ಕೊನೆಗೂ ಕಾಡುಪ್ರಾಣಿಗಳ ಮಾಂಸ ಸೇವನೆ ನಿಷೇಧಿಸಿದ ವುಹಾನ್
ವುಹಾನ್, ಮೇ 21: ಕೊರೊನಾವೈರಸ್ ದಾಳಿಯಿಂದ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಈ ನಡುವೆ ವುಹಾನ್‌ನಲ್ಲಿ ಇದೇ ಮೊದಲ ಬಾರಿಗೆ ಕಾಡುಪ್ರಾಣಿಗಳ ಮಾಂಸ ಸೇವನೆ ಮೇಲೆ ನಿಷೇಧ ಹೇರಲಾಗಿದೆ.
Recommended Video
ಈ ಮೊದಲು ಫೆಬ್ರವರಿಯಲ್ಲೇ ನಾಯಿ, ಬೆಕ್ಕುಗಳ ಸೇವನೆಯನ್ನು ನಿಷೇಧಿಸಲು ಅಲ್ಲಿನ ಸ್ಥಳೀಯ ಆಡಳಿತ ಮುಂದಾಗಿತ್ತು. ದಕ್ಷಿಣ ಚೀನಾದ ಟೆಕ್‌ಹಬ್ ಎಂದು ಜನಪ್ರಿಯವಾಗಿರುವ ಶೆನ್ಜೆನ್ನಲ್ಲಿ ಹಂದಿ, ಕೋಳಿ, ಮೊಲದ ಮಾಂಸವನ್ನೂ ಕೂಡ ಸೇವಿಸಬಾರದು ಎಂದು ತಿಳಿಸಿದೆ.
ಕೊರೊನಾ ಕೇಂದ್ರಬಿಂದು ಹ್ಯೂಬೆ ಪ್ರಾಂತ್ಯದ ವುಹಾನ್ ನಗರದಲ್ಲಿ ಬಾವುಲಿ, ಹಾವುಗಳು ಮತ್ತು ಇತರೆ ಪ್ರಾಣಿಗಳ ಮಾಂಸ ಮಾರಾಟ ಮಾಡುವ ಮಾರುಕಟ್ಟೆಯಿಂದ ಕೊರೊನಾ ವೈರಾಣು ಹರಡಿದೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳ ಮಾಂಸ ಸೇವನೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಕೊರೊನಾ ವೈರಸ್‌ನಿಂದ ಚೀನಾದಲ್ಲಿ 3,20,000 ಮಂದಿ ಮೃತಪಟ್ಟಿದ್ದರು. ಕಳೆದ ವರ್ಷ ವುಹಾನ್ ನಗರದಲ್ಲಿ ಕೊರೊನಾ ವೈರಸ್ ಮೊದಲ ಪ್ರಕರಣ ದಾಖಲಾಗಿತ್ತು. ಪ್ರಾಣಿಗಳನ್ನು ಸಾಕಲು ಅನುಮತಿ ನೀಡಿದ್ದು, ಯಾವುದೇ ಕಾರಣಕ್ಕೂ ಅವುಗಳನ್ನು ಕೊಲ್ಲುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಆಹಾರಕ್ಕಾಗಿ ಕಾಡುಪ್ರಾಣಿಗಳನ್ನು ಮಾರಾಟ ಮಾಡುವಂತಿಲ್ಲ
ಆಹಾರಕ್ಕಾಗಿ ಕಾಡು ಪ್ರಾಣಿಗಳ ಮಾರಾಟವನ್ನು ಈಗಾಗಲೇ ನಿಷೇಧಿಸಲಾಗಿತ್ತು. ಹಾವು, ಇಲಿ, ಹೆಬ್ಬಾವು, ಕಾಳಿಂಗಸರ್ಪ ಎಲ್ಲವೂ ಪ್ರತಿ ಕೆಜಿಗೆ 120 ಯುವಾನ್ ನೀಡಿ ಕರೀದಿಸುತ್ತಿದ್ದರು.

ಕಾಡು ಪ್ರಾಣಿಗಳ ಬೇಟೆ ನಿಷೇಧ
ವುಹಾನ್ ಪ್ರಾಂತ್ಯದಲ್ಲಿ ಯಾವುದೇ ಕಾಡುಪ್ರಾಣಿಗಳನ್ನು ಕೊಲ್ಲುವಂತಿಲ್ಲ, ಸರ್ಕಾರದ ಸಂಶೋಧನೆಗಾಗಿ ಪ್ರಾಣಿಗಳನ್ನು ಕೊಲ್ಲಲು ಅನುಮತಿ ಇದೆ. ಹಾಗೆಯೇ ಸಾಂಕ್ರಾಮಿಕ ರೋಗಗಳ ಕುರಿತು ಸಂಶೋಧನೆ ಇನ್ನಿತರೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಪ್ರಾಣಿಗಳನ್ನು ಕೊಲ್ಲಬಹುದಾಗಿದೆ.

ಪ್ರಾಣಿಗಳನ್ನು ಮನೆಯಲ್ಲಿ ಸಾಕಬಹುದು
ಮನೆಯಲ್ಲಿ ಯಾವುದೇ ಪ್ರಾಣಿಗಳನ್ನು ಸಾಕಬಹುದು ಆದರೆ ಅದನ್ನು ಕೊಂದು ತಿನ್ನಲು ಅನುಮತಿ ಇಲ್ಲ. ವಿಶ್ವದಾದ್ಯಂತ ಕೊರೊನಾವೈಸರ್ ಸೋಂಕು ಹರಡುತ್ತಿದ್ದಂತೆ ಚೀನಾ ಸರ್ಕಾರ ಕಾಡುಪ್ರಾಣಿಗಳನ್ನು ಕೊಲ್ಲದಂತೆ ಆದೇಶಿಸಿತ್ತು.ಆದರೂ ಈ ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ಕೊರೊನಾ ವೈರಸ್ ಬಾವುಲಿಗಳಿಂದ ಮನುಷ್ಯನಿಗೆ ಹರಡಿದೆ ಎನ್ನುವ ಮಾತುಗಳು ಕೂಡ ಇದೆ.

ಮಾಂಸ ಮಾರಾಟ ಮಾಡುತ್ತಿದ್ದವರಿಗೆ ಆರ್ಥಿಕ ಸಹಾಯ
ಇಷ್ಟು ವರ್ಷ ಕಾಡು ಪ್ರಾಣಿಗಳನ್ನು ಕೊಂದು ತಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದವರಿಗೆ ಸರ್ಕಾರದ ಈ ಘೋಷಣೆ ಆರ್ಥಿಕವಾಗಿ ದುರ್ಬಲರನ್ನಾಗಿ ಮಾಡಿದೆ. ಇವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಸರ್ಕಾರ ಮುಂದಾಗಿದೆ. ವುಹಾನ್ ಪ್ರಾಂತ್ಯದಲ್ಲಿ 2300 ಮಂದಿ ನೋಂದಾಯಿತ ಮಾರಾಟಗಾರರಿದ್ದರು.












Click it and Unblock the Notifications