ರಾಜಸ್ಥಾನ ಚುನಾವಣೆ : ರೆಬಲ್ ನಾಯಕರನ್ನು ಉಚ್ಛಾಟಿಸಿದ ಕಾಂಗ್ರೆಸ್
ಜೈಪುರ, ನವೆಂಬರ್ 28 : ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ರೆಬಲ್ ನಾಯಕರನ್ನು ರಾಜಸ್ಥಾನ ಕಾಂಗ್ರೆಸ್ ಉಚ್ಛಾಟನೆಗೊಳಿಸಿದೆ. ಡಿಸೆಂಬರ್ 7ರಂದು ರಾಜಸ್ಥಾನ ವಿಧಾನಸಭೆಯ 200 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
7 ಕಾಂಗ್ರೆಸ್ ರೆಬಲ್ ನಾಯಕರು ನಾಮಪತ್ರ ವಾಪಸ್ ಪಡೆಯಲು ನಿರಾಕರಿಸಿದ್ದರು. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದರೂ ತಮ್ಮ ನಾಮಪತ್ರವನ್ನು ವಾಪಸ್ ಪಡೆದಿರಲಿಲ್ಲ. ಆದ್ದರಿಂದ, ಅವರನ್ನು ಉಚ್ಛಾಟನೆ ಮಾಡಲಾಗಿದೆ.
ನಾಮಪತ್ರವನ್ನು ವಾಪಸ್ ಪಡೆಯುವಂತೆ ಪಕ್ಷದ ಹೈಕಮಾಂಡ್ ಸೂಚನೆ ನೀಡಿತ್ತು. ಆದರೆ, ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ ಪಡೆಯದ ಕಾರಣ ಉಚ್ಛಾಟನೆಗೊಂಡಿದ್ದಾರೆ. ಈಗಾಗಲೇ ಟಿಕೆಟ್ ಹಂಚಿಕೆ ಬಳಿಕ ಪಕ್ಷ ಹಲವು ಕ್ಷೇತ್ರಗಳಲ್ಲಿ ಅಸಮಾಧಾನ ಎದುರಿಸಿದೆ.

ಸುಮಾರು 24 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಥಳೀಯ ನಾಯಕರಿಗೆ ಸಹಕಾರ ಸಿಗುತ್ತಿಲ್ಲ. ಜಾತಿ ಸೇರಿದಂತೆ ವಿವಿಧ ಕಾರಣಗಳಿಗಾಗಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಬೆಂಬಲಿಸಲು ನಾಯಕರು ನಿರಾಕರಿಸುತ್ತಿದ್ದಾರೆ. ಆದ್ದರಿಂದ, ಪಕ್ಷ ಶಿಸ್ತುಕ್ರಮವನ್ನು ತೆಗೆದುಕೊಂಡಿದೆ.
ಈಗಾಗಲೇ ಬಂದ ಸಮೀಕ್ಷೆಗಳು ಸಹ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಉಂಟು ಮಾಡಲಿವೆ ಎಂದು ಹೇಳಿತ್ತು. ಆದ್ದರಿಂದ, ಪಕ್ಷ ರೆಬಲ್ ನಾಯಕರನ್ನು ಉಚ್ಛಾಟನೆಗೊಳಿಸಿದೆ.












Click it and Unblock the Notifications