ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Shocking: ಬಿಸಿಲಿನಲ್ಲಿ ಮಲಗಿದ್ದರ ಎಫೆಕ್ಟ್; ಪ್ಲಾಸ್ಟಿಕ್‌ನಂತಾದ ಚರ್ಮ- ಹೌಹಾರಿದ ಯುವತಿ

|
Google Oneindia Kannada News

ಸೋಫಿಯಾ ಆಗಸ್ಟ್ 22: ಮೂವತ್ತು ನಿಮಿಷಗಳ ಕಾಲ ಬಿಸಿಲಿನಲ್ಲಿ ಮಲಗಿದ್ದ 25 ವರ್ಷದ ಯುವತಿ ತನ್ನ ಹಣೆಯ ಚರ್ಮವು ಪ್ಲಾಸ್ಟಿಕ್‌ನಂತೆ ಬದಲಾಗಿರುವುದನ್ನು ಗಮನಿಸಿ ಗಾಬರಿಗೊಂಡಿದ್ದಾಳೆ.

ಬ್ಯೂಟಿಷಿಯನ್ ಸಿರಿನ್ ಮುರಾದ್ ಅವರು ಬಲ್ಗೇರಿಯಾದ ವಿಹಾರಕ್ಕೆಂದು ಹೋಗಿದ್ದರು. ಈ ವೇಳೆ 21 ಡಿಗ್ರಿ ಸೆಲ್ಸಿಯಸ್ ಬಿಸಿಲಿನಲ್ಲಿ ಸನ್‌ಸ್ಕ್ರೀನ್ ಇಲ್ಲದೆ ಮಲಗಿದ್ದರು. 30-ನಿಮಿಷ ನಿದ್ರೆ ಮಾಡಿ ಎದ್ದರು. ಅವರ ಬಿಡುವಿನ ಸಮಯದಲ್ಲೆಲ್ಲಾ ಅವರು ವಿಶ್ರಾಂತಿ ಪಡೆಯುವುದನ್ನು ಮುಂದುವರೆಸಿದ್ದಾರೆ. ಈ ವೇಳೆ ಕೆಂಪು ಮುಖದ ಅವರ ಚರ್ಮ ಕೊಂಚ ನೋವಾಗುತ್ತಿರುವಂತೆ ಭಾಸವಾದರೂ ಅವರು ಅದರತ್ತ ಗಮನ ಹರಿಸಲಿಲ್ಲ. ಮರುದಿನ ಅವರ ಚರ್ಮ ತುಂಬಾ ಬಿಗಿಯಾಗಿ ಅವರ ಹಣೆ ಭಾಗ ಪ್ಲಾಸ್ಟಿಕ್‌ನಂತೆ ಕಾಣುತ್ತಿರುವುದನ್ನು ಅವರು ಗಮನಿಸಿದ್ದಾರೆ ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ.

ತನ್ನ ಕುಟುಂಬದೊಂದಿಗೆ ಸುಟ್ಟಗಾಯದಂತಾದ ಮುಖದ ಚರ್ಮದ ಬದಲಾವಣೆಯ ಬಗ್ಗೆ ಅವರು ಚರ್ಚಿಸಿದರು. ಆದರೆ ಅಮೆರಿಕಾದ 25 ವರ್ಷದ ಯುವತಿ ಮುರಾದ್ ವೈದ್ಯರ ಬಳಿಗೆ ಹೋಗಲಿಲ್ಲ. ಏಕೆಂದರೆ ಅದೊಂದು ಸ್ಕಿನ್ ಟ್ಯಾನ್ ಎಂದು ಅವರು ಭಾವಿಸಿದ್ದರು. ಆದರೆ ದಿನಗಳು ಕಳೆದಂತೆ ಮುರಾದ್ ಅವರ ಸಂಪೂರ್ಣ ಮುಖವು ಸಿಪ್ಪೆ ಸುಲಿಯಲು ಪ್ರಾರಂಭಿಸಿತು. ಅವಳ ತ್ವಚೆ ಟ್ಯಾನ್ ಆದ ಸಿಪ್ಪೆಯಿಂದ ತುಂಬಿರುವುದು ಕಂಡು ಬಂದಿದೆ.

Woman Shocked To Find Forehead Skin Looking Like Plastic

ವೇಲ್ಸ್ ಆನ್‌ಲೈನ್‌ನ ಪ್ರಕಾರ ಮುರಾದ್ ಮಾತನಾಡಿ, "ಮೊದಲಿಗೆ ಅದು ನನಗೆ ಏನೂ ಅನಿಸಲಿಲ್ಲ. ನಾನು ಅದರ ಮೇಲೆ ಒತ್ತಡ ಹಾಕಿದಾಗ ಅದು ಸ್ವಲ್ಪ ನೋಯುತ್ತಿತ್ತು. ಮರುದಿನ ಹೆಚ್ಚು ನೋವಾಗಲು ಆರಂಭಿಸಿತು. ಆದರೆ ಅದು ಸಿಪ್ಪೆ ಸುಲಿಯಲು ಪ್ರಾರಂಭಿಸಿದಾಗ ನನಗೆ ಸ್ವಲ್ಪ ನೋವಿನಿಂದ ಮುಕ್ತಿ ಸಿಕ್ಕಿತು. ಬಳಿಕ ಅದು ನೋಯಿಸಲಿಲ್ಲ. ಸದ್ಯ ನಾನು ಉತ್ತಮವಾಗಿದ್ದೇಳೆ. ವಿಲಕ್ಷಣವಾಗಿದ್ದ ನನ್ನ ಚರ್ಮವು ಈಗ ಉತ್ತಮವಾಗಿದೆ" ಎಂದು ಹೇಳಿದ್ದಾರೆ.

Woman Shocked To Find Forehead Skin Looking Like Plastic

ತ್ವಚೆಯ ನೋವಿನ ಅನುಭವದ ನಂತರ ಮುರಾದ್ ಈಗ ಸನ್‌ಸ್ಕ್ರೀನ್‌ನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಉತ್ಸುಕರಾಗಿದ್ದಾರೆ. "ನೀವು ಚೆನ್ನಾಗಿರುತ್ತೀರಿ ಅಥವಾ ನಿಮ್ಮ ಚರ್ಮವು ಸುಡುವುದಿಲ್ಲ ಎಂದು ಎಷ್ಟು ಬಾರಿ ಯೋಚಿಸಿದರೂ, ಯಾವಾಗಲೂ ಹಾಗಾಗಲು ಸಾಧ್ಯವಿಲ್ಲ. ಇದರಿಂದ ಸನ್‌ಸ್ಕ್ರೀನ್ ಅನ್ನು ಅನ್ವಯಿಸಿ!" ಎಂದು ಅವರು ಹೇಳಿದ್ದಾರೆ.

Woman Shocked To Find Forehead Skin Looking Like Plastic

ಈ ಘಟನೆಯು ಕಳೆದ ತಿಂಗಳು ನಡೆದಿದ್ದು, ಮುರಾದ್ ಅವರ ಚರ್ಮವು ಆಕೆಯ ಕೆನ್ನೆಗಳ ಮೇಲೆ ಕಪ್ಪು ಬಣ್ಣದ ಕಲೆಗಳನ್ನು ಹೊಂದಿದೆ. ಆದರೆ ಇದು ತೀವ್ರ ಬಿಸಿಲಿನ ಅಪಾಯದ ಸೂಚನೆಯಾಗಿರಬಹುದು ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಇದು ಚರ್ಮದ ಕ್ಯಾನ್ಸರ್ನ ಅತ್ಯಂತ ಅಪಾಯಕಾರಿ ವಿಧವಾಗಿದೆ ಎನ್ನಲಾಗುತ್ತಿದೆ.

Recommended Video

ಆತ್ಮ ನಿರ್ಭರ ಭಾರತದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಬಸ್ ಅನಾವರಣ | Oneindia Kannada

English summary
A 25-year-old woman who fell asleep in the sun for 30 minutes was left horrified after her forehead skin was left looking like plastic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X