ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರಿಗೆ ಕ್ರೀಡೆ ನಿಷೇಧ, ಯಾವುದೇ ಕ್ರೀಡೆಯಲ್ಲೂ ಭಾಗವಹಿಸುವಂತಿಲ್ಲ; ತಾಲಿಬಾನ್

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಕಾಬೂಲ್, ಸೆಪ್ಟೆಂಬರ್ 9: ಮಹಿಳೆಯರ ಮೇಲೆ ಕಠಿಣ ಕಾನೂನು ಜಾರಿಯಿಂದಾಗಿ ಟೀಕೆಗೆ ಗುರಿಯಾಗಿದ್ದ ತಾಲಿಬಾನ್, ಈ ಬಾರಿ ಮಹಿಳೆಯರಿಗೆ ಹಲವು ಅವಕಾಶಗಳನ್ನು ನೀಡುವುದಾಗಿ ಘೋಷಿಸಿ ನೂತನ ಸರ್ಕಾರ ರಚನೆ ಮಾಡಿದೆ. ಹಲವು ನಿಬಂಧನೆಗಳನ್ನು ಹೇರಿ, ಅದರನ್ವಯ ಮಹಿಳೆಯರು ಶಿಕ್ಷಣ ಪಡೆಯಬಹುದು ಎಂದು ಘೋಷಿಸಿದೆ. ಆದರೆ ಕ್ರೀಡೆಯಲ್ಲಿ ಮಹಿಳೆಯರು ತೊಡಗಿಕೊಳ್ಳುವಂತಿಲ್ಲ ಎಂದು ಗುರುವಾರ ತಿಳಿಸಿದೆ.

ಕ್ರಿಕೆಟ್ ಒಳಗೊಂಡಂತೆ ಯಾವುದೇ ಕ್ರೀಡಾ ಚಟುವಟಿಕೆಗಳಲ್ಲಿ ಮಹಿಳೆಯರು ಭಾಗವಹಿಸುವುದನ್ನು ನಿಷೇಧಿಸಲಾಗಿದೆ ಎಂದು ತಾಲಿಬಾನ್ ಸಾಂಸ್ಕೃತಿಕ ಸಮಿತಿ ಉಪಾಧ್ಯಕ್ಷ ಅಹ್ಮದುಲ್ಲಾ ವಾಸಿಖ್ ಹೇಳಿದ್ದಾರೆ.

ಒಂದೇ ಕ್ಲಾಸಿನ ಹುಡುಗ-ಹುಡುಗಿಯರ ಮಧ್ಯೆ ಪರದೆ; ಅಫ್ಘಾನ್ ವಿವಿಗಳಲ್ಲಿ ಇದೆಂಥಾ ದುಸ್ಥಿತಿ?ಒಂದೇ ಕ್ಲಾಸಿನ ಹುಡುಗ-ಹುಡುಗಿಯರ ಮಧ್ಯೆ ಪರದೆ; ಅಫ್ಘಾನ್ ವಿವಿಗಳಲ್ಲಿ ಇದೆಂಥಾ ದುಸ್ಥಿತಿ?

ಆಸ್ಟ್ರೇಲಿಯಾದ ಎಸ್‌ಬಿಎಸ್‌ ಟಿವಿಗೆ ಸಂದರ್ಶನ ನೀಡುವ ಸಂದರ್ಭ ಈ ಹೇಳಿಕೆ ನೀಡಿದ್ದಾರೆ. 'ಮಹಿಳೆಯರು ಮೈತುಂಬಾ ಉಡುಪು ಹಾಕಿಕೊಂಡು ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ಕ್ರೀಡಾ ಚಟುವಟಿಕೆಗಳಿಂದ ದೂರವಿರಿಸಲಾಗಿದೆ' ಎಂದು ಹೇಳಿದ್ದಾರೆ.

Women Will Be Banned From Sports Says Taliban

'ಮಹಿಳೆಯರು ತಮ್ಮ ಮುಖ ಹಾಗೂ ದೇಹವನ್ನು ಸಂಪೂರ್ಣ ಮುಚ್ಚಿಕೊಂಡು ಕ್ರಿಕೆಟ್‌ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಇಸ್ಲಾಂ ಮಹಿಳೆಯರನ್ನು ಈ ರೀತಿ ನೋಡಲು ಒಪ್ಪುವುದಿಲ್ಲ' ಎಂದು ಅಹ್ಮದುಲ್ಲಾ ತಿಳಿಸಿದ್ದಾರೆ. ಜೊತೆಗೆ, 'ಇದು ಮಾಧ್ಯಮ ಯುಗ. ಫೋಟೊಗಳು ಹಾಗೂ ವಿಡಿಯೋಗಳು ಹರಿದಾಡುತ್ತವೆ. ಲಕ್ಷಾಂತರ ಜನರು ಅದನ್ನು ನೋಡುತ್ತಾರೆ' ಎಂದಿದ್ದಾರೆ.

'ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಪುರುಷರ ತಂಡವು ಭಾಗವಹಿಸುತ್ತದೆ' ಎಂದು ಈ ಮುನ್ನ ಹೇಳಿದ್ದರು.

ಹೊಸ ಸರ್ಕಾರದಲ್ಲಿ ಪ್ರಾತಿನಿಧ್ಯಕ್ಕೆ ಅಫ್ಘಾನ್ ಮಹಿಳೆಯರ ಹೋರಾಟಹೊಸ ಸರ್ಕಾರದಲ್ಲಿ ಪ್ರಾತಿನಿಧ್ಯಕ್ಕೆ ಅಫ್ಘಾನ್ ಮಹಿಳೆಯರ ಹೋರಾಟ

ಈ ಮುನ್ನ ಆಸ್ಟ್ರೇಲಿಯಾ ಕ್ರೀಡಾ ಸಚಿವ ರಿಚರ್ಡ್ ಕೋಲ್ವೆಕ್, ತಾಲಿಬಾನ್ ಸರ್ಕಾರ ಮಹಿಳಾ ಕ್ರಿಕೆಟ್ ನಿಷೇಧಿಸಿದರೆ ಕ್ರಮ ಕೈಗೊಳ್ಳಬೇಕು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಒತ್ತಾಯಿಸಿದ್ದರು. ಈ ಭಯಾನಕ ತೀರ್ಪಿನ ವಿರುದ್ಧ ನಿಲುವು ತೆಗೆದುಕೊಳ್ಳುವಂತೆ ಅಂತರರಾಷ್ಟ್ರೀಯ ಕ್ರೀಡಾ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ ಎಂದು ಹೇಳಿದ್ದರು.

Women Will Be Banned From Sports Says Taliban

ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸುವುದು ಇಸ್ಲಾಮಿಕ್ ಧರ್ಮವಲ್ಲ ಎಂದು ತಾಲಿಬಾನ್ ಪರಿಗಣಿಸಿರುವುದರಿಂದ ಈ ಬೆಳವಣಿಗೆ ಅಚ್ಚರಿಯೇನಲ್ಲ. ಇದೇ ಕಾರಣಕ್ಕೆ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅನೇಕ ಮಹಿಳಾ ಕ್ರೀಡಾಪಟುಗಳು ದೇಶದಿಂದ ಪಲಾಯನ ಮಾಡಿದ್ದರು.

ಮಹಿಳೆಯರ ಹಕ್ಕುಗಳನ್ನು ಗೌರವಿಸುವುದಾಗಿ ಹೇಳಿದ್ದ ತಾಲಿಬಾನ್
ಇಸ್ಲಾಮಿಕ್ ಕಾನೂನಿನ ಪ್ರಕಾರ ಮಹಿಳಾ ಹಕ್ಕುಗಳನ್ನು ಗೌರವಿಸುವುದಾಗಿ ತಾಲಿಬಾನ್ ಭರವಸೆ ನೀಡಿತ್ತು. ಇದಾಗ್ಯೂ ಪುರುಷ ಕೇಂದ್ರಿತ ತಾಲಿಬಾನ್ ಸರ್ಕಾರ ರಚನೆ ಮಹಿಳಾ ಹಕ್ಕುಗಳ ಕುರಿತು ಚಿಂತಿಸುವಂತೆ ಮಾಡಿದೆ. ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿದ ತಾಲಿಬಾನ್ ಸಂಘಟನೆ ಮಹಿಳಾ ಹಕ್ಕುಗಳನ್ನು ಗೌರವಿಸುತ್ತೇವೆ ಎಂಬ ಮಾತಿಗೆ ವಿರುದ್ಧ ನಡೆದುಕೊಳ್ಳುವ ಸುಳಿವು ನೀಡಿದೆ. 20 ವರ್ಷಗಳ ಹಿಂದಿನ ತನ್ನ ಆಡಳಿತ ವೈಖರಿಯನ್ನೇ ಮುಂದುವರಿಸುವಂತೆ ಕಾಣುತ್ತಿದೆ.

ಮತ್ತೆ ಹಳೇ ಆಡಳಿತ ವೈಖರಿ?
ಕೆಲವು ದಿನಗಳ ಹಿಂದಷ್ಟೇ ಸುರಕ್ಷತೆ ದೃಷ್ಟಿಯಿಂದ ಮಹಿಳೆಯರು ಸ್ವಲ್ಪ ದಿನಗಳ ಕಾಲ ಮನೆಯಲ್ಲೇ ಉಳಿಯಬೇಕು ಎಂದು ತಾಲಿಬಾನ್ ಆದೇಶಿಸಿತ್ತು. ಬ್ಯಾಂಕ್, ಕಚೇರಿ ಮತ್ತು ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯರನ್ನು ವಾಪಸ್ ಕಳುಹಿಸಿ, ಮನೆಯಲ್ಲೇ ಇರುವಂತೆ ಹೇಳಿತ್ತು.

Women Will Be Banned From Sports Says Taliban

ಶಿಕ್ಷಣದಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ್ದರೂ, ಅಫ್ಘಾನಿಸ್ತಾನದ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸಿ ನೋಡಲಾಗುತ್ತಿದೆ. ಯಾವ ರೀತಿಯ ಸಮವಸ್ತ್ರವನ್ನು ಧರಿಸಬೇಕು, ಕಾಲೇಜುಗಳಿಗೆ ತೆರಳಿದ ವೇಳೆ ವಿದ್ಯಾರ್ಥಿನಿಯರು ಎಲ್ಲಿ ಮತ್ತು ಯಾವ ರೀತಿಯಾಗಿ ಕುಳಿತುಕೊಳ್ಳಬೇಕು, ವಿದ್ಯಾರ್ಥಿನಿಯರಿಗೆ ಯಾರು ಬೋಧನೆ ಮಾಡಬೇಕು ಎಂಬ ಎಲ್ಲ ಹಂತಗಳಲ್ಲೂ ನಿರ್ಬಂಧಗಳನ್ನು ವಿಧಿಸಲಾಗಿದೆ.

Recommended Video

ಬಗ್ರಾಮ್ ಏರ್ ಬೇಸ್ ಮೇಲೆ ಕಣ್ಣಿಟ್ಟಿರುವ ಚೀನಾ! | Oneindia Kannada

ಮಹಿಳೆಯರ ಮೇಲೆ ಕಠಿಣ ಕಾನೂನಿಗೆ ಟೀಕೆ ಎದುರಿಸಿದ್ದ ತಾಲಿಬಾನ್:
ತಾಲಿಬಾನ್ 1996 ರಿಂದ 2001 ರವರೆಗೆ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿದ ತಾಲಿಬಾನ್ ಮಹಿಳೆಯರ ಮೇಲೆ ಕಠಿಣ ಜಾರಿಯಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಒಳಗಾಗಿತ್ತು.
ಈ ಕಾನೂನಿನ ಪ್ರಕಾರ, ಮಹಿಳೆಯರು ಕೆಲಸಕ್ಕೆ ಹೋಗುವಂತಿಲ್ಲ ಹಾಗೂ ಹುಡುಗಿಯರಿಗೆ ಶಾಲಾ-ಕಾಲೇಜುಗಳಿಗೆ ಹಾಜರಾಗುವುದಕ್ಕೆ ಯಾವುದೇ ರೀತಿ ಅನುಮತಿ ಇರುವುದಿಲ್ಲ. ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ತಮ್ಮ ಮುಖವನ್ನು ಸಂಪೂರ್ಣ ಮುಚ್ಚಿಕೊಳ್ಳಬೇಕು. ಒಬ್ಬ ಪುರುಷ ಸಂಬಂಧಿ ಆಕೆ ಜೊತೆಗಿರಬೇಕು. ಈ ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ.

English summary
Afghanistan women will be banned from participating in sports, including cricket, Ahmadullah Wasiq, the deputy head of the Taliban's cultural commission says
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X