ ಗೋತ್ರವೇ ಸಿಕ್ಕಿತೆ. ಕೆಳಜಾತಿಯ ಗೋತ್ರವನ್ನೇ ಆಯ್ಕೆ ಮಾಡಿಕೊಳ್ಳಬಹುದಾಗಿತ್ತಲ್ಲ
|
ರಾಹುಲ್ ಅವರಿಗೆ ಅಜ್ಜಿಯ ಗೋತ್ರ ಸಿಗುತ್ತದೆ
ಹಿಂದೂ ಸಂಪ್ರದಾಯದಲ್ಲಿ ಮದುವೆಯಾದ ಮೇಲೆ ಹೆಣ್ಣಿಗೆ ಆಕೆಯ ಪತಿಯ ಗೋತ್ರ ಸಿಗುತ್ತದೆ. ತಂದೆಯಿಂದ ಮಗುವಿಗೆ ಹೀಗೆ...ಒಂದೇ ಗೋತ್ರದವರು ಮದುವೆಯಾಗುವುದಿಲ್ಲ. ರಾಹುಲ್ ಅವರ ತಂದೆ ರಾಜೀವ್ ಅವರಿಗೆ ಅವರ ತಂದೆ ಫಿರೋಜ್ ಜಹಾಂಗೀರ್ ಗಾಂಢಿ ಅವರಿಂದ ಸಿಗಬಹುದೇ ಹೊರತೂ ಅಜ್ಜ ನೆಹರೂ ಮನೆ ಕಡೆಯಿಂದ ಅಲ್ಲ.
|
ಕಾಯಸ್ಥರ ವರ್ಣ ನಿರ್ಣಯ
ಕಾಯಸ್ಥರ ವರ್ಣ ನಿರ್ಣಯವಾಗದಿದ್ದರೆ ಗೋತ್ರದ ಬಗ್ಗೆಯೂ ತಿಳಿಯುವುದಿಲ್ಲ. ವೇದ ಕಾಲದಂತೆ ಬ್ರಾಹ್ಮಣರಿಗೆ ಮಾತ್ರ ಗೋತ್ರಗಳಿತ್ತು. ಸವರ್ಣೀಯರು ತಮ್ಮ ಪುರೋಹಿತರ ಗೋತ್ರವನ್ನೇ ಬಳಸುತ್ತಿದ್ದರು. ಇಲ್ಲಿ ನೆಹರೂ ಅವರು ಪಂಡಿತರು, ರಾಹುಲ್ ಅವರು ನೆಹರೂ ಗೋತ್ರ ಬಳಸಲು ಅರ್ಹರಿದ್ದಾರೆ.
|
ಅಮಿತ್ ಶಾ ಗೋತ್ರ ತಿಳಿಯಲಿ
ಇದೇ ಬಿಸಿಯಲ್ಲಿ ಅಮಿತ್ ಶಾ ಅವರು ಕೂಡಾ ಹಿಂದು, ಜೈನರಲ್ಲ ಎಂಬುದನ್ನು ತಿಳಿಯುವಂತೆ ಮಾಡಿ.












Click it and Unblock the Notifications