ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನದಲ್ಲಿ ಮಿಗ್ 27 ವಿಮಾನ ಪತನ, ಪೈಲೆಟ್ ಸುರಕ್ಷಿತ

|
Google Oneindia Kannada News

ಜೈಪುರ, ಫೆಬ್ರವರಿ 12 : ಮಿಗ್ 27 ಯುದ್ಧ ವಿಮಾನ ರಾಜಸ್ಥಾನದಲ್ಲಿ ಪತನಗೊಂಡಿದೆ. ವಿಮಾನದ ಪೈಲೆಟ್ ತುರ್ತು ನಿರ್ಗಮನ ದ್ವಾರದ ಮೂಲಕ ಹೊರಗೆ ಜಿಗಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭಾರತೀಯ ವಾಯುಪಡೆಗೆ ಸೇರಿದ ಮಿಗ್ 27 ಯುದ್ಧ ವಿಮಾನ ಮಂಗಳವಾರ ಸಂಜೆ 6.10ರ ಸುಮಾರಿಗೆ ರಾಜಸ್ಥಾನದ ಪೋಕ್ರಾನ್ ಸಮೀಪ ಪತನಗೊಂಡಿದೆ. ದೈನಂದಿನ ತರಬೇತಿಗಾಗಿ ವಿಮಾನ ಜೈಸಲ್ಮೇರ್‌ನಿಂದ ಟೇಕಾಫ್ ಆಗಿತ್ತು.

ಬೆಂಗಳೂರಿನ ಎಚ್‌ಎಎಲ್‌ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವುಬೆಂಗಳೂರಿನ ಎಚ್‌ಎಎಲ್‌ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವು

ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದು ಪತನಗೊಳ್ಳುವ ಸೂಚನೆ ಸಿಕ್ಕ ತಕ್ಷಣ ಪೈಲೆಟ್ ತುರ್ತು ನಿರ್ಗಮನ ದ್ವಾರದ ಮೂಲಕ ಹೊರಕ್ಕೆ ಜಿಗಿದಿದ್ದಾರೆ. ಆದ್ದರಿಂದ, ವಿಮಾನ ಪತನಗೊಂಡರೂ ಪೈಲೆಟ್ ಸುರಕ್ಷಿತವಾಗಿದ್ದಾರೆ.

ಎಚ್ಎಎಲ್ ವಿಮಾನ ದುರಂತ ; ವಾಯುಪಡೆಯಿಂದ ತನಿಖೆ ಆರಂಭಎಚ್ಎಎಲ್ ವಿಮಾನ ದುರಂತ ; ವಾಯುಪಡೆಯಿಂದ ತನಿಖೆ ಆರಂಭ

fighter jet

ಫೆಬ್ರವರಿ ತಿಂಗಳಿನಲ್ಲಿ ನಡೆದ 2ನೇ ವಿಮಾನ ಪತನ ಪ್ರಕರಣವಿದಾಗಿದೆ. ಫೆಬ್ರವರಿ 1ರಂದು ಬೆಂಗಳೂರಿನ ಎಚ್‌ಎಎಲ್ ಸಮೀಪ ಮಿರಾಜ್ 2000 ವಿಮಾನ ಪತನಗೊಂಡಿತ್ತು. ಇಬ್ಬರು ಪೈಲೆಟ್‌ಗಳು ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದರು.

ಎಚ್‌ಎಎಲ್ ಬಳಿ ವಿಮಾನ ಪತನ : ಸುಪ್ರೀಂಗೆ ಪಿಐಎಲ್ಎಚ್‌ಎಎಲ್ ಬಳಿ ವಿಮಾನ ಪತನ : ಸುಪ್ರೀಂಗೆ ಪಿಐಎಲ್

ಯುದ್ಧ ವಿಮಾನ ಪತನದಂತಹ ಘಟನೆಗಳು ಭವಿಷ್ಯದಲ್ಲಿ ನಡೆಯಬಾರದು. ಅದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಲಾಗಿದೆ.

ವಕೀಲ ಅಲೋಕ್ ಶ್ರೀವಾಸ್ತವ್ ಎನ್ನುವವರು ಪಿಐಎಲ್ ಸಲ್ಲಿಕೆ ಮಾಡಿದ್ದಾರೆ. 2012ರಲ್ಲಿ 10 ದಿನಗಳ ಅಂತರದಲ್ಲಿ ಎರಡು ವಿಮಾನಗಳು ಪತನಗೊಂಡಿದ್ದವು. ಈ ವರ್ಷವೂ ಸಹ 12 ದಿನದ ಅಂತರದಲ್ಲಿ ಎರಡು ವಿಮಾನಗಳು ಪತನಗೊಂಡಿವೆ.

English summary
A MiG-27 fighter jet of the Indian Air Force (IAF) crashed near Pokhran in Rajasthan on Tuesday. The pilot of the MiG-27 has ejected safely. The jet was on a training mission and had taken-off from Jaisalmer, said reports. The crash took place around 6.10 pm today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X