ನಾಲ್ಕು ರಾಜ್ಯಸಭಾ ಸ್ಥಾನಕ್ಕೆ ರಾಜಸ್ಥಾನ ಕಾಂಗ್ರೆಸ್‌ ಕಾದಾಟ

ಜೈಪುರ, ಜೂ 10: ರಾಜ್ಯಸಭಾ ಚುನಾವಣೆಗೆ ಮುನ್ನ ರಾಜಸ್ಥಾನದಲ್ಲಿ ಕಾಂಗ್ರೆಸ್‌ನೊಂದಿಗೆ ಸೇರುವುದಾಗಿ ಘೋಷಿಸಿದ್ದ ಬಹುಜನ ಸಮಾಜವಾದಿ ಪಕ್ಷದ ನಾಲ್ವರು ಶಾಸಕರು ಶುಕ್ರವಾರ ಕಾಂಗ್ರೆಸ್‌ ಮುಖಂಡರೊಂದಿಗೆ ಬಂದು ಮತ ಚಲಾಯಿಸಿದರು. ಹೀಗಾಗಿ ನಾಲ್ಕು ಸ್ಥಾನ ಗೆಲ್ಲಲು ಕಾಂಗ್ರೆಸ್‌ ಕದಾಟ ನಡೆಸಿದೆ.

ಬಿಎಸ್‌ಪಿಯಲ್ಲಿದ್ದ ಈ 6 ಶಾಸಕರು ಶುಕ್ರವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಜೊತೆಗೆ ವಿಧಾನಸೌಧಕ್ಕೆ ಬಂದು ಮತ ಚಲಾಯಿಸಿದರು. ವಿಧಾನಸೌಧದಲ್ಲಿ ಮತದಾನ ಬೆಳಗ್ಗೆ 9 ಗಂಟೆಗೆ ಆರಂಭವಾಗಿದ್ದು, ಸಂಜೆ 4ರವರೆಗೆ ನಡೆಯಲಿದೆ. ಸಂಜೆ 5 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ.

ಅಶೋಕ್‌ ಗೆಹ್ಲೋಟ್ ಅವರು ಬೆಳಿಗ್ಗೆ 9 ಗಂಟೆಗೆ ಸ್ವಲ್ಪ ಮೊದಲು ವಿಧಾನಸಭೆಯನ್ನು ತಲುಪಿದರು. ಕಾಂಗ್ರೆಸ್ ಶಾಸಕರೊಂದಿಗೆ ಮೊದಲ ಬಸ್‌ನಲ್ಲಿ ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳಲ್ಲಿ ಒಬ್ಬರಾದ ರಣದೀಪ್ ಸುರ್ಜೇವಾಲಾ ಅವರು ವಿಧಾನಸಭೆಯನ್ನು ತಲುಪಿದರು.

Rajasthan Congress Fight for Four Rajya Sabha Seats

ಬಿಜೆಪಿ ಶಾಸಕರು ಎರಡು ಬಸ್‌ಗಳಲ್ಲಿ ವಿಧಾನಸಭೆಗೆ ಆಗಮಿಸಿದರೆ, ಕಾಂಗ್ರೆಸ್ ಮತ್ತು ಇತರ ಬೆಂಬಲಿಗ ಶಾಸಕರಿರುವ ಎರಡು ಬಸ್‌ಗಳು ಸ್ವಲ್ಪ ಸಮಯದ ನಂತರ ವಿಧಾನಸಭೆಗೆ ಬಂದವು. ನಾಲ್ವರು ಕಾಂಗ್ರೆಸ್ ಶಾಸಕರಲ್ಲಿ ಒಬ್ಬರಾದ ಸಂದೀಪ್ ಯಾದವ್, ಹೌದು, ನಾವು ಕಾಂಗ್ರೆಸ್‌ಗೆ ಮತ ಹಾಕಿದ್ದೇವೆ. ಇದು ಸಂಪೂರ್ಣವಾಗಿ ಸಾಂವಿಧಾನಿಕವಾಗಿದೆ ಎಂದು ಹೇಳಿದರು.

ಶಾಸಕರಿಗೆ ಆಮಿಷವೊಡ್ಡುವುದನ್ನು ತಡೆಯಲು ಕಾಂಗ್ರೆಸ್‌ ಮತ್ತು ಬಿಜೆಪಿ ಎರಡು ಕಡೆಯವರು ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದರು. ಜೈಪುರದ ಅಮೇರ್ ಪ್ರದೇಶದಲ್ಲಿ ತನ್ನ ಶಾಸಕರನ್ನು ಭದ್ರಪಡಿಸಿಕೊಳ್ಳಲು ಕಾಂಗ್ರೆಸ್‌ ಸರ್ಕಾರವು 12 ಗಂಟೆಗಳ ಇಂಟರ್‌ನೆಟ್‌ ಕೂಡ ನಿರ್ಬಂಧಿಸಿತ್ತು. ಆಡಳಿತ ಪಕ್ಷ ಕಾಂಗ್ರೆಸ್ ಸುರ್ಜೆವಾಲಾ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಅವರನ್ನು ರಾಜ್ಯಸಭೆಗೆ ಕಣಕ್ಕಿಳಿಸಿದೆ. ಬಿಜೆಪಿ ಘನಶ್ಯಾಮ್ ತಿವಾರಿ ಅವರನ್ನು ಕಣಕ್ಕಿಳಿಸಿದೆ. ಸುಭಾಷ್ ಚಂದ್ರ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿದ್ದಾರೆ.

ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ನಮ್ಮ ಮೂವರು ಶಾಸಕರೂ ಕೂಡ ಗೆಲ್ಲುತ್ತಾರೆ. ಬಹುಮತವಿಲ್ಲದಿದ್ದರು ಸುಭಾಷ್‌ಚಂದ್ರ ಅವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಆಟವನ್ನು ಬಿಜೆಪಿ ಆಡಿದೆ. ಇದು ತುಂಬಾ ಜನ ಬಿಜೆಪಿ ಶಾಸಕರಿಗೂ ಇಷ್ಟವಿಲ್ಲ ಎಂದು ಗೊತ್ತಿದೆ ಎಂದು ಹೇಳಿದರು.

Rajasthan Congress Fight for Four Rajya Sabha Seats

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿ ಗೆದ್ದು 2019ರಲ್ಲಿ ಈಗ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿರುವ ಆರು ಶಾಸಕರಿಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಅಭ್ಯರ್ಥಿಗಳಿಗೆ ಮತ ಹಾಕದಂತೆ ಬಿಎಸ್‌ಪಿ ರಾಜಸ್ಥಾನದ ಘಟಕದ ರಾಜ್ಯಾಧ್ಯಕ್ಷ ಭಗವಾನ್ ಸಿಂಗ್ ಬಾಬಾ ವಿಪ್ ಜಾರಿ ಮಾಡಿದ್ದರು. ಆದರೆ, ಶಾಸಕರು ಮತ ಚಲಾಯಿಸಲು ಮುಂದೆ ಬಂದಿದ್ದಾರೆ. ರಾಜ್ಯಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಎಸ್‌ಪಿ ಮತ್ತು ಇತರ ಕೆಲವು ಶಾಸಕರು ಕಳೆದ ವಾರ ಅಸಮಾಧಾನ ವ್ಯಕ್ತಪಡಿಸಿದ್ದರು.

ರಾಜಸ್ಥಾನ ವಿಧಾನಸಭೆ 200 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್ 108, ಬಿಜೆಪಿ 71, ಸ್ವತಂತ್ರ 13, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್‌ಎಲ್‌ಪಿ) ಮೂರು, ಸಿಪಿಐ(ಎಂ) ಮತ್ತು ಭಾರತೀಯ ಬುಡಕಟ್ಟು ಪಕ್ಷ (ಬಿಟಿಪಿ) ತಲಾ ಇಬ್ಬರು ಶಾಸಕರನ್ನು ಹೊಂದಿದೆ. ಮೂರು ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್‌ಗೆ 123 ಮತಗಳ ಅಗತ್ಯವಿದೆ. ಆದರೆ ತನಗೆ ಒಟ್ಟು 126 ಶಾಸಕರ ಬೆಂಬಲವಿದೆ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ. ಒಬ್ಬ ಅಭ್ಯರ್ಥಿ ಗೆಲುವಿಗೆ 41 ಮತಗಳ ಅಗತ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+