ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನಾದ್ಯಂತ ಕೊರೊನಾಗೆ 3 ಲಕ್ಷ ಬಲಿ, ಯಾವ ದೇಶದಲ್ಲಿ ಎಷ್ಟು ಸಾವು?

|
Google Oneindia Kannada News

ದೆಹಲಿ, ಮೇ 15: ಜಗತ್ತಿನಾದ್ಯಂತ ಕಾಡುತ್ತಿರುವ ಕೊರೊನಾ ವೈರಸ್‌ಗೆ 3 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ವಿಶ್ವದ ಸುಮಾರು 188 ದೇಶಗಳಲ್ಲಿ ಕೊವಿಡ್ ಸೋಂಕಿ ಕಾಣಿಸಿಕೊಂಡಿದ್ದು, 45 ಲಕ್ಷ ಜನರಿಗೆ ಸೋಂಕು ತಗುಲಿದೆ. ಅದರಲ್ಲಿ 3 ಲಕ್ಷ ಜನರು ಮೃತಪಟ್ಟಿದ್ದಾರೆ.

ನಿನ್ನೆ ಒಂದೇ ದಿನ 5317 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಎಂದಿನಂತೆ ಅಮೆರಿಕ, ಯುಕೆ, ಬ್ರೆಜಿಲ್, ಫ್ರಾನ್ಸ್ ದೇಶಗಳಲ್ಲಿ ನಿನ್ನೆ ಹೆಚ್ಚು ಸಾವು ಸಂಭವಿಸಿದೆ.

24 ಗಂಟೆಯಲ್ಲಿ 1754 ಸಾವು, ಅಮೆರಿಕದಲ್ಲಿ ಸಾವಿನ ಸಂಖ್ಯೆ ಏರಿಕೆ24 ಗಂಟೆಯಲ್ಲಿ 1754 ಸಾವು, ಅಮೆರಿಕದಲ್ಲಿ ಸಾವಿನ ಸಂಖ್ಯೆ ಏರಿಕೆ

ಭಾರತದಲ್ಲೂ ಮೇ 14 ರಂದು 3722 ಹೊಸ ಕೇಸ್ ಪತ್ತೆಯಾಗಿತ್ತು. 134 ಜನರು ಕೊವಿಡ್ ಸೋಂಕಿಗೆ ಬಲಿಯಾಗಿದ್ದರು. ಇನ್ನುಳಿದಂತೆ ಜಗತ್ತಿನ ಯಾವ ದೇಶಗಳಲ್ಲಿ ಎಷ್ಟು ಸಾವು ಸಂಭವಿಸಿದೆ? ಮುಂದೆ ಓದಿ....

ಯುಎಸ್‌ನಲ್ಲಿ ಅತಿ ಹೆಚ್ಚು ಸಾವು

ಯುಎಸ್‌ನಲ್ಲಿ ಅತಿ ಹೆಚ್ಚು ಸಾವು

ಯುಎಸ್‌ನಲ್ಲಿ ಈವರೆಗೂ 86912 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಒಟ್ಟು 1,457,593 ಜನರಿಗೆ ಸೋಂಕು ತಗುಲಿದೆ. ನಿನ್ನೆ ಒಂದೇ ದಿನ 1,715 ಮಂದಿ ಕೊವಿಡ್‌ಗೆ ಬಲಿಯಾಗಿದ್ದು, 27,246 ಕೇಸ್ ವರದಿಯಾಗಿದೆ. ಪ್ರಪಂಚದಾದ್ಯಂತ ಅಮೆರಿಕದಲ್ಲಿ ಅತಿ ಹೆಚ್ಚು ಕೇಸ್ ಮತ್ತು ಸಾವು ಸಂಭವಿಸಿದೆ.

ನಿಯಂತ್ರಣಕ್ಕೆ ಬಂತಾ ಯುಕೆ?

ನಿಯಂತ್ರಣಕ್ಕೆ ಬಂತಾ ಯುಕೆ?

ಯುಕೆಯಲ್ಲಿ ಈವರೆಗೂ 33,614 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಅಮೆರಿಕ ಬಿಟ್ಟರೆ ಯುಕೆಯಲ್ಲಿ ಹೆಚ್ಚು ಸಾವು ಸಂಭವಿಸಿದೆ. ಆದರೆ, ಸೋಂಕಿತರ ಸಂಖ್ಯೆಯಲ್ಲಿ ಸ್ಪೇನ್ ಮತ್ತು ರಷ್ಯಾಗಿಂತ ಕಡಿಮೆ ಕೇಸ್ ಹೊಂದಿದೆ. ಯುಕೆಯಲ್ಲಿ 233,151 ಪ್ರಕರಣಗಳು ದಾಖಲಾಗಿದೆ. ನಿನ್ನೆ 3446 ಕೇಸ್ ಪತ್ತೆಯಾಗಿದ್ದು, 428 ಜನ ಮೃತಪಟ್ಟಿದ್ದಾರೆ.

ಇಟಲಿಯಲ್ಲಿ ಸಾವಿನ ಸಂಖ್ಯೆ ಇಳಿಕೆ

ಇಟಲಿಯಲ್ಲಿ ಸಾವಿನ ಸಂಖ್ಯೆ ಇಳಿಕೆ

ಕೊರೊನಾ ಹಾಟ್‌ಸ್ಪಾಟ್‌ ಆಗಿದ್ದ ಇಟಲಿಯಲ್ಲಿ ಹೊಸ ಕೇಸ್‌ಗಳ ಸಂಖ್ಯೆ ಇಳಿಕೆಯಾಗಿದೆ. ನಿನ್ನೆ 992 ಹೊಸ ಕೇಸ್ ಪತ್ತೆಯಾಗಿದ್ದು, 262 ಜನರು ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ ಈವರೆಗೂ ಒಟ್ಟು 31,368 ಮಂದಿ ಬಲಿಯಾಗಿದ್ದಾರೆ. ಇಟಲಿಯಲ್ಲಿ ಒಟ್ಟು 223,096 ಜನರಿಗೆ ಕೊವಿಡ್ ಸೋಂಕು ತಗುಲಿದೆ.

ಫ್ರಾನ್ಸ್ ಮತ್ತು ಸ್ಪೇನ್

ಫ್ರಾನ್ಸ್ ಮತ್ತು ಸ್ಪೇನ್

ಫ್ರಾನ್ಸ್ ಮತ್ತು ಸ್ಪೇನ್‌ ದೇಶಗಳಲ್ಲೂ ಕೊರೊನಾ ಅಟ್ಟಹಾಸ ಮಾಡಿತ್ತು. ಈಗ ಈ ಎರಡು ದೇಶಗಳಲ್ಲಿ ಕೊವಿಡ್ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದೆ. ಫ್ರಾನ್ಸ್ ನಲ್ಲಿ 27,425 ಜನರು ಸಾವನ್ನಪ್ಪಿದ್ದರೆ, ಸ್ಪೇನ್‌ ದೇಶದಲ್ಲಿ 27,321 ಮಂದಿ ಮೃತಪಟ್ಟಿದ್ದಾರೆ.

English summary
Worldwide corona deaths crosses 300,000 (3 Lakh). now, total number of positive cases close to 4.5 million.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X