ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯಿಂದ ನಾಲ್ವರು ಸಚಿವರು ಸೇರಿದಂತೆ 11 ಜನರ ಉಚ್ಛಾಟನೆ

|
Google Oneindia Kannada News

ಜೈಪುರ, ನವೆಂಬರ್ 23: ಟಿಕೆಟ್ ಸಿಗದ ಕಾರಣಕ್ಕೆ ಬಂಡಾಯ ಎದ್ದಿರುವ ಬಿಜೆಪಿಯ ನಾಲ್ವರು ಸಚಿವರು ಸೇರಿದಂತೆ 11 ಸದಸ್ಯರನ್ನು ರಾಜಸ್ಥಾನ ಬಿಜೆಪಿ ಉಚ್ಛಾಟನೆ ಮಾಡಿದೆ.

ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹನ್ನೊಂದು ಜನರನ್ನು ಕೈಬಿಟ್ಟಿರುವುದಾಗಿ ಬಿಜೆಪಿಯೇ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಸುರೇಂದ್ರ ಗೋಯಲ್, ಲಕ್ಷ್ಮಿನಾರಾಯಣ ದೇವೆ, ರಾಧೇಶ್ಯಾಮ್ ಗಂಗಾನಗರ್, ಹೇಮಸಿಂಗ್ ಭದಾನಾ, ರಾಜಕುಮಾರ್ ರಿನಾವಾ, ರಾಮೇಶ್ವರ್ ಭಾಟಿ, ಕುಲದೀಪ್ ಧಂಕಡ್, ದೀನ್ ದಯಾಳ್ ಕುಮಾವತ್. ಕೃಷ್ಣರಾಮ್ ನೈ, ಧಾನ್ ಸಿಂಗ್ ರಾವತ್ ಮತ್ತು ಅನಿತಾ ಕಟಾರಾ ಅವರನ್ನು ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Rajasthan BJP Suspends 11 Rebels, Including 4 Ministers

ಶಮನವಾಗದ ಬಂಡಾಯ, ಕಾಂಗ್ರೆಸ್ಸಿಗೆ ಕಾಂಗ್ರೆಸ್ಸಿಗರಿಂದಲೇ ತಾಪತ್ರಯ!ಶಮನವಾಗದ ಬಂಡಾಯ, ಕಾಂಗ್ರೆಸ್ಸಿಗೆ ಕಾಂಗ್ರೆಸ್ಸಿಗರಿಂದಲೇ ತಾಪತ್ರಯ!

ಟಿಕೆಟ್ ಸಿಗದಿದ ಕಾರಣಕ್ಕೆ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಈ ಎಲ್ಲಾ ಸದಸ್ಯರು, ನಾಮಪತ್ರ ಹಿಂಪಡೆಯಲು ಒಪ್ಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ರಾಜಸ್ತಾನ ಅಖಾಡದಲ್ಲಿ ಮೋದಿ-ಯೋಗಿಯೇ ಬಿಜೆಪಿಗೆ ಜೀವಾಳ, ಕಾಂಗ್ರೆಸ್ ಗೆ ರಾಹುಲ್ರಾಜಸ್ತಾನ ಅಖಾಡದಲ್ಲಿ ಮೋದಿ-ಯೋಗಿಯೇ ಬಿಜೆಪಿಗೆ ಜೀವಾಳ, ಕಾಂಗ್ರೆಸ್ ಗೆ ರಾಹುಲ್

ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಪ್ರಕಟವಾಗಲಿದೆ. 200 ಕ್ಷೇತ್ರಗಳ ರಾಜಸ್ಥಾನ ವಿಧಾನಸಭೆಯಲ್ಲಿ ಪ್ರಸ್ತುತ ಬಿಜೆಪಿಯ ವಸುಂಧರಾ ರಾಜೆ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆ.

English summary
The Rajasthan BJP has suspended 11 senior leaders, including four ministers in Chief Minister Vasundhara Raje's cabinet, for refusing to withdraw their nominations for the upcoming Rajasthan assembly elections in favour of alternative candidates picked by the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X