• search
 • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಾಂಧಿ ಹಿಂದು, ಗೋಡ್ಸೆ ಹಿಂದುತ್ವವಾದಿ, ಭಾರತ ಹಿಂದುಗಳ ದೇಶ: ರಾಹುಲ್‌

|
Google Oneindia Kannada News

ಜೈಪುರ, ಡಿಸೆಂಬರ್‌ 12: ಭಾರತ ದೇಶವು ಹಿಂದೂಗಳದ್ದೇ ಹೊರತು ಹಿಂದುತ್ವವಾದಿಗಳದ್ದು ಅಲ್ಲ. ರಾಷ್ಟ್ರಪಿತ ಮಹಾತ್ಮ ಗಾಂಧಿ ಹಿಂದೂ, ಭಾರತ ದೇಶವು ಹಿಂದೂಳ ದೇಶ, ಗೋಡ್ಸೆ ಹಿಂದುತ್ವವಾದಿ, ಈ ಭಾರತ ದೇಶವು ಹಿಂದುತ್ವವಾದಿಗಳ ದೇಶ ಅಲ್ಲ ಎಂದು ಕಾಂಗ್ರಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಜೈಪುರದ ವಿದ್ಯಾಧರ್ ನಗರ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಮಹಂಗಾಯಿ ಹಠಾವೋ ರ್‍ಯಾಲಿ (ಬೆಲೆ ಏರಿಕೆ ನಿಲ್ಲಿಸಿ ಸಮಾವೇಶ) ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ಭಾರತದ ರಾಜಕೀಯದಲ್ಲಿ ಈಗ ಎರಡು ಪದಗಳ ಮಧ್ಯೆ ಪೈಪೋಟಿ ಇದೆ. ಒಂದು ಹಿಂದೂ ಹಾಗೂ ಇನ್ನೊಂದು ಹಿಂದುತ್ವವಾದ. ಸಾಮಾನ್ಯವಾಗಿ ಹಿಂದೂ ಹಾಗೂ ಹಿಂದುತ್ವವಾದದ ನಡುವೆ ವ್ಯತ್ಯಾಸವಿದೆ. ನಾನು ಹಿಂದೂ. ಆದರೆ ನಾನು ಹಿಂದೂತ್ವವಾದಿ ಅಲ್ಲ. ಮಹಾತ್ಮ ಗಾಂಧಿ ಕೂಡಾ ಹಿಂದೂ, ಹಿಂದುತ್ವವಾದಿ ಅಲ್ಲ," ಎಂದಿದ್ದಾರೆ.

ಕುತೂಹಲ ಕೆರಳಿಸಿದ ರಾಹುಲ್ ಗಾಂಧಿ, ಸಂಜಯ್ ರಾವತ್ ಭೇಟಿಕುತೂಹಲ ಕೆರಳಿಸಿದ ರಾಹುಲ್ ಗಾಂಧಿ, ಸಂಜಯ್ ರಾವತ್ ಭೇಟಿ

"ಮಹಾತ್ಮ ಗಾಂಧಿ ಹಿಂದೂ ಆಗಿದ್ದಾರೆ, ಆದರೆ ಹಿಂದೂತ್ವವಾದಿ ಅಲ್ಲ. ಗೋಡ್ಸೆ ಹಿಂದುತ್ವವಾದಿ ಆಗಿದ್ದಾರೆ,. ಈ ದೇಶ ಹಿಂದೂಗಳಿಗೆ ಸೇರಿದ್ದು ಆಗಿದೆ. ಹಿಂದುತ್ವವಾದಿಗಳಿಗೆ ಸೇರಿದ್ದು ಅಲ್ಲ. ಹಿಂದುತ್ವವಾದಿಗಳು ಅಧಿಕಾರ ಪಡೆಯಬೇಕು ಎಂಬ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಾರೆ. ಅವರಿಗೆ ಅಧಿಕಾರ ಮಾತ್ರ ಮುಖ್ಯ ಆಗಿದೆ," ಎಂದು ರಾಹುಲ್‌ ಗಾಂಧಿ ಟೀಕೆ ಮಾಡಿದ್ದಾರೆ.

"ಹಿಂದುತ್ವವಾದಿಗಳಿಗೆ ಅಂತಿಮವಾಗಿ ಬೇಕಾಗಿರುವುದು ಅಧಿಕಾರ ಮಾತ್ರ. ಅದಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ. ಹಿಂದುತ್ವವಾದಿಗಳು ಅಧಿಕಾರದ ಆಶೆ ಮಾಡುತ್ತಾರೆಯೇ ಹೊರತು ಸತ್ಯಾಗ್ರಹ ಮಾಡುವುದಿಲ್ಲ. ಈ ದೇಶದಲ್ಲಿ ಅಧಿಕಾರದ ಹಪಾಹಪಿ ಹೊಂದಿರುವ ಜನರು 2014 ರಿಂದ ದೇಶದಲ್ಲಿ ಆಳ್ವಿಕೆ ಮಾಡಿಕೊಳ್ಳುತ್ತಾ ಬಂದಿದ್ದಾರೆ. 2014 ರಿಂದಲೂ ಹಿಂದೂತ್ವವಾದಿಗಳು ಅಧಿಕಾರದಲ್ಲಿ ಇದ್ದಾರೆ. ಈ ಹಿಂದುತ್ವವಾದಿಗಳನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿ ಹಿಂದುಗಳನ್ನು ಮರಳಿ ಅಧಿಕಾರಕ್ಕೆ ತರುವ ಕಾರ್ಯ ನಡೆಯಬೇಕಾಗಿದೆ," ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅಭಿಪ್ರಾಯಿಸಿದ್ದಾರೆ.

ಬಿಜೆಪಿಗೆ ರಾಹುಲ್‌ ಗಾಂಧಿಯ ಹಿಂದುತ್ವವಾದಿ ಪಾಠ!

ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಮಹಾರಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲೇ ಬಿಜೆಪಿಗೆ ರಾಹುಲ್‌ ಗಾಂಧಿ ಹಿಂದುತ್ವವಾದದ ಪಾಠವನ್ನು ಮಾಡಿದ್ದಾರೆ. "ಭಾರತ ಹಿಂದೂಗಳ ದೇಶ, ಹಿಂದುತ್ವವಾದಿಗಳ ದೇಶವಲ್ಲ. ಈ ದೇಶದಲ್ಲಿ ಹಿಂದೂಗಳ ಆಡಳಿತವನ್ನು ತರಬೇಕಾಗಿದೆ. ಹಿಂದೂ ಮತ್ತು ಹಿಂದುತ್ವವಾದಿಗಳ ನಡುವೆ ವ್ಯತ್ಯಾಸವಿದೆ. ಮಹಾತ್ಮ ಗಾಂಧಿ ಹಿಂದೂ ಆಗಿದ್ದಾರೆ, ನಾಥೂರಾಮ್‌ ಗೋಡ್ಸೆ ಹಿಂದುತ್ವವಾದಿ ಆಗಿದ್ದಾರೆ. ಹಿಂದುತ್ವವಾದಿಗಳಿಗೆ ಅಧಿಕಾರ ಬೇಕಾಗಿದೆ ಸತ್ಯವಲ್ಲ. ಹಿಂದೂಗಳು ಎಂದಿಗೂ ಸತ್ಯದ ಜೊತೆಯಾಗಿ ಇರುತ್ತಾರೆ, ಎಂದಿಗೂ ಭಯಪಡಲ್ಲ. ಪ್ರತಿಯೊಬ್ಬರನ್ನು ಅಪ್ಪಿಕೊಳ್ಳುವ, ಯಾರಿಗೂ ಹೆದರದ ಮತ್ತು ಪ್ರತಿಯೊಂದು ಧರ್ಮವನ್ನು ಗೌರವಿಸುವವನೇ ನಿಜವಾದ ಹಿಂದೂ ," ಎಂದು ರಾಹುಲ್‌ ಗಾಂಧಿ ವಿವರಿಸಿದ್ದಾರೆ.

ಕಾಂಗ್ರೆಸ್ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಕೊಟ್ಟ ಮಮತಾ ಬ್ಯಾನರ್ಜಿ ಆ ಹೇಳಿಕೆಕಾಂಗ್ರೆಸ್ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಕೊಟ್ಟ ಮಮತಾ ಬ್ಯಾನರ್ಜಿ ಆ ಹೇಳಿಕೆ

ಪ್ರಧಾನಿ ಮೋದಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

   KL Rahul ಆಟದಿಂದ ಖತಂ ಆಗುತ್ತಾ ಈ ಮೂವರ ಕ್ರಿಕೆಟ್ ಕೆರಿಯರ್? | Oneindia Kannada

   ಇನ್ನು ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧವೂ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. "ಪ್ರಧಾನ ಮಂತ್ರಿ ನರೇಂದ್ರ ಮೋದಿ ತನ್ನ ಮೂರು-ನಾಲ್ಕು ಸ್ನೇಹಿತರಿಗಾಗಿ ಆಳ್ವಿಕೆ ನಡೆಸುತ್ತಿದ್ದಾರೆ. ಪ್ರಧಾನಿಯ ಮೂರ್ನಾಲ್ಕು ಸ್ನೇಹಿತರು ಕಳೆದ ಏಳು ವರ್ಷದಲ್ಲಿ ದೇಶವನ್ನೇ ನಾಶ ಮಾಡಿದ್ದಾರೆ. ದೇಶದಲ್ಲಿ ಹಣದುಬ್ಬರ, ನೋವು ಇರುವುದಕ್ಕೆ ಈ ಹಿಂದುತ್ವವಾದಿಗಳೇ ಕಾರಣ. ಅವರಿಂದಾಗಿಯೇ ದೇಶದಲ್ಲಿ ಹಣದುಬ್ಬರ ನೋವು ಇದೆ. ಈ ರ್‍ಯಾಲಿಯು ಹಣದುಬ್ಬರ ಹಾಗೂ ನಿರುದ್ಯೋಗದ ವಿಚಾರದಲ್ಲಿ ಮಾಡಲಾಗಿದೆ. ನೀವು ದೇಶದ ಪರಿಸ್ಥಿತಿ ಈಗ ಹೇಗಿದೆ ಎಂದು ನೋಡುತ್ತಿದ್ದೀರಿ. ದಿನ ದಿನ ಬೆಲೆ ಏರಿಕೆ ಆಗುತ್ತಿರುವುದು ನಿಮಗೆ ತಿಳಿದಿದೆ," ಎಂದರು. ಇನ್ನು ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸಹಿತ 14 ಜನರಿದ್ದ ಸೇನಾ ಹೆಲಿಕಾಪ್ಟರ್ ಪತನವಾಗಿರುವ ಘಟನೆ ತಮಿಳುನಾಡಿನ ನೀಲ್‌ಗಿರಿ ಜಿಲ್ಲೆಯ ಕುನೂರ್ ಬಳಿ ನಡೆದಿದೆ. ಐಎಎಫ್ ಎಂಐ-17ವಿ5 ಹೆಲಿಕಾಪ್ಟರ್ ಇದಾಗಿದ್ದು, ಹೆಲಿಕಾಪ್ಟರ್‌ನಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ ದುರ್ಮರಣಕ್ಕೀಡಾಗಿರುವುದಕ್ಕೆ ಸಂತಾಪವನ್ನು ಕೂಡಾ ಸೂಚಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

   English summary
   'Gandhi was a Hindu, Godse a Hindutvavadi' Says Rahul Gandhi at Jaipur rally.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X