Ukraine War: ಚಳಿಗಾಲ ಸಮಯದಲ್ಲಿ ದಿಢೀರ್ ಉಕ್ರೇನ್ ರಾಜಧಾನಿ ಕೀವ್ ವಶಕ್ಕೆ ರಷ್ಯಾ ಮಾಸ್ಟರ್ ಪ್ಲಾನ್?
ಎಲ್ಲಿ ನೋಡಿದರೂ ರಕ್ತ, ಇತಿಹಾಸ ಸಾರುತ್ತಿದ್ದ ಸ್ಥಳಗಳ ನಾಶ... ಅಂದಹಾಗೆ ಇದು ರಷ್ಯಾ ಸೇನೆ ಕೊಟ್ಟ ಏಟಿಗೆ ಸಿಲುಕಿ ನರಳಿ ಹೋಗಿರುವ ಉಕ್ರೇನ್ ಪರಿಸ್ಥಿತಿ. ರಷ್ಯಾ ಮತ್ತು ಉಕ್ರೇನ್ ನಡುವೆ ರಣಭೀಕರ ಕಾಳಗ ನಡೆಯುತ್ತಿದ್ದು, ಇಬ್ಬರೂ ಬಡಿದಾಡಿ ಸಾಮಾನ್ಯರ ಜೀವ ತೆಗೆಯುತ್ತಿದ್ದಾರೆಂಬ ಆರೋಪ ಕೂಡ ಜೋರಾಗಿದೆ. ಇಷ್ಟೆಲ್ಲಾ ಒತ್ತಡದ ನಡುವೆ ಈಗ ಮತ್ತೊಂದು ಸಂಚಲನ ಸೃಷ್ಟಿ ಮಾಡುವ ಸುದ್ದಿ ಹೊರ ಬಿದ್ದಿದೆ. ಅಂದಹಾಗೆ ಚಳಿಗಾಲದಲ್ಲಿ ದಿಢೀರ್ ಉಕ್ರೇನ್ ರಾಜಧಾನಿ ಕೀವ್ ವಶಕ್ಕೆ ರಷ್ಯಾ ಮಾಸ್ಟರ್ ಪ್ಲಾನ್? ಹಾಗಾದ್ರೆ ಮುಗೀತಾ ಉಕ್ರೇನ್ ಕಥೆ?
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮಯದಲ್ಲಿ ಒಂದು ಚಾಲೆಂಜ್ ಹಾಕಿ, ಮತದಾರರ ಎದುರು ಮಾತು ಕೊಟ್ಟಿದ್ದರು. ತಾವು ಅಧಿಕಾರಕ್ಕೆ ಬಂದ 24 ಗಂಟೆ ಒಳಗೆ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ನಿಲ್ಲಿಸಿಯೇ ತೀರುತೇನೆ ಎಂದು ಸವಾಲು ಎಸೆದಿದ್ದರು. ಈ ಮಾತು ತಿಂಗಳುಗಳೇ ಕಳೆದರೂ ಇನ್ನೂ ಈಡೇರಿಲ್ಲ, ಅಲ್ಲದೆ ಯುದ್ಧ ಇನ್ನಷ್ಟು ಜೋರಾಗುತ್ತಿದೆ. 2022 ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ರಷ್ಯಾ & ಉಕ್ರೇನ್ ವಾರ್ ಜೋರಾಗಿದ್ದು, ಇನ್ನೇನು 5ನೇ ವರ್ಷಕ್ಕೆ ಎಂಟ್ರಿ ಕೊಡಲಿದೆ. ಇದೇ ಸಮಯದಲ್ಲಿ ದೊಡ್ಡ ಆಘಾತವನ್ನು ಉಕ್ರೇನ್‌ಗೆ ಕೊಡಲು ರಷ್ಯಾ ದೊಡ್ಡ ಪ್ಲಾನ್ ಮಾಡಿದಂತಿದೆ!

ಉಕ್ರೇನ್ ರಾಜಧಾನಿ ಕೀವ್ ರಷ್ಯಾ ವಶಕ್ಕೆ?
ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿ ಸೇನೆಗಳ ಪೈಕಿ ರಷ್ಯಾ ಮಿಲಿಟರಿ ಕೂಡ ದೊಡ್ಡ ಹೆಸರು ಮಾಡಿದೆ. ಹೀಗಾಗಿ ರಷ್ಯಾ & ಉಕ್ರೇನ್ ನಡುವೆ ಯುದ್ಧ ನಿಲ್ಲುವ ಯಾವುದೇ ಮುನ್ಸೂಚನೆ ಕಾಣುತ್ತಿಲ್ಲ. ಈ ಕಾರಣಕ್ಕೆ ರಷ್ಯಾ & ಉಕ್ರೇನ್ ಯುದ್ಧವನ್ನ ನಿಲ್ಲಿಸಬೇಕು ಅಂತಾ ಭಾರಿ ದೊಡ್ಡ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಲೇ ಇವೆ. ಡೊನಾಲ್ಡ್ ಟ್ರಂಪ್ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಈ ವಿಚಾರವಾಗಿ ನೇರ ವಾರ್ನಿಂಗ್ ಕೊಟ್ಟಿದ್ದರೂ ಪ್ರಯೋಜನಕ್ಕೆ ಬಂದಿಲ್ಲ. ಇಂತಹ ಸಮಯದಲ್ಲೇ ಮತ್ತಷ್ಟು ತಿಕ್ಕಾಟ ಹೆಚ್ಚಾಗಿದೆ. ಅಲ್ಲದೆ ನೇರವಾಗಿ ಉಕ್ರೇನ್ ರಾಜಧಾನಿಗೆ ಸ್ಕೆಚ್ ಹಾಕಿದೆ ರಷ್ಯಾ ಸೇನೆ ಎಂಬ ಮಾತು ಓಡಾಡುತ್ತಿರುವುದು ಈಗ ಸಂಚಲನ ಸೃಷ್ಟಿ ಮಾಡಿದೆ...
ಯುದ್ಧ ನಿಲ್ಲದೆ ಹೋದರೆ ಸಮಸ್ಯೆ...
ಒಟ್ಟಾರೆ ಹೇಳುವುದಾದರೆ ಹೇಗಾದರೂ ಮಾಡಿ ಇದೀಗ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಈ ಯುದ್ಧದ ಪರಿಣಾಮ ಇನ್ನಷ್ಟು ಸಮಸ್ಯೆ ಸೃಷ್ಟಿ ಆಗುವುದು ಪಕ್ಕಾ ಅನ್ನೋ ಮಾತನ್ನ ತಜ್ಞರು ಹೇಳುತ್ತಿದ್ದಾರೆ. ಇನ್ನೊಂದು ಕಡೆ ಚಳಿಗಾಲದ ಸಮಯದಲ್ಲಿ ಅತ್ತ, ಉಕ್ರೇನ್ ಜನರು ಅನ್ನ & ಆಹಾರಕ್ಕೆ ನರಳುತ್ತಾ ಚಳಿಯಲ್ಲಿ ಒದ್ದಾಡುವಂತೆ ಆಗಿದೆ ಎಂಬ ಭಾರಿ ಗಂಭೀರ ಆರೋಪ ಕೂಡ ಕೇಳಿ ಬರುತ್ತಿದೆ.












Click it and Unblock the Notifications