ಜಗತ್ತಿನ ಹಿರಿಯ ಶ್ವಾನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ

Subscribe to Oneindia Kannada

ಮೆಲ್ಬೋರ್ನ್, ಏಪ್ರಿಲ್, 20: ನಾಯಿಗಳ ಸರಾಸರಿ ವಯಸ್ಸು ಎಷ್ಟು? ಒಂದು 10-13 ವರ್ಷ. ಆದರೆ ವಿಶ್ವದ ಹಿರಿಯ ನಾಯಿ ಎಂದು ದಾಖಲೆ ಬರೆದುಕೊಂಡಿದ್ದ ಶ್ವಾನ 30 ವರ್ಷ ಬದುಕಿ ಕೊನೆ ಉಸಿರು ಎಳೆದಿದೆ.

ವಿಶ್ವದ ಹಿರಿಯ "ನಾಯಜ್ಜಿ" ಇನ್ನಿಲ್ಲ. ಆಸ್ಟ್ರೇಲಿಯಾದ 30 ವರ್ಷದ 'ಮ್ಯಾಗಿ' ಮಂಗಳವಾರ ಸಾವನ್ನಪ್ಪಿದೆ. ವಿಕ್ಟೋರಿಯಾದ ಕೃಷಿಕರೊಬ್ಬರ ಬಳಿಯಿದ್ದ ನಾಯಿ ಕೊನೆ ಉಸಿರೆಳೆದಿದ್ದು ದಾಖಲೆಯೊಂದಿಗೆ ಸಾವು ಕಂಡಿದೆ.[ಡಿಕೆ ರವಿ ಮುದ್ದಿನ ನಾಯಿ ರೋನಿ ರೋದನಕ್ಕಿಲ್ಲ ಉತ್ತರ]

dog

ಕೃಷಿಕ ಬ್ರಿಯಾನ್ ಮೆಕ್ಲಾರೆನ್ ತಮ್ಮ ಪ್ರೀತಿಯ ನಾಯಿ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ. ವರ್ಷದ ಹಿಂದೆಯೇ ನಾಯಿ ದೃಷ್ಟಿ, ಶ್ರವಣಶಕ್ತಿ ಕಳೆದುಕೊಂಡಿತ್ತು. ಆಸ್ಟ್ರೇಲಿಯಾದ ಬ್ಯುಯೆ ಹೆಸರಿನ ನಾಯಿಯೂ 29 ವರ್ಷ ಬದುಕಿದ್ದು ಎರಡನೇ ದಾಖಲೆ.

ಸಾಯುವ 2 ದಿನಗಳ ಮುನ್ನ ಸಹ ಮ್ಯಾಗಿ ನಮ್ಮ ಮಾತಿಗೆ ಸ್ಪಂದನೆ ಮಾಡುತ್ತಿತ್ತು. ಸಹಜ ಸಾವನ್ನು ಪಡೆದುದ್ದಕ್ಕೆ ಸಂತಸವಿದೆ. ಆದರೆ ನಮ್ಮ ಮನೆಯ ಸದಸ್ಯರೇ ನಮ್ಮನ್ನು ಬಿಟ್ಟು ಹೋದ ನೋವು ಇದೆ ಎಂದು ಮೆಕ್ಲಾರೆನ್ ಹೇಳಿದ್ದಾರೆ.[ನಾಯಿಗೂ ಆಧಾರ್ ಕಾರ್ಡ್ ಮಾಡಿಸಿದ ಕಿಲಾಡಿ!]

ಸಾಕು ಪ್ರಾಣಿಗಳಲ್ಲಿ ಶ್ವಾನ ಹಲವರಿಗೆ ಅಚ್ಚು ಮೆಚ್ಚು. 30 ವರ್ಷಗಳ ಕಾಲ ನಮ್ಮೊಂದಿಗೆ ಬದುಕಿದ ಮ್ಯಾಗಿಯ ತುಂಟಾಟಗಳನ್ನು ನೆನೆಯುತ್ತ ಅವಳನ್ನು ಸಂತಸದಿಂದ ಕಳುಹಿಸಿಕೊಟ್ಟಿದ್ದೇವೆ ಎಂದು ಮೆಕ್ಲಾರೆನ್ ಹೇಳುತ್ತಾರೆ. ದೀರ್ಘ ಕಾಲ ಬದುಕಿ ಸಹಜ ಸಾವು ಪಡೆದ ನಾಯಿಯ ಆತ್ಮಕ್ಕೆ ಶಾಂತಿ ಬಯಸೋಣ..

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An Australian dog, the world's oldest, died at the age of 30 in southwest Victoria, owner of the dog said on Wednesday. The kelpie, called Maggie, was found dead by her owner Brian McLaren earlier this week on his farm, near the rural town of Warrnambool.
Please Wait while comments are loading...