ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ-ಭಾರತ ನಡುವೆ ನಡೆಯುತ್ತಾ ಯುದ್ಧ: ಇಲ್ಲಿದೆ ಅಸಲಿ ಕಾರಣ!

|
Google Oneindia Kannada News

ಬೀಜಿಂಗ್, ಮೇ.27: ಜಾಗತಿಕ ಮಟ್ಟದಲ್ಲಿ ಪ್ರಾಬಲ್ಯ ಸಾಧಿಸಲು ಹೊರಟಿರುವ ಚೀನಾ ಕೊರೊನಾ ವೈರಸ್ ಮುಖೇನ ಪ್ರಬಲ ರಾಷ್ಟ್ರಗಳನ್ನು ಮಣಿಸಲು ತಂತ್ರ ಹೆಣೆಯಿತಾ ಎಂಬ ಬಗ್ಗೆ ಅಂತಾರಾಷ್ಟ್ರೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.

Recommended Video

ಟಿಕ್‌ಟಾಕ್ ಬ್ಯಾನ್ ಮಾಡಿ , ಮಿತ್ರೋ ಆಪ್ ಬಳಸಿ , ಏನಿದು ಸ್ಟೋರಿ | Oneindia Kannada

ಕೊರೊನಾ ವೈರಸ್ ಎನ್ನುವುದು ಚೀನಾ ಉದ್ದೇಶಪೂರ್ವಕವಾಗಿ ಹರಿಬಿಟ್ಟಿರುವ ವೈರಸ್ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾರಿ ಬಾರಿ ಹೇಳುತ್ತಿದ್ದಾರೆ. ಯುರೋಪಿಯನ್ ರಾಷ್ಟ್ರಗಳು ಚೀನಾದ ವಿರುದ್ಧ ಕಾದು ಕೆಂಡವಾಗಿದೆ.

ಭಾರತದೊಂದಿಗೆ ಯುದ್ಧ ನಡೆಸಲು ಸನ್ನದ್ಧವಾದ ಚೀನಾಭಾರತದೊಂದಿಗೆ ಯುದ್ಧ ನಡೆಸಲು ಸನ್ನದ್ಧವಾದ ಚೀನಾ

ಕೊರೊನಾ ವೈರಸ್ ಸೋಂಕು ನಿಯಂತ್ರಣ ಹಾಗೂ ಔಷಧಿ ಪತ್ತೆಗೆ ಭಾರತವು ವಿಶ್ವದ ಎಲ್ಲ ರಾಷ್ಟ್ರಗಳ ಜೊತೆಗೆ ಚರ್ಚೆ ನಡೆಸುತ್ತಿದೆ. ಇಂಥ ಸಂದರ್ಭದಲ್ಲಿ ಭಾರತದ ಜೊತೆಗೆ ಗಡಿಯಲ್ಲಿ ಕ್ಯಾತೆ ತೆಗೆಯಲು ಚೀನಾ ಕಾಲ್ಕೆರೆದು ನಿಂತಿದೆ. ಡ್ರ್ಯಾಗನ್ ರಾಷ್ಟ್ರದ ಈ ನಡೆಯ ಹಿಂದೆ ಪೂರ್ವನಿಯೋಜಿತ ತಂತ್ರವಿತ್ತಾ, ಭಾರತದ ಮೇಲೆ ಚೀನಾ ಕೆಂಡ ಕಾರುವುದಕ್ಕೆ ಗಡಿ ಸಮಸ್ಯೆಯೊಂದೇ ಕಾರಣವೇ, ಇಷ್ಟುದಿನ ಸೈಲೆಂಟ್ ಆಗಿದ್ದ ಚೀನಾ ಇದೀಗ ದುಷ್ಟತನ ಪ್ರದರ್ಶಿಸಲು ಕಾರಣವೇನು. ಹೀಗೆ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ನೋಡೋಣ.

ಎರಡು ರಾಷ್ಟ್ರಗಳ ನಡುವಿನಲ್ಲಿ ಸೇನೆಗಳ ನಡುವೆ ಘರ್ಷಣೆ

ಎರಡು ರಾಷ್ಟ್ರಗಳ ನಡುವಿನಲ್ಲಿ ಸೇನೆಗಳ ನಡುವೆ ಘರ್ಷಣೆ

ಭಾರತ ಮತ್ತು ಚೀನಾ ನಡುವಿನ ಗಡಿ ಪ್ರದೇಶಗಳಲ್ಲಿರುವ ಪರಿಸ್ಥಿತಿ ಕುರಿತು ಸ್ಪಷ್ಟನೆ ನೀಡುವುದಕ್ಕೆ ಪ್ರಾಧಿಕಾರಗಳು ನಿರಾಕರಿಸುತ್ತಿವೆ. ಉತ್ತರ ಲಡಾಖ್ ಪ್ರದೇಶ ಹಾಗೂ ಭಾರತದ ಸಿಕ್ಕಿಂ ಮತ್ತು ಚೀನಾದ ಟಿಬೆಟ್ ನಡುವೆ ನಾಕು ಲಾ ಪ್ರದೇಶವು ಸಂಪರ್ಕ ಕಲ್ಪಿಸಲಿದೆ. ಇತ್ತೀಚಿಗೆ ಲಡಾಖ್ ನ ಗಲ್ವಾನಾ ವ್ಯಾಲಿ ಮತ್ತು ಡೆಮ್ಚೊಕ್ ಪ್ರದೇಶಗಳಲ್ಲಿ ಎರಡು ಸೇನೆಗಳ ನಡುವೆ ಘರ್ಷಣೆಗಳು ನಡೆದಿರುವ ಬಗ್ಗೆ ವರದಿಯಾಗಿದೆ.

ಚೀನಾ ತೋರಿದ್ದು ಪ್ರಚೋದನಕಾರಿ ನಡುವಳಿಕೆ

ಚೀನಾ ತೋರಿದ್ದು ಪ್ರಚೋದನಕಾರಿ ನಡುವಳಿಕೆ

ಚೀನಾ ಮತ್ತು ಭಾರತದ ಗಡಿ ಪ್ರದೇಶಗಳಲ್ಲಿ ಚೀನಾ ಹೆಚ್ಚುವರಿ ಸೇನೆಯನ್ನು ನಿಯೋಜನೆ ಮಾಡಿದ್ದು ಎರಡು ರಾಷ್ಟ್ರಗಳ ನಡುವೆ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಪ್ರಚೋದನಕಾರಿ ನಡುವಳಿಕೆಯನ್ನು ಚೀನಾ ಪ್ರದರ್ಶಿಸುತ್ತಿದ್ದು, ಗೊಂದಲಕಾರಿ ಪರಿಸ್ಥಿತಿ ಉಂಟಾಗಿದೆ.

ಮಾಡಿದ್ದುಣ್ಣೋ ಮಹಾರಾಯ: ಚೀನಾಗೂ ಬಿತ್ತು ಕೊರೊನಾ ವೈರಸ್ ಪೆಟ್ಟು!ಮಾಡಿದ್ದುಣ್ಣೋ ಮಹಾರಾಯ: ಚೀನಾಗೂ ಬಿತ್ತು ಕೊರೊನಾ ವೈರಸ್ ಪೆಟ್ಟು!

ಚೀನಾ ಮಾಡಿದ ತಪ್ಪಿಗೆ ಭಾರತದ ಮೇಲೆ ಗೂಬೆ

ಚೀನಾ ಮಾಡಿದ ತಪ್ಪಿಗೆ ಭಾರತದ ಮೇಲೆ ಗೂಬೆ

ಚೀನಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಗಡಿ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಚೀನಾದ ಗಡಿ ಭದ್ರತಾ ಪಡೆಯು ಸಿದ್ಧವಾಗಿದೆ. ಭಾರತ-ಚೀನಾ ಗಡಿಯಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕಿದೆ. ಭಾರತದ ಗಡಿ ಅತಿಕ್ರಮಣ ಮತ್ತು ಗಡಿ ರೇಖೆ ಉಲ್ಲಂಘನೆ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಎಲ್ಲ ರೀತಿಯಲ್ಲೂ ಸನ್ನದ್ಧವಾಗಿರುವಂತೆ ಚೀನಾ ಸರ್ಕಾರವು ಗಡಿಯಲ್ಲಿ ನಿಯೋಜನೆಗೊಂಡಿರುವ ಸೇನಾಪಡೆಗೆ ಸಂದೇಶವನ್ನು ರವಾನಿಸಲಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೊ ಲಿಜಿಯಾನ್ ತಿಳಿಸಿದ್ದಾರೆ.

ಭಾರತ ಕೊಟ್ಟಿದೆ ಚೀನಾಗಕೆ ಉತ್ತರ

ಭಾರತ ಕೊಟ್ಟಿದೆ ಚೀನಾಗಕೆ ಉತ್ತರ

ಚೀನಾ ಗಡಿಯಲ್ಲಿ ಭಾರತವು ಕ್ಯಾತೆ ತೆಗೆಯುತ್ತಿದೆ ಎಂಬ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೊ ಲಿಜಿಯಾನ್ ಆರೋಪಕ್ಕೆ ಭಾರತವೂ ತಕ್ಕ ಉತ್ತರ ಕೊಟ್ಟಿದೆ. ಭಾರತೀಯ ವಿದೇಶಾಂಗ ರಾಯಭಾರಿ ಅನುರಾಗ್ ಶ್ರೀವಾಸ್ತವ್ ಚೀನಾ ಆರೋಪವನ್ನು ತಳ್ಳಿ ಹಾಕಿದ್ದಾರೆ. ಭಾರತವು ಗಡಿ ಪ್ರದೇಶದಲ್ಲಿ ತನ್ನ ಸಾರ್ವಭೌಮತ್ವದ ವ್ಯಾಪ್ತಿಯಲ್ಲಿ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದೆಯೇ ವಿನಃ ಯಾವುದೇ ರೀತಿ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸುವ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿಲ್ಲ ಎಂದು ಅನುರಾಗ್ ಶ್ರೀವಾಸ್ತವ್ ಚೀನಾಗೆ ಉತ್ತರ ಕೊಟ್ಟಿದ್ದಾರೆ.

ಅಮೆರಿಕಾ ವಿರುದ್ಧ 'ಪೊಲಿಟಿಕಲ್ ವೈರಸ್' ಹರಿಬಿಟ್ಟಿತಾ ಚೀನಾ?ಅಮೆರಿಕಾ ವಿರುದ್ಧ 'ಪೊಲಿಟಿಕಲ್ ವೈರಸ್' ಹರಿಬಿಟ್ಟಿತಾ ಚೀನಾ?

1962ರಲ್ಲೇ ನಡೆದಿತ್ತು ಭಾರತ-ಚೀನಾ ಗಡಿ ಸಮರ

1962ರಲ್ಲೇ ನಡೆದಿತ್ತು ಭಾರತ-ಚೀನಾ ಗಡಿ ಸಮರ

ಭಾರತ-ಚೀನಾ ರಾಷ್ಟ್ರಗಳು ಬರೋಬ್ಬರಿ 3,488 ಕಿಲೋ ಮೀಟರ್ ವಿಸ್ತೀರ್ಣದ ಗಡಿಯನ್ನು ಹಂಚಿಕೊಂಡಿವೆ. ಹೀಗಿದ್ದರೂ ಕೆಲವು ಭಾಗಗಳಲ್ಲಿ ನಿರ್ದಿಷ್ಟ ಗಡಿರೇಖೆ ಇಂದಿಗೂ ಅಂತಿಮಗೊಂಡಿಲ್ಲ. ಲಡಾಖ್ ನ ಆಕ್ಸಾಯ್ ಚಿನ್ ಪ್ರದೇಶವು 1962ರಲ್ಲಿ ಚೀನಾ ಮತ್ತು ಭಾರತ ನಡುವಿನ ಸಮರಕ್ಕೆ ಕಾರಣವಾಯಿತು. ಮೆಕ್ ಮೋಹನ್ ರೇಖೆಯನ್ನು ಎರಡು ರಾಷ್ಟ್ರಗಳ ನಡುವಿನ ತಾತ್ಕಾಲಿಕ ಗಡಿಯಾಗಿ ಅಂಗೀಕರಿಸಿದೆ. ಈ ಗಡಿ ರೇಖೆಯು ಹಿಮಾಲಯದ ಪರ್ವತ ಶ್ರೇಣಿ, ಕಣಿವೆ, ಶಿಖರ ಹಾಗೂ ಸರೋವರಗಳ ಮೂಲಕ ಹಾದು ಹೋಗುತ್ತದೆ.

ಅರೆ ಸ್ವಾಯತ್ತ ಕಾಶ್ಮೀರದ ಮೇಲೆ ಭಾರತದ ಹಿಡಿತ

ಅರೆ ಸ್ವಾಯತ್ತ ಕಾಶ್ಮೀರದ ಮೇಲೆ ಭಾರತದ ಹಿಡಿತ

ಚೀನಾ ಮತ್ತು ಭಾರತದ ಗಡಿ ಪ್ರದೇಶದ ವಿಚಾರದಲ್ಲಿ ದಕ್ಷಿಣ ಚೀನಾದ ಸಮುದ್ರದ ಮೇಲೆ ಚೀನಾ ಹಿಡಿತ ಸಾಧಿಸಿದೆ. ಇನ್ನೊಂದಡೆ ಅರೆ ಸ್ವಾಯತ್ತ ಕಾಶ್ಮೀರದ ಮೇಲೆ ಭಾರತವು ಸಂಪೂರ್ಣ ಹಿಡಿತವನ್ನು ಹೊಂದಿದೆ. ಇಸ್ಲಮಾಬಾದ್ ಮತ್ತು ಬೀಜಿಂಗ್ ನಡುವಿನ ಆರ್ಥಿಕ, ರಾಜಕೀಯ ಮತ್ತು ರಕ್ಷಣಾ ಸಂಬಂಧವು ವೃದ್ಧಿಸಿದ್ದು, ನವದೆಹಲಿಯ ಮೇಲೆ ಹೆಚ್ಚುವರಿ ಒತ್ತಡವನ್ನು ಹೇರಿದೆ.

ನೇಪಾಳವನ್ನು ಭಾರತದ ವಿರುದ್ಧ ಎತ್ತಿ ಕಟ್ಟುತ್ತಿದೆಯಾ ಚೀನಾ?

ನೇಪಾಳವನ್ನು ಭಾರತದ ವಿರುದ್ಧ ಎತ್ತಿ ಕಟ್ಟುತ್ತಿದೆಯಾ ಚೀನಾ?

ಲಿಪುಲೇಖ್, ಕಲಪನಿ, ಹಾಗೂ ಲಿಂಪಿಯಾಧುರ ಭೂಪ್ರದೇಶಗಳನ್ನೂ ಒಳಗೊಂಡಂತೆ ನೇಪಾಳ ಹೊಸ ಭೂನಕ್ಷೆ ಬಿಡುಗಡೆ ಮಾಡಿತ್ತು. ಈ ಹೊಸ ಭೂನಕ್ಷೆಯು ಭಾರತ ಮತ್ತು ನೇಪಾಳ ನಡುವಿನ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತ್ತು. ಇನ್ನೊಂದು ಹಂತದಲ್ಲಿ ಸ್ವತಃ ಚೀನಾ ರಾಷ್ಟ್ರವೇ ಭಾರತದ ವಿರುದ್ಧ ನೇಪಾಳವನ್ನು ಎತ್ತಿ ಕಟ್ಟುತ್ತಿದೆಯಾ ಎಂಬ ಶಂಕೆಯನ್ನು ಹುಟ್ಟು ಹಾಕಿತ್ತು.

ಮುಂದಿನ ಅನಾಹುತದ ಸುಳಿವು ಹಿಡಿಯಿತಾ ಚೀನಾ?

ಮುಂದಿನ ಅನಾಹುತದ ಸುಳಿವು ಹಿಡಿಯಿತಾ ಚೀನಾ?

ಕೊರೊನಾ ವೈರಸ್ ಸೋಂಕನ್ನು ವಿಶ್ವಕ್ಕೆ ಹರಡಲು ಡ್ರ್ಯಾಗನ್ ರಾಷ್ಟ್ರ ಚೀನಾ ನೇರ ಕಾರಣ ಎಂದು ವಿಶ್ವದ ದೊಡ್ಡಣ್ಣ ಅಮೆರಿಕಾ ದೂಷಿಸುತ್ತಿದೆ. ಅಮೆರಿಕಾದ ವಾದಕ್ಕೆ ವಿಶ್ವದ ಬಹುತೇಕ ರಾಷ್ಟ್ರಗಳು ಧ್ವನಿಗೂಡಿಸುತ್ತಿವೆ. ತನ್ನ ವಿರುದ್ಧ ಬಲಿಷ್ಠ ರಾಷ್ಟ್ರಗಳು ಸಿಡಿದೇಳುವ ಸುಳಿವು ಚೀನಾಗೆ ಸಿಕ್ಕಿತಾ. ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ಗಡಿಯಲ್ಲಿ ಕಾಲ್ಕೆರೆದು ನಿಲ್ಲಲು ಪ್ರಯತ್ನಿಸುತ್ತಿದೆಯಾ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.

ಚೀನಾದ ನಿದ್ದೆಗೆಡಿಸಿತಾ ಭಾರತ-ಅಮೆರಿಕಾ ನಡುವಿನ ಬಾಂಧವ್ಯ?

ಚೀನಾದ ನಿದ್ದೆಗೆಡಿಸಿತಾ ಭಾರತ-ಅಮೆರಿಕಾ ನಡುವಿನ ಬಾಂಧವ್ಯ?

ಕೊರೊನಾ ವೈರಸ್ ನಿಂದಲೇ ನಲುಗಿರುವ ಅಮೆರಿಕಾ, ಚೀನಾದೊಂದಿಗಿನ ವ್ಯಾಪಾರ-ವಹಿವಾಟಿನ ಸಂಪರ್ಕವನ್ನೆಲ್ಲ ಕಡಿದುಕೊಳ್ಳುವ ತೀರ್ಮಾನಕ್ಕೆ ಬಂದಿದೆ. ಚೀನಾಗೆ ಪರ್ಯಾಯವಾಗಿ ಭಾರತದಲ್ಲಿ ಬೃಹತ್ ಉದ್ಯಮವನ್ನು ಆರಂಭಿಸುವ ಸುಳಿವನ್ನು ಸ್ವತಃ ಅಮೆರಿಕಾ ಮೂಲದ ಬಹುರಾಷ್ಟ್ರೀಯ ಕಂಪನಿಗಳೇ ನೀಡಿದ್ದವು. ಭಾರತ-ಅಮೆರಿಕಾ ನಡುವಿನ ಸಂಬಂಧ ವೃದ್ಧಿ ಚೀನಾದ ಕಣ್ಣು ಕುಕ್ಕಿತಾ ಎಂಬ ಶಂಕೆಯೂ ಇಲ್ಲಿ ಮೂಡುತ್ತಿದೆ.

140 ಬಿಲಿಯನ್ ನಷ್ಟ ಅನುಭವಿಸುತ್ತಾ ಚೀನಾ?

140 ಬಿಲಿಯನ್ ನಷ್ಟ ಅನುಭವಿಸುತ್ತಾ ಚೀನಾ?

ಕೊರೊನಾ ವೈರಸ್ ಅಟ್ಟಹಾಸದಿಂದ ಚೀನಾದಲ್ಲಿ ಆರ್ಥಿಕ ಕೊರತೆ ಎದುರಾಗಿತ್ತು. 30 ವರ್ಷಗಳ ನಂತರದಲ್ಲಿ ಮೊದಲ ಬಾರಿಗೆ ಒಟ್ಟು ದೇಶೀಯ ಉತ್ಪಾದನೆಯ ಗುರಿಯನ್ನು ನಿಗದಿಗೊಳಿಸುವುದನ್ನೇ ಕೈಬಿಟ್ಟಿದೆ. ಕಳೆದ ಆರ್ಥಿಕ ಸಾಲಿಗೆ ಹೋಲಿಸಿದರೆ ಈ ವರ್ಷದಲ್ಲಿ ಚೀನಾ ಜಿಡಿಪಿಯ ಶೇ.3.6ರಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಅದರ ಮೌಲ್ಯ ಬರೋಬ್ಬರಿ 140(1 ಟ್ರಿಲಿಯನ್ ಯುವಾನ್) ಬಿಲಿಯನ್ ಯುಎಸ್ ಡಾಲರ್ ಆಗಿದೆ. ಕೊರೊನಾ ವೈರಸ್ ನಿಂದಾಗಿ ಹಾನಿ ಆಗಿರುವ ಮೂಲಸೌಕರ್ಯಗಳಿಗಾಗಿ ಸರ್ಕಾರ ವಿಶೇಷ ಬಾಂಡ್ ಘೋಷಿಸಿದ್ದು ಹೆಚ್ಚುವರಿಯಾಗಿ 3.75 ಟ್ರಿಲಿಯನ್ ಯುವಾನ್ ನಷ್ಟವಾಗುತ್ತದೆ.

English summary
China-India Tension: Including border issues there are many other points that causing differences between India and China. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X