ಯುರೋಪ್‌ನಲ್ಲಿ ಕೊರೊನಾ ಪ್ರಕರಣಗಳ ಏರಿಕೆ ಬಗ್ಗೆ WHO ಕಳವಳ

ಕೋಪನ್ಹೆಗನ್, ನವೆಂಬರ್ 04: ಯುರೋಪ್‌ನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ಮುಖ್ಯಸ್ಥ ಹ್ಯಾನ್ಸ್‌ ಕ್ಲೂ ಮಾತನಾಡಿ, ಯುರೋಪ್‌ನ 53 ದೇಶಗಳಲ್ಲಿ ಪ್ರಸ್ತುತ ಕೋವಿಡ್‌ನ ಪ್ರಸರಣದ ವೇಗವು ತೀವ್ರ ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ.

ಫೆಬ್ರವರಿ ವೇಳೆಗೆ ಯುರೋಪ್‌ನಲ್ಲಿ ಐದು ಲಕ್ಷ ಮಂದಿ ಕೊರೊನಾಗೆ ಬಲಿಯಾಗಬಹುದು ಎಂದು ಅವರು ಅಂದಾಜಿಸಿದ್ದಾರೆ.

WHO Europe Head Says Europe Faces Real Threat Of COVID-19 Resurgence

ದಾಖಲೆ ಮಟ್ಟದಲ್ಲಿ ಕೋವಿಡ್ ಪ್ರಕರಣಗಳು ಏರುತ್ತಿವೆ. ಕೊರೊನಾ ವೈರಸ್‌ನ ರೂಪಾಂತರ ಮಾದರಿಯಾದ ಡೆಲ್ಟಾದಿಂದ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.

ಕೋವಿಡ್(COVID)​ ಆರ್ಭಟ ತಣ್ಣಗಾಗಿದೆ ಎಂದು ಜನರು ನಿಟ್ಟುಸಿರು ಬಿಡುತ್ತಿರುವ ವೇಳೆಗೆ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಕೊರೊನಾ ವೈರಸ್​ನ ಡೆಲ್ಟಾ ರೂಪಾಂತರದ ಹೊಸ ತಳಿ 'AY.4.2' ಇಂಗ್ಲೆಂಡ್​​ನಲ್ಲಿ ಪತ್ತೆಯಾಗಿದೆ ಎಂದು ಬ್ರಿಟನ್​ ಆರೋಗ್ಯ ಇಲಾಖೆ ತಿಳಿಸಿದೆ.

AY.4.2 - ಇದನ್ನು 'ಡೆಲ್ಟಾ ಪ್ಲಸ್'​ ಎಂದು ಕರೆಯಲಾಗುತ್ತಿದ್ದು, ಡೆಲ್ಟಾ ರೂಪಾಂತರಕ್ಕಿಂತಲೂ ಕೊರೊನಾ ವೈರಸ್​ ಹರಡುವ ಪ್ರಬಲ ತಳಿ ಎಂಬುದಕ್ಕೆ ಇನ್ನೂ ಯಾವುದೇ ಪುರಾವೆ ಇಲ್ಲ. ಆದರೆ ಇದು ವೇಗವಾಗಿ ಹರಡುತ್ತಿರುವುದರಿಂದ ಏಷ್ಯಾ, ಯುರೋಪ್​ನ ಅನೇಕ ರಾಷ್ಟ್ರಗಳಲ್ಲಿ ಕೋವಿಡ್​ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗ್ತಿದೆ.

ಈ ಹೊಸ ತಳಿಯು ಎಷ್ಟು ಅಪಾಯಕಾರಿಯಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೂ, ಇದು ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳಂತಹ ದೊಡ್ಡ ರೀತಿಯ ಅಪಾಯಕಾರಿ ತಳಿಯಾಗಿ ಹೊರಹೊಮ್ಮುವ ಸಾಧ್ಯತೆಯಿಲ್ಲ. ಪ್ರಸ್ತುತ ಬಹಳಷ್ಟು ಜನರು ಲಸಿಕೆ ಪಡೆದಿರುವುದದಿಂದ AY.4.2 ವಿರುದ್ಧ ಹೋರಾಡಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಮೂರು ತಿಂಗಳ ಬಳಿಕ ಸೋಂಕಿತರ ಸಂಖ್ಯೆ ಶೇ.14ರಷ್ಟು ಏರಿಕೆಯಾಗಿದೆ. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಯುಕೆ ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಅವರ ವಕ್ತಾರರು ಮಾಹಿತಿ ನೀಡಿದ್ದಾರೆ.

ಮೂಗು ತುರಿಕೆ ಅಥವಾ ಮೂಗಿನಲ್ಲಿ ಕಿರಿಕಿರಿ ಉಂಟಾಗುವುದು ಡೆಲ್ಟಾ ಪ್ರಬೇಧದ ಕೊರೊನಾದ ಮುಖ್ಯ ಲಕ್ಷಣ ಆಗಿರಬಹುದು. ಈ ಮೊದಲು ಸಾಮಾನ್ಯ ಎನಿಸಿಕೊಂಡಿದ್ದ ವಾಸನೆ ಇಲ್ಲವಾಗುವ ಲಕ್ಷಣ, ಡೆಲ್ಟಾ ರೂಪಾಂತರಿ ಕೊರೊನಾದಲ್ಲಿ ಕಾಣಿಸುವುದು ವಿರಳ. ಡೆಲ್ಟಾ ರೂಪಾಂತರಿ ಕೊರೊನಾ ವೈರಸ್ ಮುಖ್ಯ ಲಕ್ಷಣಗಳೇನು?

-ತಲೆನೋವು
-ಗಂಟಲು ನೋವು
-ಮೂಗು ಉರಿ, ಮೂಗಿನಲ್ಲಿ ಕಿರಿಕಿರಿ
-ಜ್ವರ
-ಕೆಮ್ಮು ಮತ್ತು ಕಫ

ರೋಗ ಲಕ್ಷಣದಲ್ಲಿ ಬದಲಾವಣೆ ಕಂಡುಬಂದದ್ದು ಏಕೆ?
ರೋಗಲಕ್ಷಣಗಳ ಈ ಬದಲಾವಣೆಯ ಹಿಂದೆ ಹಲವು ಸಾಧ್ಯತೆಗಳನ್ನು ಅಂದಾಜಿಸಲಾಗಿದೆ. ವೈರಸ್​ನ ರೂಪಾಂತರ, ಬೆಳವಣಿಗೆ, ಮನುಷ್ಯರ ರೋಗನಿರೋಧಕ ಶಕ್ತಿ ಇತ್ಯಾದಿಗಳು ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಭಾರತದಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಬಹಳ ಸಂಕಷ್ಟ ಸೃಷ್ಟಿಮಾಡಿದ್ದ ಕೊರೊನಾ ಎರಡನೇ ಅಲೆ ಹಾಗೂ ಡೆಲ್ಟಾ ರೂಪಾಂತರಿ ವೈರಸ್, ದೇಶದ 174 ಜಿಲ್ಲೆಗಳಲ್ಲಿ ಕಂಡುಬಂದಿತ್ತು. ಆ ಬಳಿಕ, ಇದೀಗ ಡೆಲ್ಟಾದ ರೂಪಾಂತರಿ ಡೆಲ್ಟಾ ಪ್ಲಸ್ ವೈರಾಣು ಪತ್ತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+