ಪೋರ್ಚುಗಲ್ ನಲ್ಲಿ 150 ವರ್ಷದಲ್ಲೇ ಭೀಕರ ಚಂಡಮಾರುತ
ಪೋರ್ಚುಗಲ್ ನಲ್ಲಿ ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸುತ್ತಿದ್ದು, ಭಾನುವಾರದಂದು ನೂರಾರು-ಸಾವಿರಾರು ಮಂದಿ ವಿದ್ಯುತ್ ಇಲ್ಲದೆ ಪರಿತಪಿಸುವಂತಾಯಿತು. ಈ ಚಂಡಮಾರುತ ಸ್ಪೇನ್ ಗೆ ಭಾರೀ ಮಳೆ ಸುರಿಸುವ ಮುಂಚೆ ಇಂಥ ಅನಾಹುತ ತಂದಿದೆ.
ರಾಜಧಾನಿ ಲಿಸ್ಬನ್ ಸುತ್ತ ಮತ್ತು ದೇಶದ ಕೇಂದ್ರ ಭಾಗ ಲೈರಾ ಮತ್ತು ಕೊಯಿಂಬ್ರಾದಲ್ಲಿ ಭಾರೀ ಅನಾಹುತ ಸಂಭವಿಸಿದ್ದು, ಮರಗಳು ಧರೆಗುರುಳಿವೆ. ಕಾರು ಹಾಗೂ ಮನೆಗಳಿಗೆ ಭಾರೀ ಹಾನಿಯಾಗಿದೆ. ಹಾಗೂ ಸ್ಥಳೀಯವಾಗಿ ನೆರೆ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ವರದಿ ಆಗಿದೆ.
ವಿದ್ಯುತ್ ಸಂಪರ್ಕ ಕಡಿತವಾಗಿ, ನೂರಾರು ಮಂದಿ ಮನೆಗಳನ್ನು ಬಿಟ್ಟು, ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. 'ಝಾಂಬಿ' ಎಂದು ಹೆಸರಿಸಿದ ಚಂಡಮಾರುತವು ಮೊದಲಿಗೆ ಸೆಪ್ಟೆಂಬರ್ ಇಪ್ಪತ್ಮೂರು ರೂಪುಗೊಂಡಿದೆ. ಕಳೆದ ನೂರೈವತ್ತು ವರ್ಷಗಳಲ್ಲೇ ಭೀಕರವಾದ ಚಂಡಮಾರುತ ಇದು ಎನ್ನಲಾಗಿದ್ದು, ಪೋರ್ಚುಗೀಸ್ ನ ಕಡಲ ತೀರವನ್ನು ತಲುಪುವ ಮುನ್ನವೇ ಭಾನುವಾರ ಮಧ್ಯರಾತ್ರಿ ಹೊತ್ತಿಗೆ ದುರ್ಬಲವಾಗಿದೆ.

ಸದ್ಯಕ್ಕೆ ಮಳೆ ಸುರಿಯುತ್ತಲೇ ಇದ್ದು, ಸನ್ನಿವೇಶವೇ ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಕಡಲ ಕಿನಾರೆ ಬಳಿ ವಾಸಿಸುವರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. "ನಾನಿಂಥ ಚಂಡಮಾರುತ ಯಾವತ್ತೂ ನೋಡಿಲ್ಲ" ಎಂದು ಲಿಸ್ಬನ್ ನ ಇನ್ನೂರು ಕಿ.ಮೀ. ದೂರದಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಕಾರುಗಳ ಮೇಲೆ ಮರಗಳು ಬಿದ್ದು, ಬಹಳ ಹಾನಿಯಾಗಿದೆ. ಯುದ್ಧ ಮುಗಿದ ಸನ್ನಿವೇಶದಲ್ಲಿ ಇರುವಂಥ ಸ್ಥಿತಿ ಇದೆ. ಜನರು ಬಹಳ ಗಾಬರಿ ಆಗಿದ್ದಾರೆ. ಸಮುದ್ರಕ್ಕೆ ಇಳೀಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಲಿಸ್ಬನ್ ನಿಂದ ಏಳು ವಿಮಾನದ ಹಾರಾಟ ರದ್ದು ಮಾಡಲಾಗಿದೆ.
ರಜಾ ಕಾಲ ಕಳೆಯುವ ಸ್ಪೇನ್ ನ ಮಜೋರಿಕಾದಲ್ಲಿ ಬಿದ್ದ ಮಳೆಗೆ ಹನ್ನೆರಡು ಮಂದಿ ಸಾವನ್ನಪ್ಪಿದ್ದಾರೆ.












Click it and Unblock the Notifications