ಅಳ್ವಾರ್ ಸಾಮೂಹಿಕ ಅತ್ಯಾಚಾರದ ಬಳಿಕ ಇನ್ನೂ 2 ಪ್ರಕರಣ ಬೆಳಕಿಗೆ
ಜೈಪುರ, ಮೇ 18: ಜೈಪುರದ ಅಳ್ವಾರ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಇನ್ನೂ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಬೈಕ್‌ನಲ್ಲಿ ಹೋಗುತ್ತಿದ್ದ ದಂಪತಿಯನ್ನು ತಡೆದು ದುಷ್ಕರ್ಮಿಗಳು ಪತ್ನಿಯನ್ನು ಪತಿ ಎದುರೇ ಅತ್ಯಾಚಾರ ನಡೆಸಿದ್ದರು.ಈ ಪ್ರಕರಣದ ಬಳಿಕ ಇನ್ನೂ ಪ್ರಕರಣಗಳು ಬೆಳಕಿಗೆ ಬಂದಿವೆ. ಹಾಗಾದರೆ ಕಾನೂನು ಎನ್ನುವುದು ಇಲ್ಲಿಯ ಜನಕ್ಕೆ ಅನ್ವಯವಾಗುವುದಿಲ್ಲವೇ ಅಥವಾ ಕಾನೂನಿನ ಬಗ್ಗೆ ಯಾರಿಗೂ ಭಯವೇ ಇಲ್ಲವೇ ಎಂಬುದು ಪ್ರಶ್ನೆಯಾಗಿದೆ.
14 ವರ್ಷದ ಬಾಲಕಿ ಹಾಗೂ ಎಂಟು ವರ್ಷದ ಬಾಲಕಿಯ ಮೇಲೆ ನೆರೆಮನೆಯವರೇ ಅತ್ಯಾಚಾರವೆಸಗಿರುವ ರಾಜಸ್ಥಾನದ ಧೋಲ್‌ಪುರ್ ಜಿಲ್ಲೆಯಲ್ಲಿ ನಡೆದಿದೆ. ರಾಜಸ್ಥಾನದಲ್ಲಿ ಕಾನೂನನ್ನು ರಕ್ಷಣೆ ಮಾಡುವಲ್ಲಿ ಸರ್ಕಾರ ಸೋತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇ 14ರಂದು 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು.

ಬಾಲಕಿಯು ಸಂಬಂಧಿಯ ಮದುವೆಗೆ ತೆರಳುತ್ತಿರುವಾಗ ಈ ಘಟನೆ ನಡೆದಿತ್ತು. ಓರ್ವ ಸಿಕ್ಕಿ ಬಿದ್ದಿದ್ದು ಸ್ಥಳಿಯರೇ ಆತನನ್ನು ಹೊಡೆದು ಕೊಂದಿದ್ದಾರೆ ಇನ್ನು ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಪೊಲೀಸರು ಹುಡುಕಾಟದಲ್ಲಿದ್ದಾರೆ. 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವವರನ್ನು ಬನೇ ಸಿಂಗ್, ಘನಶ್ಯಾಮ್, ದೀವನ್, ಮಂಗಿಲಾಲ್, ದುರ್ಗಾಲಾಲ್, ಪಪ್ಪು ಮಾಗಿ ಲಾಲ್ ಎಂದು ಗುರುತಿಸಲಾಗಿದೆ. ಅವರ ಮೇಲೆ ಪ್ರಕರಣ ದಾಖಲಾಗಿದೆ.












Click it and Unblock the Notifications