• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನಕ್ಕೆ ವಿಶ್ವಬ್ಯಾಂಕ್, ಐಎಂಎಫ್‌ನಿಂದ ಹಣದ ಹರಿವು

|

ಇಸ್ಲಾಮಾಬಾದ್, ಮಾರ್ಚ್ 27: ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲಿನಲ್ಲಿ ಉಂಟಾಗಿರುವ ನಗದು ಕೊರತೆಯನ್ನು ನೀಗಿಸಿ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಲು ಮತ್ತು ಸಾಮಾಜಿಕ ವಲಯದ ಕಾರ್ಯಕ್ರಮಗಳಿಗೆ ಬೆಂಬಲ ಒದಗಿಸಲು 1.336 ಬಿಲಿಯನ್ ಡಾಲರ್ ಆರ್ಥಿಕ ನೆರವು ಒದಗಿಸಲು ವಿಶ್ವ ಬ್ಯಾಂಕ್ ಒಪ್ಪಂದಕ್ಕೆ ಸಹಿ ಹಾಕಿದೆ.

128 ಮಿಲಿಯನ್ ಅನುದಾನ ಸೇರಿದಂತೆ 1.336 ಬಿಲಿಯನ್ ಡಾಲರ್‌ನ ಆರು ಪ್ರಾಜೆಕ್ಟ್ ಒಪ್ಪಂದಗಳಿಗೆ ಶುಕ್ರವಾರ ಸಹಿ ಹಾಕಲಾಗಿದೆ. ಇದು ಪಾಕ್ ಸರ್ಕಾರದ ಸಾಮಾಜಿಕ ರಕ್ಷಣೆ, ವಿಪತ್ತು ಮತ್ತು ಹವಾಮಾನ ಅಪಾಯಗಳ ನಿರ್ವಹಣೆ, ಮೂಲ ಸೌಕರ್ಯ ಅಭಿವೃದ್ಧಿ, ಕೃಷಿ, ಆಹಾರ ಭದ್ರತೆ, ಮಾನವ ಬಂಡವಾಳ ಅಭಿವೃದ್ಧಿ ಮತ್ತು ಆಡಳಿತ ವಲಯಗಳ ಸುಧಾರಣೆ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.

ಪಾಕ್ ರಾಷ್ಟ್ರೀಯ ದಿನಕ್ಕೆ ಶುಭ ಕೋರಿ ಇಮ್ರಾನ್‌ ಖಾನ್‌ಗೆ ಮೋದಿ ಪತ್ರ

ಈ ವಾರದ ಆರಂಭದಲ್ಲಷ್ಟೇ ಪಾಕಿಸ್ತಾನದ ಆರ್ಥಿಕ ಪ್ರಗತಿಯ ಬಾಕಿ ಉಳಿದಿದ್ದ ನಾಲ್ಕು ಪರಾಮರ್ಶೆಗಳನ್ನು ಪೂರ್ಣಗೊಳಿಸಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), 500 ಮಿಲಿಯನ್ ಡಾಲರ್ ಸಾಲ ನೀಡಲು ಒಪ್ಪಿಕೊಂಡಿತ್ತು.

   DK ಶಿವಕುಮಾರ್ ಹೆಸರು ಹೇಳಿದ ಸಿಡಿ ಲೇಡಿ | Oneindia Kannada

   ದೇಶದ ಬಡ ಮತ್ತು ಕಡುಬಡತನದಲ್ಲಿರುವ ಕುಟುಂಬಗಳ ಅಭಿವೃದ್ಧಿಗೆ, ಸಾಮಾಜಿಕ ರಕ್ಷಣೆ ವ್ಯವಸ್ಥೆಯ ಕಾರ್ಯಕ್ರಮವನ್ನು ಬೆಂಬಲಿಸಲು (ಸಿಆರ್‌ಐಎಸ್‌ಪಿ) 600 ಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿಶ್ವ ಬ್ಯಾಂಕ್‌ನ ನಿರ್ದೇಶಕ ನಜಿ ಬೆನ್ಹಾಸಿನ್ ಮತ್ತು ಪಾಕಿಸ್ತಾನದ ಆರ್ಥಿಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನೂರ್ ಅಹ್ಮದ್ ಸಹಿ ಹಾಕಿದರು.

   English summary
   World Bank has signed agreement with Pakistan to provide loans over $1 billion, days after IMF afreed to provide $500 Million assistance.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X