ಬಿಎಸ್ ಪಿ ನಾಯಕರಿಗೆ ಶೂ ಹಾರ ಹಾಕಿ, ಕತ್ತೆ ಮೇಲೆ ಮೆರವಣಿಗೆ

ಜೈಪುರ್ (ರಾಜಸ್ಥಾನ), ಅಕ್ಟೋಬರ್ 22: ಟಿಕೆಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಮಂಗಳವಾರ ಪಕ್ಷದ ಕಚೇರಿ ಹೊರಗೆ ಪಕ್ಷದ ಕಾರ್ಯಕರ್ತರು ಬಿಎಸ್ ಪಿ ನಾಯಕರಿಗೆ ಶೂ ಹಾರ ಹಾಕಿ, ಮುಖಕ್ಕೆ ಮಸಿ ಬಳಿದು, ಕತ್ತೆ ಮೇಲೆ ಮೆರವಣಿಗೆ ಮಾಡಿದ್ದಾರೆ. ಬಿಎಸ್ ಪಿ ರಾಷ್ಟ್ರೀಯ ಸಮನ್ವಯಕಾರ ರಾಮ್ ಜೀ ಗೌತಮ್, ರಾಜಸ್ಥಾನದ ಮಾಜಿ ಉಸ್ತುವಾರಿ ಸೀತಾರಾಮ್ ಗೆ ಶೂ ಹಾರ ಹಾಕಲಾಗಿದೆ.

ಜೈಪುರ್ ನ ಬನಿಪಾರ್ಕ್ ನಲ್ಲಿ ಇರುವ ಕಚೇರಿಯ ಹೊರಭಾಗದಲ್ಲಿ ರಾಮ್ ಜೀ ಗೌತಮ್ ಅವರನ್ನು ಕತ್ತೆ ಮೇಲೆ ಕೂರಿಸಿ, ಮೆರವಣಿಗೆ ಮಾಡಲಾಗಿದೆ.

"ನಮ್ಮ ಕಾರ್ಯಕರ್ತರು ನಾಯಕರ ವಿರುದ್ಧ ಬೇಸರಗೊಂಡಿದ್ದಾರೆ. ಕಾರ್ಯಕರ್ತರು ಐದು ವರ್ಷದಿಂದ ತಳ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಈಗ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಲಾಗುತ್ತಿದೆ. ಹಣಕ್ಕಾಗಿಯೇ ಬಿಜೆಪಿ, ಕಾಂಗ್ರೆಸ್ ನಿಂದ ಅವರು ಬಂದಿದ್ದಾರೆ. ಬಿಎಸ್ ಪಿ ಕಾರ್ಯಕರ್ತರು, ನಾಯಕರನ್ನು ನಿರ್ಲಕ್ಷಿಸಿ, ಶೋಷಿಸಲಾಗುತ್ತಿದೆ" ಎಂದು ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ.

Jaipur: 2 BSP Leaders Garlanded With Shoes, 1 Paraded On Donkey

ನಾವು ಮೂರು ಪ್ರತಿಭಟನೆ ನಡೆಸಿದೆವು. ಆದರೆ ಅದನ್ನು ನಮ್ಮ ನಾಯಕಿ ಮಾಯಾವತಿಗೆ ತಿಳಿಸಲಿಲ್ಲ. ಆದ್ದರಿಂದ ಈ ಹೆಜ್ಜೆ ಇಡಬೇಕಾಯಿತು ಎಂದು ತಿಳಿಸಲಾಗಿದೆ.

ಇದು ನಾಚಿಕೆಗೇಡಿನ ಕೆಲಸ ಎಂದಿರುವ ಮಾಯಾವತಿ, ಇದಕ್ಕೆ ಕಾಂಗ್ರೆಸ್ ಅನ್ನು ನಿಂದಿಸಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿರುವ ಮಾಯಾವತಿ, ಕಾಂಗ್ರೆಸ್ ಕುದುರೆ ವ್ಯಾಪಾರದಲ್ಲಿ ತೊಡಗಿಕೊಂಡಿದೆ. ಇದೀಗ ರಾಜ್ಯದಲ್ಲಿ ಬಿಎಸ್ ಪಿ ನಾಯಕರ ವಿರುದ್ಧ ದಾಳಿಗೆ ಇಳಿದಿದೆ ಎಂದು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+