ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ಯುರೋಪ್ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

|
Google Oneindia Kannada News

ಜಗತ್ತಿನಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 3 ಕೋಟಿ ಗಡಿ ದಾಟಿದೆ. ಪರಿಸ್ಥಿತಿ ಮತ್ತೆ ಕೈಮೀರುತ್ತಿರುವ ಸಂದರ್ಭದಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಯುರೋಪ್ ರಾಷ್ಟ್ರಗಳಿಗೆ ಚಳಿಗಾಲಕ್ಕೂ ಮೊದಲು ವಾರ್ನಿಂಗ್ ಕೊಟ್ಟಿದೆ. ಯುರೋಪ್‌ನಲ್ಲಿ 2ನೇ ಅಲೆ ಅಪ್ಪಳಿಸುವ ಸಾಧ್ಯತೆ ಇದ್ದು, ಈ ಬಾರಿ ಸೋಂಕಿನ ಪರಿಣಾಮ ಭೀಕರವಾಗಿರಲಿದೆ ಅಂತಾ WHO ಎಚ್ಚರಿಕೆ ಕೊಟ್ಟಿದೆ.

ಈಗಾಗಲೇ ಕೊರೊನಾ ವೈರಸ್ ಅಬ್ಬರಕ್ಕೆ ಬೆಚ್ಚಿಬಿದ್ದು ಮೆಲ್ಲಗೆ ಕೊರೊನಾ ಕೂಪದಿಂದ ಹೊರಬರುತ್ತಿರುವ ಯುರೋಪ್‌ಗೆ ಇದು ಶಾಕ್ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿದಂತೆ ಕಳೆದ ಕೆಲವು ದಿನಗಳಿಂದ ಯುರೋಪ್‌ ರಾಷ್ಟ್ರಗಳಲ್ಲಿ ದಿಢೀರ್ ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಸಾಗಿದೆ.

ಕೊವಿಡ್ 19 ಅಂಕಿ ಅಂಶ: 3 ಕೋಟಿ ಸೋಂಕಿತರು, 2.2 ಕೋಟಿ ಚೇತರಿಕೆಕೊವಿಡ್ 19 ಅಂಕಿ ಅಂಶ: 3 ಕೋಟಿ ಸೋಂಕಿತರು, 2.2 ಕೋಟಿ ಚೇತರಿಕೆ

ಕಳೆದ ಮೇ, ಜೂನ್, ಜುಲೈನಲ್ಲಿ ಕೊರೊನಾ ಯುರೋಪ್‌ನಲ್ಲಿ ಅಕ್ಷರಶಃ ರುದ್ರತಾಂಡವ ಆಡಿತ್ತು. ಈಗ ಮತ್ತೆ ಅಂತಹದ್ದೇ ಸ್ಥಿತಿ ಎದುರಾಗಲಿದೆ ಎನ್ನಲಾಗುತ್ತಿದೆ. ಅದರಲ್ಲೂ ಸ್ಪೇನ್, ಫ್ರಾನ್ಸ್, ಬ್ರಿಟನ್, ಇಟಲಿ, ಜರ್ಮನಿ ದೇಶಗಳು ಅಕ್ಷರಶಃ ನಲುಗಿ ಹೋಗಿದ್ದವು. ಸ್ಪೇನ್‌ನಲ್ಲಿ ಸೋಂಕಿತರು ಹಾದಿ, ಬೀದಿಯಲ್ಲಿ ಸಾಯುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈಗ ಮತ್ತೆ ಅದೇ ರೀತಿ ಸೋಂಕಿತರ ಸಂಖ್ಯೆ ಏರುತ್ತಾ ಸಾಗುತ್ತಿದೆ.

ಒಂದು ದಿನದಲ್ಲಿ ಎಷ್ಟು ಏರಿಕೆ..?

ಒಂದು ದಿನದಲ್ಲಿ ಎಷ್ಟು ಏರಿಕೆ..?

ಗುರುವಾರ ಅಂದರೆ ಸೆಪ್ಟೆಂಬರ್ 17ರ ಲೆಕ್ಕಾಚಾರವನ್ನೇ ನೋಡುವುದಾದರೆ ಸ್ಪೇನ್‌ನಲ್ಲಿ 11,291 ಹೊಸ ಕೇಸ್‌ಗಳು ದಾಖಲಾಗಿವೆ. ಹಾಗೇ ಫ್ರಾನ್ಸ್‌ನಲ್ಲಿ 10,593 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಬ್ರಿಟನ್ ಕೂಡ ಮೆಲ್ಲಗೆ ಕೊರೊನಾ ಕೂಪಕ್ಕೆ ಜಾರುತ್ತಿದ್ದು, ಗುರುವಾರ 3,395 ಹೊಸ ಪ್ರಕರಣಗಳು ದಾಖಲಾಗಿವೆ. ಇಟಲಿಯಲ್ಲಿ 1,585 ಹಾಗೂ ಜರ್ಮನಿಯಲ್ಲಿ 2,177 ಹೊಸ ಕೊರೊನಾ ಕೇಸ್‌ಗಳು ಕನ್ಫರ್ಮ್ ಆಗಿವೆ. ಈ ಅಂಕಿ-ಅಂಶದ ಆಧಾರದಲ್ಲಿ ಹೇಳುವುದಾದರೆ ಯುರೋಪ್ ನಿಧಾನವಾಗಿ ಹಿಂದಿನ ಪರಿಸ್ಥಿತಿಗೆ ಮರಳುತ್ತಿದ್ದು, ಅಪಾಯದ ಮುನ್ಸೂಚನೆ ಸಿಕ್ಕಿದೆ.

ಗ್ರಾಫಿಕ್ಸ್ ಪಾಯಿಂಟ್ಸ್ ಹೆಡ್: ಯುರೋಪ್‌ನಲ್ಲಿ ಕೊರೊನಾ ಬಿರುಗಾಳಿ

ಗ್ರಾಫಿಕ್ಸ್ ಪಾಯಿಂಟ್ಸ್ ಹೆಡ್: ಯುರೋಪ್‌ನಲ್ಲಿ ಕೊರೊನಾ ಬಿರುಗಾಳಿ

(ವಿ.ಸೂ. ಸೆಪ್ಟೆಂಬರ್ 17ರವರೆಗಿನ ಅಂಕಿ-ಅಂಶ)

ದೇಶ ಒಟ್ಟು ಪ್ರಕರಣ ಹೊಸ ಪ್ರಕರಣ ಒಟ್ಟು ಸಾವು
ರಷ್ಯಾ 10,85,281 5,762 19,061
ಸ್ಪೇನ್ 6,25,651 11,291 30,405
ಫ್ರಾನ್ಸ್ 4,15,481 10,593 31,095
ಬ್ರಿಟನ್ 3,81,614 3,395 41,705
ಇಟಲಿ 2,93,025 1,585 35,658
ಜರ್ಮನಿ 2,69,042 2,177 9,457
ಫ್ರಾನ್ಸ್‌ನಲ್ಲಿ ಐಸಿಯು ಬೆಡ್‌ಗಳಿಗೆ ಹಾಹಾಕಾರ..!

ಫ್ರಾನ್ಸ್‌ನಲ್ಲಿ ಐಸಿಯು ಬೆಡ್‌ಗಳಿಗೆ ಹಾಹಾಕಾರ..!

ಸದ್ಯದ ಸಂಕಷ್ಟಕ್ಕೆ ಕೈಗನ್ನಡಿ ಎಂಬಂತೆ, ಫ್ರಾನ್ಸ್‌ನಲ್ಲಿ ಐಸಿಯು ಬೆಡ್‌ಗಳಿಗೆ ಹಾಹಾಕಾರ ಎದುರಾಗಿದೆ. ಅಲ್ಲಿನ ಬಹುತೇಕ ಐಸಿಯು ಬೆಡ್‌ಗಳು ಕೊರೊನಾ ಸೋಂಕಿತರಿಂದ ತುಂಬಿ ಹೋಗಿವೆ. ಇನ್ನೇನು ಅಲ್ಲಿ ಚಳಿ ಆರಂಭ ಆಗಬೇಕಿದ್ದು, ಫ್ರಾನ್ಸ್ ಸರ್ಕಾರವನ್ನು ನಡುಗುವಂತೆ ಮಾಡಿದೆ. ಸ್ಪೇನ್ ಸ್ಥಿತಿಯೂ ಇದೇ ಆಗಿದೆ. ಈಗಾಗಲೇ ಆರ್ಥಿಕ ಸಂಕಷ್ಟದಿಂದ ನಲುಗಿ ಹೋಗಿರುವ ಯುರೋಪ್‌ ದೇಶಗಳಿಗೆ ಮತ್ತೆ ಕಂಟಕ ಎದುರಾಗಿದೆ. ಆದರೆ ಈ ಬಾರಿ ಆ ಸಂಕಷ್ಟವನ್ನು ಎದುರಿಸುವುದು ಹೇಗೆ ಎಂಬುದೇ ಯುರೋಪ್ ರಾಷ್ಟ್ರಗಳಿಗೆ ಚಿಂತೆಯಾಗಿದೆ.

ಅತಿ ಹೆಚ್ಚು ಮೃತಪಟ್ಟವರ ಟಾಪ್ 10 ದೇಶ

ಅತಿ ಹೆಚ್ಚು ಮೃತಪಟ್ಟವರ ಟಾಪ್ 10 ದೇಶ

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 202,237
ಬ್ರೆಜಿಲ್: 135,031
ಭಾರತ: 84,434
ಮೆಕ್ಸಿಕೋ: 72,179
ಯುಕೆ: 41,705
ಇಟಲಿ: 35,658
ಸ್ಪೇನ್: 30,405
ಪೆರು: 31,146
ಫ್ರಾನ್ಸ್: 31,095
ಇರಾನ್: 23,952

Recommended Video

ವೈದ್ಯರು Reveal ಮಾಡ್ತಾರೆ Sushanth ಸಾವಿನ ರಹಸ್ಯ!!! | Oneindia Kannada

English summary
WHO Warns The Europe About Alarming Virus Transmission Rates. There is major rise in daily wise cases of Spain, France, UK, Italy And Germany.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X