ಯುಎಸ್ ಅಧ್ಯಕ್ಷರಾಗಿ ಸಿಗುವ ಸಂಬಳವನ್ನು ಟ್ರಂಪ್ ಮುಟ್ಟಲ್ವಂತೆ

Posted By:
Subscribe to Oneindia Kannada

ನ್ಯೂಯಾರ್ಕ್, ನವೆಂಬರ್ 14: ಅಮೆರಿಕದ ಅಧ್ಯಕ್ಷರಾಗಿ ಉದ್ಯಮಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ವಹಿಸಿಕೊಂಡ ಮೇಲೆ ಒಂದು ದಿನಕ್ಕೆ ಎಷ್ಟು ಸಂಬಳ ಪಡೆಯಬಹುದು? ಅಮೆರಿಕ ಅಧ್ಯಕ್ಷರ ವಾರ್ಷಿಕ ಸಂಬಳ ಎಷ್ಟಿದೆ? ಟ್ರಂಪ್ ಅವರು ಈ ಸಂಬಳವನ್ನು ಏನು ಮಾಡಲಿದ್ದಾರೆ? ಎಂಬ ಕುತೂಹಲದ ಪ್ರಶ್ನೆಗೆ ಇಲ್ಲಿದೆ ಉತ್ತರ.

ಡೊನಾಲ್ಡ್ ಟ್ರಂಪ್ ಅವರು ಯುಎಸ್ ಅಧ್ಯಕ್ಷರಾಗಿ ಸಿಗುವ ಸಂಬಳವನ್ನು ಮುಟ್ಟುವುದಿಲ್ಲವಂತೆ. ಲಕ್ಷ ಲಕ್ಷ ಡಾಲರ್ ಸಂಬಳ ಬಂದರೂ ಒಂದು ಡಾಲರ್ ಕೂಡಾ ಪಡೆಯುವುದಿಲ್ಲ ಎಂಬ ಮಾಹಿತಿ ಬಂದಿದೆ. ಕೋಟ್ಯಧಿಪತಿ ಟ್ರಂಪ್ ಗೆ ತಿಂಗಳ ಸಂಬಳ ಅಗತ್ಯವಿಲ್ಲ ಬಿಡಿ. ಆದರೂ ಸಂಬಳ ಪಡೆಯುವುದಿಲ್ಲ ಎನ್ನುವುದು ಹೊಸ ಘೋಷಣೆಯಲ್ಲ.[WWE ದಿಗ್ಗಜ ಅಮೆರಿಕದ ನೂತನ ಅಧ್ಯಕ್ಷ ಟ್ರಂಪ್]

ಸೆಪ್ಟೆಂಬರ್ 2015ರಲ್ಲಿ ನ್ಯೂ ಹಾಂಪ್ ಶೈರ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ "The first thing I'm going to do is tell you that if I'm elected president, I'm accepting no salary, okay? That's not a big deal for me." ಎಂದು ಘೋಷಿಸಿದರು.[ಡೊನಾಲ್ಡ್ ಟ್ರಂಪ್ ವ್ಯಕ್ತಿಚಿತ್ರ]

ಅಧ್ಯಕ್ಷರ ಪೈಕಿ ಡೊನಾಲ್ಡ್ ಟ್ರಂಪ್ ಮೊದಲಿಗರಲ್ಲ

ಅಧ್ಯಕ್ಷರ ಪೈಕಿ ಡೊನಾಲ್ಡ್ ಟ್ರಂಪ್ ಮೊದಲಿಗರಲ್ಲ

ಆದರೆ, ಈ ಐತಿಹಾಸಿಕ ನಿರ್ಧಾರ ಕೈಗೊಂಡ ಅಮೆರಿಕ ಅಧ್ಯಕ್ಷರ ಪೈಕಿ ಡೊನಾಲ್ಡ್ ಟ್ರಂಪ್ ಮೊದಲಿಗರಲ್ಲ. ಟ್ರಂಪ್ ಅವರಿಗಿಂತ ಮೊದಲು ಹರ್ಬಟ್ ಹೂವರ್ ಹಾಗೂ ಜಾನ್ ಎಫ್ ಕೆನಡಿ ಅವರು ತಮಗೆ ಸಿಗುತ್ತಿದ್ದ ಸಂಬಳವನ್ನು ಪೂರ್ತಿಯಾಗಿ ದಾನ ಧರ್ಮಕ್ಕೆ ವಿನಿಯೋಗಿಸಿದ್ದರು.

ಟ್ರಂಪ್ ಸುಳ್ಳು ಹೇಳುವುದರಲ್ಲೂ ಎತ್ತಿದ್ದ ಕೈ

ಟ್ರಂಪ್ ಸುಳ್ಳು ಹೇಳುವುದರಲ್ಲೂ ಎತ್ತಿದ್ದ ಕೈ

ರಿಪಬ್ಲಿಕನ್ ಟ್ರಂಪ್ ಈಗ ನಿಯೋಜಿತ ಅಧ್ಯಕ್ಷರಾಗಿದ್ದಾರೆ, ಸೆಪ್ಟೆಂಬರ್ 2015ರಲ್ಲಿ ನೀಡಿದ್ದ ಘೋಷಣೆ ಬಗ್ಗೆ ಸಾಮಾಜಿಕ ಜಾಲ ತಾಣಗಳು, ಸುದ್ದಿ ವಾಹಿನಿ, ವೆಬ್ ಸೈಟ್ ಗಳು ಅವರ ಗಮನ ಸೆಳೆಯುತ್ತಿವೆ. ಆದರೆ, ಇನ್ನೂ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಆಪ್ತ ವಲಯದ ಪ್ರಕಾರ ಟ್ರಂಪ್ ಅವರು ಸಂಬಳ ಪಡೆದರೂ ಅದನ್ನು ಸಾಮಾಜಿಕ ಕಳಕಳಿ ಕಾರ್ಯಕ್ರಮಗಳಿಗೆ ವಿನಿಯೋಗಿಸಲಿದ್ದಾರೆ. ಆದರೆ, ಟ್ರಂಪ್ ಸುಳ್ಳು ಹೇಳುವುದರಲ್ಲೂ ಎತ್ತಿದ್ದ ಕೈ.

ಟ್ರಂಪ್ ಆಸ್ತಿ ಗಳಿಕೆ ಎಷ್ಟಿದೆ

ಟ್ರಂಪ್ ಆಸ್ತಿ ಗಳಿಕೆ ಎಷ್ಟಿದೆ

ಫೋರ್ಬ್ಸ್ ನೀಡಿದ ಮಾಹಿತಿಯಂತೆ ಟ್ರಂಪ್ ಅವರ ಅಂದಾಜು ನಿವ್ವಳ ಆದಾಯ 3.7 ಬಿಲಿಯನ್ ಡಾಲರ್ ನಷ್ಟಿದೆ. ಆದರೆ, ಎಲ್ಲ ಒಟ್ಟು ಮಾಡಿದರೆ ಟ್ರಂಪ್ 7.6 ಬಿಲಿಯನ್ ಪೌಂಡ್ ಗೂ ಅಧಿಕ ಎನ್ನಲಾಗಿದೆ.

ಅಧ್ಯಕ್ಷರ ಸಂಬಳ ವಿವರ

ಅಧ್ಯಕ್ಷರ ಸಂಬಳ ವಿವರ

ವಾರ್ಷಿಕ ಸಂಬಳ 400,000 ಯುಎಸ್ ಡಾಲರ್
ಪ್ರತಿ ತಿಂಗಳು 22,52,000 ರೂಪಾಯಿ
ಪ್ರತಿ ದಿನ 74,038.35 ರೂಪಾಯಿ
ಮಾಹಿತಿ ಕೃಪೆ: Scoopwhoop.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
How much Donald Trump as American President will be earing per Day? what is th annual salary of POTUS. What will Donald Trump do with salary.
Please Wait while comments are loading...