Get Updates
Get notified of breaking news, exclusive insights, and must-see stories!

ಜೆಸಿಬಿ ಹಿಡಿದು ಮಹಿಳೆಯ ಜೋಕಾಲಿ: ಅಧಿಕಾರಿಗಳು ಫುಲ್ ಗಲಿಬಿಲಿ!

ಜೈಪುರ್, ನವೆಂಬರ್.22: ಒಲಿದರೆ ನಾರಿ, ಮುನಿದರೆ ಮಾರಿ ಅನ್ನೋ ಮಾತು ಕೇಳಿದ್ದೀರಿ ಅಲ್ವಾ. ಇಲ್ಲೊಬ್ಬ ಮಹಿಳೆ ತೋರಿದ ರೌದ್ರಾವತಾರ ಇಂದು ಇಡೀ ದೇಶಾದ್ಯಂತ ಸಖತ್ ಸದ್ದು ಮಾಡುತ್ತಿದೆ.

ಅತಿಕ್ರಮಣ ಒತ್ತುವರಿ ತೆರವಿಗೆ ಧಾವಿಸಿದ ಅಧಿಕಾರಿಗಳ ವಿರುದ್ಧವೇ ಮಹಿಳೆ ಕೆರಳಿ ಕೆಂಡವಾಗಿದ್ದಾಳೆ. ಇದಿಷ್ಟೇ ಆಗಿದ್ದರೆ, ಅಷ್ಟರ ಮಟ್ಟಿಗೆ ಸುದ್ದಿ ಆಗುತ್ತಿರುಲಿಲ್ಲ. ಆದರೆ, ಅಕ್ರಮ ತೆರವಿಗೆ ಮುಂದಾದ ಜೆಸಿಬಿ ವಾಹನಗಳಿಗೆ ಅಂಜದೇ ಮಹಿಳೆ ಮೊಂಡುತನ ಪ್ರದರ್ಶಿಸಿದ್ದಾರೆ.

ಹಿರಿಯ ಅಧಿಕಾರಿಗಳ ಎದುರಿನಲ್ಲೇ ಅಕ್ರಮ ಕಟ್ಟಡಗಳ ತೆರವಿಗೆ ಮುಂದಾದ ಜೆಸಿಬಿ ವಾಹನಕ್ಕೆ ಮಹಿಳೆ ಜೋತು ಬಿದ್ದು ನೇತಾಡಿದ್ದಾಳೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆ ಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

The Women Tries To Climb JCM Machine In rajasthan

ಅಷ್ಟಕ್ಕೂ ಇಂಥದೊಂದು ಘಟನೆ ನಡೆದಿದ್ದು ರಾಜಸ್ಥಾನದ ಜಾಲೋರ್ ನಲ್ಲಿ ನಡೆದಿದೆ. ಮಂಡವಾಲಾ ಗ್ರಾಮದ ರೇಖಾ ದೇವಿ, ಜಾಲೋರ್ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಒತ್ತುವರಿ ತೆರವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸೊಪ್ಪು ಹಾಕದೇ ಅಧಿಕಾರಿಗಳು ಅಕ್ರಮ ತೆರವಿಗೆ ಮುಂದಾದಾಗ ರೇಖಾ ದೇವಿ ಸ್ವತಃ ತಾವೊಬ್ಬ ಮಹಿಳೆಯನ್ನೊದನ್ನೂ ಲೆಕ್ಕಿಸದೇ, ಜೆಸಿಬಿಗೆ ಅಡ್ಡಲಾಗಿ ನಿಂತಿದ್ದಾರೆ. ಹೀಗೆ ಮುಂದೆ ಸಾಗಿ ಬಂದ ವಾಹನಕ್ಕೂ ಅಂಜದೇ ಅದರ ಮೇಲೆ ಜೋತು ಬೀಳುವ ಪ್ರಹಸನಕ್ಕೆ ಕೈ ಹಾಕಿದ್ದಾರೆ.

ಇನ್ನು, ಮಹಿಳೆಯ ತಮ್ಮ ಜಾಗವ್ನನು ಉಳಿಸಿಕೊಳ್ಳುವುದಕ್ಕೆ ಮಹಿಳೆ ತೋರಿದ ದುಸ್ಸಾಹಸವನ್ನು ನೋಡಿ ಜೆಸಿಬಿ ಚಾಲಕನೇ ವಾಹನವನ್ನು ಹಿಂದೆ ತೆಗೆದುಕೊಂಡಿದ್ದಾರೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+