• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಗುವಿಗೆ 'ಕಾಂಗ್ರೆಸ್' ಎಂದು ನಾಮಕರಣ ಮಾಡಿದ ರಾಜಸ್ಥಾನ ದಂಪತಿ

|

ಜೈಪುರ, ಜನವರಿ 22: ರಾಜಸ್ಥಾನ ದಂಪತಿ ತಮ್ಮ ಮಗುವಿಗೆ 'ಕಾಂಗ್ರೆಸ್' ಎಂದು ನಾಮಕರಣ ಮಾಡಿದ್ದಾರೆ.

ಇವರು ರಾಜಸ್ಥಾನ ಮುಖ್ಯಮಂತ್ರಿ ಕಚೇರಿಯಲ್ಲಿ ಮೀಡಿಯಾ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಮೊದಲಿನಿಂದಲೂ ಕಾಂಗ್ರೆಸ್‌ ಮೇಲೆ ಅತಿಯಾದ ಒಲವು ಇದ್ದ ಕಾರಣ ಮಗುವಿಗೆ ಕಾಂಗ್ರೆಸ್ ಎಂದು ಹೆಸರಿಟ್ಟಿದ್ದಾರೆ.

ಹಿರಿಯೂರಲ್ಲಿ ಕಳೆದುಕೊಂಡಿದ್ದ ಮಗು ಇಂದು ತಂದೆಯ ಮಡಿಲು ಸೇರಿತು

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​ ಕಾರ್ಯಕರ್ತ ಮತ್ತು ಸಿಎಂ ಅಶೋಕ್​ ಗೆಹ್ಲೋಟ್ ಕಚೇರಿಯಲ್ಲಿ ಮೀಡಿಯಾ ಆಫೀಸರ್ ಆಗಿರುವ ವಿನೋದ್​ ಜೈನ್​​ ಎಂಬುವರು ತನ್ನ ಮಗುವಿಗೆ ಕಾಂಗ್ರೆಸ್​ ಜೈನ್​​ ಎಂದು ನಾಮಕರಣ ಮಾಡಿದ್ದಾರೆ.

ನಮ್ಮ ಮುಂದಿನ ಪೀಳಿಗೆಯೂ ಕಾಂಗ್ರೆಸ್​​ ಪಕ್ಷವನ್ನೇ ಬೆಂಬಲಿಸಬೇಕೆಂಬುದು ನಮ್ಮ ಆಶಯ ಎಂದು ಮಾಧ್ಯಮದವರೊಂದಿಗೆ ವಿನೋದ್​​​​ ಜೈನ್ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.

ನಮ್ಮ ಇಡೀ ಕುಟುಂಬ ಕಾಂಗ್ರೆಸ್​ನೊಂದಿಗೆ ಗುರುತಿಸಿಕೊಂಡಿದೆ. ಮೊದಲಿನಿಂದಲೂ ನಾವು ಕಾಂಗ್ರೆಸ್ ಜತೆಗೆ​​ ನಿಷ್ಠೆ ಹೊಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.

English summary
Recently, a Congress worker who works in the Rajasthan Government named his baby 'Congress' after his blind love for the political party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X