30 ಜನ ದಿಢೀರ್ ಸಾವು... ರೈಲು ನಿಲ್ದಾಣದ ಮೇಲೆ ಭೀಕರ ದಾಳಿ... Ukraine War
ಹೊಡಿ... ಹೊಡಿ... ಅಂತಾ ಹೊಡೆದಾಡುತ್ತಿರುವ ರಷ್ಯಾ & ಉಕ್ರೇನ್ ದೇಶಗಳು ಸಾಮಾನ್ಯ ಜನರ ಜೀವ ತೆಗೆಯುತ್ತಿವೆ. ರಷ್ಯಾ ಅಧ್ಯಕ್ಷ ಮತ್ತೊಮ್ಮೆ ರೊಚ್ಚಿಗೆದ್ದು ಉಕ್ರೇನ್ ವಿರುದ್ಧ ರಣಭೀಕರ ಅಟ್ಯಾಕ್ ಮಾಡಲು ಆದೇಶ ನೀಡಿದ್ದಾರೆ ಅಂತಾ ಕಾಣುತ್ತದೆ. ಇದೇ ಕಾರಣಕ್ಕೆ ರಷ್ಯಾ & ಉಕ್ರೇನ್ ವಾರ್ ಹಿನ್ನೆಲೆ ಜಗತ್ತೇ ನಡುಗಿ ಹೋಗುತ್ತಿದ್ದು, ಒಂದೊಂದು ಕ್ಷಣವೂ 3ನೇ ಮಹಾಯುದ್ಧದ ನರಕ ಕಾಣಿಸುತ್ತಿದೆ. ಹೀಗೆ ಇದ್ದಾಗ ಮತ್ತೊಮ್ಮೆ ರಷ್ಯಾ ರಣಭೀಕರವಾಗಿ ರೈಲು ನಿಲ್ದಾಣದ ಮೇಳೆ ದಾಳಿ ಮಾಡಿದ ಹಿನ್ನೆಲೆ, 30 ಜನ ದಿಢೀರ್ ಮೃತಪಟ್ಟಿದ್ದಾರೆ ಎಂಬ ಆರೋಪ ಮಾಡಿದೆ ಉಕ್ರೇನ್.
ಯುದ್ಧ... ಜಗತ್ತಿನಾದ್ಯಂತ ಬರೀ ಯುದ್ಧದ ಭಯ ಕಾಡ್ತಿದೆ. ಹೌದು, ರಷ್ಯಾದ ಮೇಲೆ ಉಕ್ರೇನ್ ದಾಳಿ ಮಾಡಿ ಕೆಣಕಿದೆ ಅಂತಾ ಇದೀಗ ಮರುದಾಳಿ ಆರಂಭಿಸಿದೆ ರಷ್ಯಾದ ಸೇನೆ. ರಷ್ಯಾ ನಡೆಸಿದ ಡ್ರೋನ್ ದಾಳಿ ಉಕ್ರೇನ್ ಈಶಾನ್ಯ ಸುಮಿ ಪ್ರದೇಶವನ್ನು ನಾಶ ಮಾಡಿದೆ. ಸುಮಿ ಪ್ರದೇಶದ ರೈಲು ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಕನಿಷ್ಠ 30 ಜನ ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಆರೋಪ ಮಾಡಿದೆ. ಹೀಗಾಗಿ ಮತ್ತೆ ರಷ್ಯಾ & ಉಕ್ರೇನ್ ಯುದ್ಧ ಭಯದ ಅಲೆ ಎಬ್ಬಿಸಿದೆ. 2022 ಫೆಬ್ರವರಿ ತಿಂಗಳಲ್ಲಿ ಯುದ್ಧವನ್ನ ಆರಂಭಿಸಿದ ನಂತರ ರಷ್ಯಾ ಸೇನೆ ಉಕ್ರೇನ್‌ನ ರೈಲ್ವೆ ಮೂಲಸೌಕರ್ಯ ನಾಶ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ಪರಮಾಣು ಬಾಂಬ್ ಬಳಕೆ ಆಗುತ್ತಾ?
ರಷ್ಯಾ ರೊಚ್ಚಿಗೆದ್ದು ಏನೇನೋ ಮಾಡಲು ಮುಂದಾಗಿದ್ದು, ಅಮೆರಿಕ & ಪಾಶ್ಚಿಮಾತ್ಯ ಒಕ್ಕೂಟಕ್ಕೆ ಬುದ್ಧಿ ಕಲಿಸಲು ತನ್ನಲ್ಲಿ ಇರುವ ಪರಮಾಣು ಬಾಂಬ್‌ಗಳನ್ನ ಹೊರಗೆ ತೆಗೆಯುತ್ತಿದೆ ಎಂಬ ಸುದ್ದಿ ಕೂಡ ಓಡಾಡುತ್ತಿದೆ. ಹೀಗಿದ್ದಾಗ ಅಮೆರಿಕ & ನ್ಯಾಟೋ ಒಕ್ಕೂಟ ಕೂಡ ಅಲರ್ಟ್ ಆಗಿದ್ದು, ಭೀಕರ ಪರಿಸ್ಥಿತಿ ಎದುರಾಗಿದೆ. ಇಷ್ಟೆಲ್ಲದರ ನಡುವೆ ಉಕ್ರೇನ್ ಮೇಲೆ ತನ್ನ ದಾಳಿಯನ್ನ ಕೂಡ ಇದೀಗ ರಷ್ಯಾ ತೀವ್ರಗೊಳಿಸಿದೆ.
ಅಮೆರಿಕ ಜೊತೆಗೆ ರಷ್ಯಾ ಕಿರಿಕ್!
ಒಟ್ನಲ್ಲಿ ಉಕ್ರೇನ್ ವಿರುದ್ಧ ಯುದ್ಧ ಸಾರಿದ ನಂತರ ರಷ್ಯಾ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಿಸುತ್ತಿದೆ. ಅದರಲ್ಲೂ ಜಗತ್ತಿನ ಹಲವು ದೇಶಗಳು ಈಗಾಗಲೇ ರಷ್ಯಾ ವಿರುದ್ಧವೇ ನಿರ್ಬಂಧ ಹೇರಿವೆ. ಹೀಗಿದ್ದಾಗ ಮತ್ತೊಂದು ಆಘಾತ ಇದೀಗ ರಷ್ಯಾಗೆ ಎದುರಾಗಿದ್ದು, ದಿಢೀರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ವ್ಯಾಪಾರಕ್ಕೆ ಕೊಕ್ಕೆ ಹಾಕಲು ಅಮೆರಿಕ ಇದೀಗ ಪ್ರಯತ್ನ ಮಾಡುತ್ತಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.












Click it and Unblock the Notifications