• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಹ್ಯಾಕಾಶದ ಮೊದಲ ಅಪರಾಧ ಪ್ರಕರಣಕ್ಕೆ ಹೊಸ ಟ್ವಿಸ್ಟ್

|

ನ್ಯೂಯಾರ್ಕ್, ಏಪ್ರಿಲ್ 11: ಬಾಹ್ಯಾಕಾಶದಿಂದಲೇ ಪತಿ ತನ್ನ ಬ್ಯಾಂಕ್ ಖಾತೆಯನ್ನು ಬಳಸಿದ್ದ ಎಂದು ಪತ್ನಿ ಮಾಡಿದ ಆರೋಪ ಈಗ ಸುಳ್ಳು ಎಂದು ಸಾಬೀತಾಗಿದೆ.

ಬಾಹ್ಯಾಕಾಶದಲ್ಲಿ ನಡೆದ ಮೊದಲ ಅಪರಾಧ ಪ್ರಕರಣ ಎಂದು ಇದನ್ನು ಪರಿಗಣಿಸಲಾಗಿತ್ತು.ಸಮ್ಮರ್ ವೋರ್ಡನ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಆಕೆಯ ಪತಿ ಜನವರಿಯಲ್ಲಿ ಎರಡು ಬಾರಿ ತನ್ನ ಬ್ಯಾಂಕ್ ಖಾತೆಯನ್ನು ಬಳಕೆ ಮಾಡಿದ್ದ ಎಂದು ದೂರು ನೀಡಿದ್ದಳು.

ವೋರ್ಡನ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.ವೋರ್ಡನ್ 2019ರಲ್ಲಿ ಫೆಡರಲ್ ಟ್ರೇಡ್ ಕಮಿಷನ್‌ಗೆ ದೂರು ನೀಡಿದ್ದಳು. ಆದರೆ ಆಕೆಯ ಖಾತೆಯಿಂದ ಯಾವುದೇ ಹಣ ವರ್ಗಾವಣೆಯಾಗಿರುವ ಕುರಿತು ಮಾಹಿತಿ ಇರಲಿಲ್ಲ.

ಮೆಕ್ಲೇನ್ ಮತ್ತು ವಾರ್ಡೆನ್(ವಾಯುದಳದ ಇಂಟೆಲಿಜೆನ್ಸ್ ಅಧಿಕಾರಿ) 2014ರಲ್ಲಿ ವಿವಾಹವಾಗಿದ್ದು, 2018ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅನ್ನಾಮೆಕ್ಲೇನ್ ಮತ್ತು ಅವರ ಪತಿ ಸಮ್ಮರ್‍ವೋರ್ಡನ್ ಅವರು ಇತ್ತೀಚೆಗೆ ಪರಸ್ಪರ ವಿಚ್ಛೇದನ ಬಯಸಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ದಂಪತಿ ಪುತ್ರ ಯಾರ ಬಳಿ ಇರಬೇಕೆಂಬ ವಿವಾದವು ನ್ಯಾಯಾಲಯದಲ್ಲಿದೆ. ಅನ್ನಾಮೆಕ್ಲೇನ್‍ಗೆ ತಮ್ಮ ಪತಿಯ ಬ್ಯಾಂಕ್ ಖಾತೆ ಲಾಗಿನ್ ಮಾಡುವ ಮಾಹಿತಿಗಳು ತಿಳಿದಿದ್ದವು.

ಅಮೆರಿಕದ ವಾಯುಸೇನೆಯ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿಯಾಗಿರುವ ವಾರ್ಡನ್ ಇತ್ತೀಚೆಗೆ ತಮ್ಮ ಖಾತೆಯಿಂದ ಹಣ ಕಟಾವಣೆಯಾಗಿರುವುದನ್ನು ಗಮನಿಸಿ ಬ್ಯಾಂಕಿನಿಂದ ಮಾಹಿತಿ ಪಡೆದಾಗ ಅಂತರಿಕ್ಷದಲ್ಲಿರುವ ಕಂಪ್ಯೂಟರ್‍ನಿಂದ ವಹಿವಾಟು ನಡೆದಿರುವುದು ಪತ್ತೆಯಾಗಿದೆ.

ನೆಲದ ಕಾನೂನು ಬಾಹ್ಯಾಕಾಶಕ್ಕೂ ಅನ್ವಯಿಸುತ್ತದೆಯೇ ಎನ್ನುವ ಪ್ರಶ್ನೆ ಎದ್ದಿದೆ. ಐಎಸ್ ಎಸ್ ನಲ್ಲಿ ಅಮೆರಿಕ, ಕೆನಡಾ, ಜಪಾನ್, ರಷ್ಯಾ ಹಾಗೂ ಕೆಲವು ಯುರೋಪಿಯನ್ ದೇಶಗಳು ಭಾಗಿಯಾಗಿವೆ. ದಂಪತಿಗೆ 2020ರ ಜನವರಿ 8ರಂದು ವಿಚ್ಛೇದನ ಸಿಕ್ಕಿದೆ.

ವೋರ್ಡನ್ ಪ್ರಾಥಮಿಕ ತನಿಖೆಯಲ್ಲಿ ಖಾಸಗಿ ಬ್ಯಾಂಕ್ ಖಾತೆಯೊಂದನ್ನು 2018ರಲ್ಲಿ ತೆರೆದಿದ್ದು ಪಾಸ್‌ವರ್ಡ್‌ ರೀ ಸೆಟ್ ಮಾಡಿದ್ದು, ಯಾವುದೇ ಎರಡನೇ ವ್ಯಕ್ತಿ ಬ್ಯಾಂಕ್ ಖಾತೆ ತೆರೆದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅವರು 2018ರಲ್ಲೇ ಬ್ಯಾಂಕ್ ಖಾತೆ ತೆರೆದಿದ್ದರೂ 2019ರವರೆಗೆ ಪಾಸ್‌ವರ್ಡ್ ಬದಲಾಯಿಸಿರಲಿಲ್ಲ ಎಂಬುದು ತಿಳಿದುಬಂದಿದೆ.

English summary
A woman who claimed her ex-wife, a NASA astronaut working at the international space station, illegally accessed her bank account, has been charged with making false statements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X