• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದ್ದಕ್ಕಿದ್ದಂತೆ ಪಾಕಿಸ್ತಾನದ ಕೋಪ ಪ್ರಿಯಾಂಕಾ ಚೋಪ್ರಾ ಮೇಲೆ ತಿರುಗಿದ್ದೇಕೆ?

|

ಇಸ್ಲಾಮಾಬಾದ್, ಆಗಸ್ಟ್ 16: "ನಾನು ದೇಶಪ್ರೇಮಿ" ಎಂದು ಪ್ರಿಯಾಂಕಾ ಚೋಪ್ರಾ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನಿ ಮಹಿಳೆಗೆ ನೀಡಿದ ದಿಟ್ಟ ಉತ್ತರಕ್ಕೆ ಪ್ರತಿಯಾಗಿ, ಅವರನ್ನು ಯುನಿಸೆಫ್ ರಾಯಭಾರಿ ಸ್ಥಾನದಿಂದ ಕೆಳಗಿಳಿಸುವಂತೆ ಪಾಕಿಸ್ತಾನದಿಂದ ಪತ್ರವೊಂದನ್ನು ಬರೆಯಲಾಗಿದೆ!

ಭಾರತ ಬಾಲಕೋಟ್ ಏರ್ ಸ್ಟ್ರೈಕ್ ನಡೆಸಿದ್ದು ಸತ್ಯ: ಒಪ್ಪಿಕೊಂಡ ಇಮ್ರಾನ್ ಖಾನ್

ಯುನಿಸೆಫ್ ನ (United Nations International Children's Emergency Fund) ಗುಡ್ ವಿಲ್ ರಾಯಭಾರಿಯಾಗಿರುವ ಪ್ರಿಯಾಂಕಾ ಚೋಪ್ರಾ ಅವರನ್ನು ಆ ಸ್ಥಾನದಿಂದ ಕಿತ್ತುಹಾಕಬೇಕೆಂದು ಪಾಕಿಸ್ತಾನದ ನಟಿ ಅರ್ಮೀನಾ ಖಾನ್ ಮತ್ತು ಆಕೆಯ ಪ್ರಿಯಕರ ಫೆಸಾಲ್ ಖಾನ್ ಯುನಿಸೆಫ್ ಗೆ ಪತ್ರ ಬರೆದಿದ್ದಾರೆ!

ಸುಷ್ಮಾ ಸ್ವರಾಜ್ ನಿಧನಕ್ಕೆ 'ರೆಸ್ಟ್ ಇನ್ ಹೆಲ್' ಎಂದ ಪಾಕ್ ನಟಿ

ಬಾಲಕೋಟ್ ನಲ್ಲಿ ಭಾರತೀಯ ವಾಯುಸೇನೆ ಏರ್ ಸ್ಟ್ರೈಕ್ ನಡೆಸಿದ್ದನ್ನು ಪ್ರಿಯಾಂಕಾ ಚೋಪ್ರಾ ಸ್ವಾಗತಿಸಿದ್ದರು. ಆದರೆ ಶಾಂತಿಯ ರಾಯಭಾರಿಯಾಗಿ ಯುದ್ಧವನ್ನು ಪ್ರಚೋದಿಸುವುದು, ಸ್ವಾಗತಿಸುವುದು ಸರಿಯಲ್ಲ ಎಂದು ಪತ್ರದಲ್ಲಿ ದೂರಲಾಗಿದೆ.

ಏನಿದು ಪ್ರಕರಣ?

ಏನಿದು ಪ್ರಕರಣ?

ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರನ್ನು ಪಾಕಿಸ್ತಾನ ಮಹಿಳೆಯೊಬ್ಬರು ಪ್ರಶ್ನೆಯೊಂದನ್ನು ಕೇಳಿದ್ದರು. "ನೀವು ಮಾನವೀಯತೆಯ ಬಗ್ಗೆ ಮಾತನಾಡುವುದನ್ನು ಕೇಳಿದರೆ ನನಗೆ ಏನು ಹೇಳಬೇಕೋ ಗೊತ್ತಾಗುವುದಿಲ್ಲ. ಏಕೆಂದರೆ ನಾನು ನಿನ್ನ ನೆರೆಯ ಪಾಕಿಸ್ತಾನದವಳು. ನೀವು ಸ್ವಲ್ಪ ಕಪಟಿ ಎಂಬುದು ನನಗೆ ಗೊತ್ತು. ಏಕೆಂದರೆ ನೀವು ಫೆಬ್ರವರಿ 26 ರಂದು 'ಇಂಡಿಯನ್ ಆರ್ಮ್ಡ್ ಫೋರ್ಸ್ ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಜೈ ಹಿಂದ್' ಎಂದು ಟ್ವೀಟ್ ಮಾಡಿದ್ದಿರಿ. ನೀವು ಯುನಿಸೆಫ್ ನ ಶಾಂತಿಯ ರಾಯಭಾರಿ. ಆದರೆ ಪಾಕಿಸ್ತಾನದ ಜೊತೆಗಿನ ಅಣು ಯುದ್ಧವನ್ನು ಪ್ರೋತ್ಸಾಹಿಸುತ್ತಿದ್ದೀರಿ. ಅದರಲ್ಲಿ ಯಾರೂ ಗೆಲ್ಲುವುದಕ್ಕೆ ಸಾಧ್ಯವಿಲ್ಲ" ಎಂದಿದ್ದರು.

ದಿಟ್ಟ ಉತ್ತರ ನೀಡಿದ ಪ್ರಿಯಾಂಕಾ ಚೋಪ್ರಾ

ದಿಟ್ಟ ಉತ್ತರ ನೀಡಿದ ಪ್ರಿಯಾಂಕಾ ಚೋಪ್ರಾ

ಆಕೆಯ ಮಾತುಗಳನ್ನು ಶಾಂತವಾಗಿಯೇ ಕೇಳಿಸಿಕೊಂಡ ಪ್ರಿಯಾಂಕಾ ಚೋಪ್ರಾ, "ನೀನು ಆಗ ಕೂಗುತ್ತಿದ್ದಾಗಲೇ ನಾನು ನಿನ್ನ ಮಾತನ್ನು ಕೇಳಿಸಿಕೊಂಡೆ ಈಗ ಶಾಂತಿಯಿಂದ ಕೇಳು. ನನಗೆ ಪಾಕಿಸ್ತಾನದಲ್ಲಿ ಸಾಕಷ್ಟು ಸ್ನೇಹಿತರಿದ್ದಾರೆ. ಆದರೆ ನಾನು ಭಾರತೀಯಳು. ಯುದ್ಧ ಎಲ್ಲಕ್ಕೂ ಪರಿಹಾರ ಎಮದು ನಾನು ಎಂದಿಗೂ ಅಂದುಕೊಂಡಿಲ್ಲ. ಆದರೆ ನಾನು ದೇಶಭಕ್ತಳು. ನನ್ನನ್ನು ಪ್ರೀತಿಸುವ ಯಾರಿಗಾದರೂ ನಾನು ನೋವುಂಟು ಮಾಡಿದ್ದರೆ ಕ್ಷಮಿಸಿ ವೈರುದ್ಧ್ಯದ ಅಭಿಪ್ರಾಯಗಳಲಿರಬಹುದು. ಆದರೆ ನಾವು ಇಲ್ಲಿರುವುದು ಕೇವಲ ಪ್ರೀತಿ ಮಾಡುವುದಕ್ಕೆ. ಚೀರಾಡುವುದರಿಂದ ಪ್ರಯೋಜನವಿಲ್ಲ. ಈ ಪ್ರಶ್ನೆಯನ್ನು ಕೇಳಿದ ನಿಮ್ಮ ಹುಮ್ಮಸ್ಸನ್ನು ನಾನು ಮೆಚ್ಚುತ್ತೇನೆ" ಎಂದು ಪ್ರಿಯಾಂಕಾ ಚೋಪ್ರಾ ಉತ್ತರಿಸಿದ್ದರು. ಆಕೆಯ ಉತ್ತರಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳೂ ಬಂದವು.

ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಬೆದರಿಕೆ ಒಡ್ಡಿದ ಇಮ್ರಾನ್ ಖಾನ್ !

ಅರ್ಮಿನಾ ಪತ್ರದಲ್ಲೇನಿದೆ?

ಅರ್ಮಿನಾ ಪತ್ರದಲ್ಲೇನಿದೆ?

ಆದರೆ ಇದಾಗಿ ಕೆಲದಿನಗಳ ನಂತರ ಇದೀಗ, ಪಾಕಿಸ್ತಾನಿ ನಟಿ ಅರ್ಮೀನಾ ಖಾನ್ ಯುನಿಸೆಫ್ ಗೆ ಪತ್ರ ಬರೆದಿದ್ದು, ಪ್ರಿಯಾಂಕಾ ಚೋಪ್ರಾ ಅವರು ಭಾರತವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದು, ಅವರು ಯುನಿಸೆಫ್ ನ ಶಾಂತಿ ರಾಯಭಾರಿಯಾಗಿ ತಾರತಮ್ಯವಿಲ್ಲದೆ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ. ಆದ್ದರಿಂದ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಬೇಕು. ಇಲ್ಲವೆಂದರೆ ನಮಗೆಲ್ಲ ಯುನಿಸೆಫ್ ಮೇಲಿರುವ ಗೌರವ ಕಡಿಮೆಯಾಗುತ್ತದೆ" ಎಂದು ಬರೆದಿದ್ದಾರೆ.

ಜೊತೆಗೆ ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣವನ್ನೂ ಉಲ್ಲೇಖಿಸಿರುವ ಅವರು, 'ಯುದ್ಧವನ್ನು ಬೆಂಬಲಿಸುವ ಶಾಂತಿಯ ರಾಯಭಾರಿಗಳು ನಮಗೆ ಬೇಕಿಲ್ಲ' ಎಂದಿದ್ದಾರೆ.

ಗುಡ್ ವಿಲ್ ರಾಯಭಾರಿಯ ಕೆಲಸವೇನು?

ಗುಡ್ ವಿಲ್ ರಾಯಭಾರಿಯ ಕೆಲಸವೇನು?

2006 ರಿಂದಲೇ ಯುನಿಸೆಫ್ ಸಂಪರ್ಕದಲ್ಲಿದ್ದ ಪ್ರಿಯಾಂಕಾ ಚೋಪ್ರಾ, ಸಾಮಾಜಿಕ ಕಾಳಜಿ, ಪರಿಸರ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂಬುದನ್ನು ಪರಿಗಣಿಸಿ, 2010 ಮತ್ತು 2016 ರಲ್ಲಿಯೂ ಅವರನ್ನು ಯುನಿಸೆಫ್ ನ ಗುಡ್ ವಿಲ್ ಅಂಬಾಸೆಡರ್ ಆಗಿ ನೇಮಿಸಲಾಗಿದೆ. ಮಕ್ಕಳ ಹಕ್ಕುಗಳ ಬಗ್ಗೆ ಹೋರಾಡುವುದು ಮತ್ತು ಶಾಂತಿಗೆ ಒತ್ತು ನೀಡುವುದು ಈ ರಾಯಭಾರಿಗಳ ಕರ್ತವ್ಯವಾಗಿರುತ್ತದೆ.

English summary
Pakistani actress Armeena Khan and her fiance have written a letter to UNICEF for Indian actress Priyanka Chopra's removal as peace ambassador.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X