ಭಾರತ - ಕೆನಡಾ ಸಂಬಂಧ ಹಾಳಾಗಲು ಕಾರಣವೇನು, ಭಾರತ ವಿರೋಧಿಸುತ್ತಿರುವುದೇಕೆ
India & Canada: ವಿಶ್ವದ ವಿವಿಧ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಇತ್ತ ಭಾರತ ಹಾಗೂ ಕೆನಡಾದ ನಡುವೆ ಸಂಬಂಧ ದಿನದಿಂದ ದಿನಕ್ಕೆ ಹಳಸುತ್ತಿದೆ. ಭಾರತ ಮತ್ತು ಕೆನಡಾದ ನಡುವೆ ಸಂಬಂಧ ಹಾಳಾಗುತ್ತಿರುವುದರಿಂದ ಕೇವಲ ವಿದೇಶಾಂಗ ನೀತಿಯ ಮೇಲಷ್ಟೇ ಅಲ್ಲ ಆಂತರಿಕವಾಗಿಯೂ ಕೆಲವು ಆತಂಕಗಳು ಇವೆ. ಮುಖ್ಯವಾಗಿ ಅವು ಖಾಲಿಸ್ತಾನಿ ಪ್ರತ್ಯೇಕವಾದದ ಬಗ್ಗೆ. ಅಲ್ಲದೇ ಕೆನಡಾದಲ್ಲಿ ಉದ್ಯೋಗದಲ್ಲಿರುವ ಲಕ್ಷಾಂತರ ಜನ ಭಾರತೀಯರು ಸಹ ಆತಂಕದಲ್ಲಿ ಇದ್ದಾರೆ.
ಕೆನಡಾದಲ್ಲಿ ಖಾಲಿಸ್ತಾನಿ ಬೆಂಬಲಿಗರ ಪ್ರತಿಭಟನೆಗಳು ಕಳೆದ ಕೆಲವು ವರ್ಷಗಳಿಂದ ತೀವ್ರ ಸ್ವರೂಪದಲ್ಲಿ ನಡೆಯುತ್ತಿವೆ. ಈ ರೀತಿ ಪ್ರತಿಭಟನೆ ನಡೆಯುವಾಗ ಭಾರತದ ಧ್ವಜವನ್ನು ಅವಮಾನಿಸುವುದು ಹಾಗೂ ಭಾರತದ ದಿವಂಗತ ಹಾಗೂ ಪ್ರಮುಖ ನಾಯಕರಿಗೆ ಅವಮಾನ ಮಾಡುವ ಪ್ರಸಂಗಗಳು ಸಹ ನಡೆದಿವೆ. ಈ ರೀತಿಯ ಘಟನೆಗಳಿಗೆ ಭಾರತವು ತನ್ನ ವಿರೋಧವನ್ನು ನಿರಂತರವಾಗಿ ದಾಖಲಿಸಿಕೊಂಡೇ ಬಂದಿದೆ.

ಕೆನಡಾದಲ್ಲಿ ಖಾಲಿಸ್ತಾನಿ ಬೆಂಬಲಿಗರ ಪ್ರತಿಭಟನೆ ಇತ್ತೀಚೆಗೆ ವಿವಾದ ಸ್ವರೂಪವನ್ನು ಪಡೆದುಕೊಂಡಿತ್ತು. ಮಾಜಿ ಪ್ರಧಾನಿ, ದಿವಂಗತ ಇಂದಿರಾ ಗಾಂಧಿ ಅವರ ಹತ್ಯೆಯ ಸ್ತಬ್ಧಚಿತ್ರವನ್ನು ಮೆರವಣಿಗೆ ಮಾಡಲಾಗಿತ್ತು. ಖಾಲಿಸ್ತಾನಿ ಬೆಂಬಲಿಗರ ಈ ವಿಕೃತ ಪ್ರತಿಭಟನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ತೀವ್ರವಾಗಿ ವಿರೋಧಿಸಿತ್ತು. ಕೆನಡಾದಲ್ಲಿ ಈ ರೀತಿಯ ಪ್ರತಿಭಟನೆಗಳು ನಡೆಯುತ್ತಿದ್ದರೂ ಕೆನಡಾ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳದೆ ಇರುವ ಬಗ್ಗೆಯೂ ಭಾರತಕ್ಕೆ ಅಸಮಾಧಾನ ಇದೆ.
ಖಾಲಿಸ್ತಾನದ ಪ್ರತ್ಯೇಕವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಹಾಗೂ ಕೆನಡಾದ ನಡುವೆ ವಿದೇಶಾಂಗ ನೀತಿಯಲ್ಲಿ ಬಿರುಕು ಮೂಡಿದೆ. ಈ ಹತ್ಯೆಯಲ್ಲಿ ಭಾರತದ ಏಜೆಂಟ್‌ಗಳ ಪಾತ್ರವಿರುವುದಾಗಿ ಕೆನಡಾ ಆರೋಪಿಸಿತ್ತು. ಇದಕ್ಕೆ ಭಾರತವು ತನ್ನ ವಿರೋಧವನ್ನು ದಾಖಲಿಸಿತ್ತು. ಈ ಪ್ರಕರಣ ಇತ್ತೀಚಿನ ಬೆಳವಣಿಗೆ ಕೆನಡಾ ಹಾಗೂ ಭಾರತದ ನಡುವೆ ಇತ್ತೀಚಿನ ವರ್ಷಗಳಲ್ಲಿನ ಸಂಬಂಧ ಹೇಳಿಕೊಳ್ಳುವಂತಿಲ್ಲ. ಅದಕ್ಕೆ ಖಾಲಿಸ್ತಾನದ ಹೋರಾಟವೂ ಕಾರಣ.
ಖಾಲಿಸ್ತಾನ ಹೋರಾಟ ಎನ್ನುವುದು ಭಾರತದ ಮಟ್ಟಿಗೆ ಎಂದಿಗೂ ಕರಾಳ ರಕ್ತಚರಿತ್ರೆಯೇ ಸರಿ. ಈ ಹೋರಾಟದಿಂದ ಭಾರತದಲ್ಲಿ ಭಾರೀ ಅನಾಹುತಗಳು, ಮಾರಣ ಹೋಮಗಳೇ ಸಂಭವಿಸಿವೆ. ಇಂದಿಗೂ ಈ ವಿಷಯ ಭಾರತಕ್ಕೆ ಮಗ್ಗಲು ಮುಳ್ಳು ಎಂದೇ ವಿಶ್ಲೇಷಿಸಲಾಗುತ್ತದೆ.
ಇನ್ನು ಕೆನಡಾದಲ್ಲಿದ್ದಾರೆ ಸಿಖ್ ಸಮುದಾಯಕ್ಕೆ ಸೇರಿದ 770,000 ಜನ ಇದ್ದಾರೆ.ಭಾರತವು 1974ರಲ್ಲಿ ಪರಮಾಣು ಪರೀಕ್ಷೆ ಮಾಡಿದ ಸಂದರ್ಭದಲ್ಲೇ ಕೆನಡಾ ಭಾರತದ ನಿರ್ಣಯವನ್ನು ವಿರೋಧಿಸಿತ್ತು. ಎರಡು ರಾಷ್ಟ್ರಗಳ ನಡುವಿನ ಸಂಬಂಧ ಆಗ ತಟಸ್ಥವಾಗಿತ್ತು. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಕೆನಡಾ ಸರ್ಕಾರ ಮಾಡಿದ ಆರೋಪದ ನಂತರ ಪರಿಸ್ಥಿತಿ ಬಿಗಡಾಯಿಸಿದೆ. ಇನ್ನು ಕೆನಡಾದಲ್ಲಿ ಖಲಿಸ್ತಾಲಿ ಹಾಗೂ ಸಿಖ್ ಪ್ರತ್ಯೇಕವಾದಿಗಳ ಹೋರಾಟ, ಪ್ರತಿಭಟನೆಗಳು ನಡೆಯುತ್ತಲ್ಲೇ ಇವೆ.
ಭಾರತದ ಪಂಜಾಬ್ ರಾಜ್ಯವನ್ನು ಹೊರತುಪಡಿಸಿದರೆ, ಅತಿ ಹೆಚ್ಚು ಸಿಖ್ ಸಮುದಾಯದವರು ಕೆನಡಾದಲ್ಲಿ ನೆಲೆಸಿದ್ದಾರೆ. ಭಾರತದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಸಹ ಕೆನಡಾದಲ್ಲಿ ಇದ್ದಾರೆ. ಇನ್ನು 1980 ಹಾಗೂ 90ರ ದಶಕದ ಆರಂಭದಲ್ಲಿ ಸಿಖ್ ಪ್ರತ್ಯೇಕತಾವಾದ ಶುರುವಾಗಿತ್ತು. ಆದರೆ, ಕೆನಡಾದಲ್ಲಿ ನಡೆಯುತ್ತಿರುವ ಖಲಿಸ್ತಾನ್ ಪರ ಹೋರಾಟವನ್ನು ತಡೆಯುವಲ್ಲಿ ಅಲ್ಲಿನ ಸರ್ಕಾರ ವಿಫಲವಾಗಿದೆ ಎಂದು ಭಾರತ ಸರ್ಕಾರ ಹೇಳುತ್ತಲ್ಲೇ ಬಂದಿದೆ.












Click it and Unblock the Notifications