ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪನಾಮಾ ಪೇಪರ್ಸ್ ಹಗರಣ ಅಂದರೆ ಏನು, ಎತ್ತ?

|
Google Oneindia Kannada News

ಪನಾಮ ಪೇಪರ್ಸ್ ನ ಬಹಿರಂಗಗೊಳಿಸಿದ್ದ ಅವ್ಯವಹಾರದಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ತಲೆದಂಡಕ್ಕೆ ಅಲ್ಲಿನ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ. ಏನಿದು ಪನಾಮ ಪೇಪರ್ಸ್ ಎಂಬ ಪ್ರಶ್ನೆ ಮತ್ತೆ ತಲೆ ಎತ್ತಿದೆ.

ಮೊಸಾಕ್ ಫೋನ್ಸೆಕಾ ಎಂಬ ಕಾನೂನು ಸಂಸ್ಥೆಯು ಜಗತ್ತಿನ ನಾಲ್ಕನೇ ಅತಿ ದೊಡ್ಡ ಸಂಸ್ಥೆ. ಅದು ಬಹಿರಂಗ ಪಡಿಸಿದ್ದು ಹನ್ನೊಂದೂವರೆ ಮಿಲಿಯನ್ ನಷ್ಟು ಅವ್ಯವಹಾರದ ದಾಖಲೆಗಳು. ಅವೇ ಪನಾಮ ಪೇಪರ್ಸ್. ಈ ಎಲ್ಲ ದಾಖಲೆಗಳನ್ನು ಅಪರಿಚಿತ ಮೂಲಗಳಿಂದ ಜರ್ಮನ್ ನ ಪತ್ರಿಕೆಯೊಂದು ಪಡೆಯಿತು.

ಸುಪ್ರೀಂ ಸೂಚನೆ: ಪ್ರಧಾನಿ ಪಟ್ಟಕ್ಕೆ ರಾಜಿನಾಮೆ ಸಲ್ಲಿಸಿದ ನವಾಜ್ ಷರೀಫ್ಸುಪ್ರೀಂ ಸೂಚನೆ: ಪ್ರಧಾನಿ ಪಟ್ಟಕ್ಕೆ ರಾಜಿನಾಮೆ ಸಲ್ಲಿಸಿದ ನವಾಜ್ ಷರೀಫ್

ಆ ನಂತರ ಅಂತರರಾಷ್ಟ್ರೀಯ ಮಟ್ಟದ ತನಿಖಾ ಪತ್ರಕರ್ತರ ಒಕ್ಕೂಟದ ಜತೆಗೆ ಹಂಚಿಕೊಂಡಿತು. ಆ ಒಕ್ಕೂಟವು ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಜತೆಗೆ ಮಾಹಿತಿಯನ್ನು ಹಂಚಿಕೊಂಡಿತು. ಅಂದಹಾಗೆ ಆ ದಾಖಲೆಗಳಲ್ಲಿ ಏನಿದ್ದವು ಎಂಬುದು ಪ್ರಶ್ನೆ.

ವಿದೇಶಗಳಲ್ಲಿರುವ ತೆರಿಗೆ ಸ್ವರ್ಗಗಳಲ್ಲಿ ಅಕ್ರಮವಾಗಿ ಹೇಗೆ ಹಣ ಹೂಡಿಕೆ ಮಾಡಿದ್ದಾರೆ, ಯಾರ್ಯಾರು ಮಾಡಿದ್ದಾರೆ ಎಂಬೆಲ್ಲ ಮಾಹಿತಿ ಅದರಲ್ಲಿತ್ತು. ನೂರಾ ನಲವತ್ಮೂರು ರಾಜಕಾರಣಿಗಳು, ಅದರಲ್ಲಿ ಹನ್ನೆರಡು ರಾಷ್ಟ್ರೀಯ ನಾಯಕರ ಹೆಸರು ಒಳಗೊಂಡಿದ್ದವು. ಅವರ ಕುಟುಂಬದವರು, ನಿಕಟವರ್ತಿಗಳು ಜಗತ್ತಿನಾದ್ಯಂತ ಇರುವ ತೆರಿಗೆ ಸ್ವರ್ಗ ಎನಿಸಿದ ದೇಶಗಳನ್ನು ಹೇಗೆ ಬಳಕೆ ಮಾಡಿಕೊಂಡಿದ್ದಾರೆ ಎಂಬ ವಿವರಗಳಿದ್ದವು.

ಪ್ರಧಾನಿ, ರಾಷ್ಟ್ರಾಧ್ಯಕ್ಷರ ಸಂಬಂಧಿಗಳ ಹೆಸರಿದ್ದವು

ಪ್ರಧಾನಿ, ರಾಷ್ಟ್ರಾಧ್ಯಕ್ಷರ ಸಂಬಂಧಿಗಳ ಹೆಸರಿದ್ದವು

ಪಾಕ್ ಪ್ರಧಾನಿ ನವಾಜ್ ಷರೀಫ್, ಇರಾಕ್ ನ ಮಾಜಿ ಉಪರಾಷ್ಟ್ರಪತಿ ಅಯಾದ್ ಅಲ್ಲವಿ, ಉಕ್ರೇನ್ ನ ರಾಷ್ಟ್ರಪತಿ ಪೆಟ್ರೋ ಪೊರೊಶೆಂಕೋ, ಈಜಿಪ್ಟ್ ನ ಮಾಜಿ ರಾಷ್ಟ್ರಪತಿಯ ಮಗ ಅಲಾ ಮುಬಾರಕ್, ಐಸ್ ಲ್ಯಾಂಡ್ ನ ಪ್ರಧಾನಿಯ ಹೆಸರು ಕೇಳಿಬಂದು, ಇವರೆಲ್ಲ ವಿದೇಶದಲ್ಲಿನ ತೆರಿಗೆ ಸ್ವರ್ಗಗಳಲ್ಲಿ ಅಕ್ರಮವಾಗಿ ಹಣ ಹೂಡಿರುವುದಾಗಿ ಮಾಹಿತಿ ಹೊರ ಹಾಕಲಾಗಿತ್ತು.

ಮೊಸಾಕ್ ಫೋನ್ಸೆಕಾ ಅಂದರೇನು?

ಮೊಸಾಕ್ ಫೋನ್ಸೆಕಾ ಅಂದರೇನು?

ಇದು ಪನಾಮ ದೇಶದ ಮೂಲದ ಕಾನೂನು ಸಂಸ್ಥೆ. ವಿದೇಶಗಳಲ್ಲಿ ಕಂಪೆನಿ ನೋಂದಣಿ ಮಾಡಿಸುವುದಕ್ಕೆ ಸೇವೆ ಒದಗಿಸುತ್ತದೆ. ವಾರ್ಷಿಕ ಶುಲ್ಕ ಪಡೆದು ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ. ಹಣಕಾಸು ನಿರ್ವಹಣೆ ಸೇವೆಯನ್ನೂ ಜತೆಗೆ ಒದಗಿಸುತ್ತದೆ.

ತೆರಿಗೆ ಸ್ವರ್ಗಗಳು

ತೆರಿಗೆ ಸ್ವರ್ಗಗಳು

ಈ ಸಂಸ್ಥೆಯ ಮೂಲ ಪನಾಮ ದೇಶವಾದರೂ ಜಗತ್ತಿನಾದ್ಯಂತ ಕಾರ್ಯ ನಿರ್ವಹಣೆ ಮಾಡುತ್ತದೆ. ನಲವತ್ತೆರಡು ರಾಷ್ಟ್ರಗಳಲ್ಲಿ ಈ ಸಂಸ್ಥೆಯ ಆರುನೂರು ಮಂದಿ ಕಾರ್ಯ ನಿರ್ವಹಿಸುತ್ತಾರೆ. ಮೊಸಾಕ್ ಫೋನ್ಸೆಕಾ ಸ್ವಿಟ್ಜರ್ ಲೆಂಡ್, ಸೈಪ್ರಸ್, ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ಸೇರಿದಂತೆ ತೆರಿಗೆ ಸ್ವರ್ಗಗಳು ಎನ್ನಿಸಿಕೊಂಡ ನಾನಾ ಕಡೆ ಕಾರ್ಯ ನಿರ್ವಹಿಸುತ್ತದೆ.

ನೋಂದಾಯಿತ ಏಜೆಂಟ್

ನೋಂದಾಯಿತ ಏಜೆಂಟ್

ಎರಡು ಲಕ್ಷಕ್ಕೂ ಅಧಿಕ ಕಂಪೆನಿಗಳಿಗೆ ಮೊಸಾಕ್ ಫೋನ್ಸೆಕಾ ನೋಂದಾಯಿತ ಏಜೆಂಟ್ ಆಗಿತ್ತು. ತಮ್ಮ ವ್ಯವಹಾರಗಳನ್ನು ಮಧ್ಯವರ್ತಿಗಳ ಮೂಲಕ ನಿರ್ವಹಿಸುತ್ತಿದ್ದ ಮಂದಿ, ಸೂಚನೆಗಳನ್ನು ಸಹ ಅವರ ಮೂಲಕವೇ ನೀಡುತ್ತಿದ್ದರು. ಮಾಲೀಕರ ಹೆಸರು ಎಲ್ಲೂ ಹೊರಬರದಂತೆ ನೋಡಿಕೊಳ್ಳುತ್ತಿದ್ದರು.

ವಿಕಿಲೀಕ್ಸ್ ಗಿಂತ ದೊಡ್ಡದು

ವಿಕಿಲೀಕ್ಸ್ ಗಿಂತ ದೊಡ್ಡದು

ಯುನೈಟೆಡ್ ಕಿಂಗ್ ಡಮ್ ಜತೆಗೆ ಬಹುತೇಕ ನಂಟು ಹೊಂದಿದ್ದ ಕಂಪೆನಿಗಳ ಮಾಹಿತಿ ಹೊರಹಾಕಿದೆ ಮೊಸಾಕ್ ಫೋನ್ಸೆಕಾ. ವಿಕಿಲೀಕ್ಸ್ ಹೊರಹಾಕಿದ ಮಾಹಿತಿಗಿಂತ ಅದೆಷ್ಟೋ ಪ್ರಮಾಣದಲ್ಲಿ ದೊಡ್ಡದಾದ ದಾಖಲೆಗಳನ್ನು ಪನಾಮ ಪೇಪರ್ಸ್ ಹೊಂದಿವೆ.

English summary
What is Panama Papers, what it disclosed? Here are the details of Panama papers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X