ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ: ಸೋನಿಯಾ, ಎಂಎಂ ಸಿಂಗ್ ಜತೆಗೆ ಮಾನ್ವೇಂದ್ರ ಸ್ಟಾರ್ ಪ್ರಚಾರಕ

|
Google Oneindia Kannada News

Recommended Video

ರಾಜಸ್ಥಾನ: ಸೋನಿಯಾ, ಎಂಎಂ ಸಿಂಗ್ ಜತೆಗೆ ಮಾನ್ವೇಂದ್ರ ಸ್ಟಾರ್ ಪ್ರಚಾರಕ | Oneindia Kannada

ಜೈಪುರ, ನವೆಂಬರ್ 20: ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವು ಬಿರುಸಿನ ಪ್ರಚಾರಕ್ಕೆ ಎಲ್ಲಾ ರೀತಿಯಿಂದಲೂ ಸಜ್ಜಾಗುತ್ತಿದೆ. ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಪ್ರಕಟಿಸಿದ್ದು, ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಲ್ಲದೆ, ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ಮಾನ್ವೇಂದ್ರ ಸಿಂಗ್ ಅವರ ಹೆಸರು ಸೇರಿಸಲಾಗಿದೆ.

ರಾಜಸ್ಥಾನದ ಅಸೆಂಬ್ಲಿ ಯುದ್ಧ ಗೆಲ್ಲಲು ನಾಲ್ಕು ಮಂದಿ ಸ್ಟಾರ್ ಪ್ರಚಾರಕರನ್ನು ಹೆಸರಿಸಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೆಚ್ಚು ಪ್ರಚಾರ ಸಭೆ, ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

Manvendra, Acharya Pramod and Alpesh some interesting names among Congress’ star campaigners

ಸ್ಟಾರ್ ಪ್ರಚಾರಕರು: ನಟ, ಲೋಕಸಭಾ ಸದಸ್ಯ ರಾಜ್ ಬಬ್ಬರ್, ಪಂಜಾಬ್ ಸಚಿವ, ಮಾಜಿ ಕ್ರಿಕೆಟರ್ ನವಜ್ಯೋತ್ ಸಿಂಗ್ ಸಿಧು ಹೆಸರು ನಿರೀಕ್ಷಿತವಾಗಿದೆ. ಆದರೆ, ಜಸ್ವಂತ್ ಸಿಂಗ್ ಅವರ ಪುತ್ರ ಮಾನ್ವೇಂದ್ರ ಅವರನ್ನು ಸ್ಟಾರ್ ಪ್ರಚಾರಕರನ್ನಾಗಿ ಹೆಸರಿಸಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.

ರಾಜಸ್ಥಾನದಲ್ಲಿ ಮುದುಡಲಿದೆ ಕಮಲ, ಕೈಗೆ ಬಹುಮತದ ಬಲ!ರಾಜಸ್ಥಾನದಲ್ಲಿ ಮುದುಡಲಿದೆ ಕಮಲ, ಕೈಗೆ ಬಹುಮತದ ಬಲ!

ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಝಲ್ನಪಟನ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾನ್ವೇಂದ್ರ ಕಣಕ್ಕಿಳಿಯುತ್ತಿದ್ದಾರೆ. ಮಿಕ್ಕಂತೆ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯ ಪಕ್ಷಾಧ್ಯಕ್ಷ ಸಚಿನ್ ಪೈಲಟ್, ಮಾಜಿ ಕೇಂದ್ರ ಸಚಿವ ಸಿಪಿ ಜೋಶಿ, ಮಾಜಿ ರಾಜ್ಯಾಧ್ಯಕ್ಷ ನಾರಾಯಣ್ ಸಿಂಗ್ ಹಾಗೂ ಡಾ. ಚಂದ್ರಭಾನ್, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ರಘು ಶರ್ಮ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ರೆಹನಾ ರಿಯಾಜ್, ಮಾಜಿ ಸಚಿವ ಭಾನ್ವರ್ ಲಾಲ್ ಹೆಸರು ಇದೆ.

ರಾಜಸ್ಥಾನದಲ್ಲಿ ಬಿಜೆಪಿ-ಕಾಂಗ್ರೆಸ್ ಗೆ ಶಾಕ್ ನೀಡಲಿರುವ ಜಾತಿ ರಾಜಕೀಯ!ರಾಜಸ್ಥಾನದಲ್ಲಿ ಬಿಜೆಪಿ-ಕಾಂಗ್ರೆಸ್ ಗೆ ಶಾಕ್ ನೀಡಲಿರುವ ಜಾತಿ ರಾಜಕೀಯ!

ಇದಲ್ಲದೆ, ರಾಜಸ್ಥಾನದಲ್ಲಿ ಪಕ್ಷದ ಉಸ್ತುವಾರಿ ಅವಿನಾಶ್ ಪಾಂಡೆ, ವಿಪಕ್ಷ ನಾಯಕ ರಾಮೇಶ್ವರ್ ದುಡಿ, ಲೋಕಸಭೆಯ ಮಾಜಿ ಸ್ಪೀಕರ್ ಮೀರಾಕುಮಾರ್, ಪಕ್ಷದ ಖಜಾಂಚಿ ಅಹ್ಮದ್ ಪಟೇಲ್, ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್, ಉತ್ತರಪ್ರದೇಶದ ಹಿರಿಯ ನಾಯಕರಾದ ಪ್ರಮೋದ್ ತಿವಾರಿ ಇವರೆಲ್ಲರ ಜತೆಗೆ ಗುಜರಾತಿನ ವಿವಾದಿತ ಶಾಸಕ ಅಲ್ಪೇಶ್ ಠಾಕೂರ್ ಕೂಡಾ ಪ್ರಚಾರದಲ್ಲಿ ತೊಡಗಲಿದ್ದಾರೆ.

English summary
The Congress has come up with its list of state campaigners. The list included the name of United Progressive Alliance chairperson Sonia Gandhi, former Prime Minister Manmohan Singh and even new Congressmen Manvendra Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X